Saturday, July 27, 2024

Latest Posts

ಕಾರಿನೊಳಗೆ ಸಿಲುಕಿದ್ದ ಇಬ್ಬರು ಮಕ್ಕಳು ಸಾವು..!

- Advertisement -

ಮಹಾರಾಷ್ಟ್ರ: ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿದ್ದ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ.

ನಿನ್ನೆ ಸಂಜೆ ಮನೆ ಎದರು ಆಟವಾಡುತ್ತಿದ್ದ ಮೂವರು ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದರಿಂದ ಗಾಬರಿಗೊಂಡ ಪೋಷಕರು ಕಾಣೆಯಾದ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ರು. ಕೊನೆಗೆ ಮಕ್ಕಳು ಪತ್ತೆಯಾಗದಿದ್ದಾಗ ಬುಲ್ದಾನಾ ಪೊಲೀಸರಿಗೆ ದೂರು ನೀಡಿದ್ರು. ಇನ್ನು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಸಂಬಂಧಿಕರು, ಅಕ್ಕಪಕ್ಕದವರೆನ್ನಾ ವಿಚಾರಣೆ ನಡೆಸಿದ್ರು.

ಬಳಿಕ ಮನೆಯಿಂದ ಸ್ವಲ್ಪ ದೂರವೇ ನಿಲ್ಲಿಸಲಾಗಿದ್ದ ಕಾರಿನೊಳಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ ಮೂವರು ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ಕಾರಿನ ಬಾಗಿಲು ತೆರೆದು ಮಕ್ಕಳನ್ನು ರಕ್ಷಿಸುವುದರೊಳಗೆ ಅಜಿಮ್ ಶೇಖ್(3) ಮತ್ತು ಅದಿಲ್ (5) ಎಂಬ ಪುಟ್ಟ ಮಕ್ಕಳು ಉಸಿರುಗಟ್ಟಿ ಪ್ರಾಣಬಿಟ್ಟಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತೊಂದು 5 ವರ್ಷದ ಮಗು ತೀವ್ರ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿ ತಲುಪಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಎದುರು ಆಟವಾಡುತ್ತಿದ್ದ ಮಕ್ಕಳು ಕಾರಿನ ಬಾಗಿಲು ತೆಗೆದು ಒಳ ಪ್ರವೇಶಿಸಿದ್ದಾರೆ. ಆಟವಾಡುತ್ತಾ ಆಕಸ್ಮಿಕವಾಗಿ ಕಾರಿನ ಬಾಗಿಲು ಮುಚ್ಚಿದ್ದಾರೆ ಎನ್ನಲಾಗಿದೆ. ಇನ್ನು ಕತ್ತಲಾಗುತ್ತಿದ್ದಂತೆ ಕಾರ್ ನಿಲ್ಲಿಸಿದ್ದ ಜಾಗಕ್ಕೆ ಯಾರು ತೆರಳದೇ ಇದ್ದಿದ್ದರಿಂದ ಮೂವರು ಮಕ್ಕಳು ಕಾರಿನಲ್ಲಿ ಸಿಲುಕಿದ್ದು ಯಾರಿಗೂ ತಿಳಿಯಲಿಲ್ಲ ಅಂತ ಹೇಳಲಾಗಿದೆ. ಕಾರಿನೊಳಗೆ ನಿನ್ನೆ ಸಂಜೆಯಿಂದ ಇಂದು ಬೆಳಗಿನಜಾವದ ವರೆಗೂ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ಈ ಕುರಿತು ಪೂಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಚಂದ್ರಗ್ರಹಣ- ಈ ರಾಶಿಯವರು ಎಚ್ಚರವಾಗಿರಿ..!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=5Vw3nhXc63U

- Advertisement -

Latest Posts

Don't Miss