Tuesday, December 24, 2024

Latest Posts

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 4

- Advertisement -

ಈ ಮೊದಲ ಭಾಗದಲ್ಲಿ ನಾವು ನಿಮಗೆ ಈ 20 ಜನ ಸಾಧಕಿಯರಲ್ಲಿ 15 ಸಾಧಕಿಯರ ಬಗ್ಗೆ ವಿವರಣೆ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನೂ 5 ಸಾಧಕಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹದಿನಾರನೇಯವರು ಸರಳಾ ಠಕ್ರಾಳ್. ಇವರು ಭಾರತದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಇವರು ಪೈಲಟ್ ಆಗಿದ್ದಾಗ, ಇವರಿಗೆ 21 ವರ್ಷ ವಯಸ್ಸಾಗಿತ್ತು. ಅಲ್ಲದೇ ಇವರು ಎ ಲೈಸೆನ್ಸ್ ಪಡೆದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಇವರು ಸಾವಿರ ಗಂಟೆಗಳ ಕಾಲ ವಿಮಾನವನ್ನ ಚಲಾಯಿಸಿ, ಈ ಲೈಸೆನ್ಸ್ ಪಡೆದಿದ್ದಾರೆ.

ಹದಿನೇಳನೇಯವರು ಮೇರಿಕಾಮ್. ಇವರು ಮಹಿಳಾ ಬಾಕ್ಸರ್ ಆಗಿದ್ದು, ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸತತ 6 ಬಾರಿ ಪದಕ ಗೆದ್ದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. ಅಲ್ಲದೇ 2012ರ ಓಲಂಪಿಕ್ಸ್ ನಲ್ಲಿ ಭಾಗವಹಿಸಿದ, ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. ಅಷ್ಟೇ ಅಲ್ಲದೇ 2014ರಲ್ಲಿ ನಡೆದ ಏಷಿಯನ್ ಗೇಮ್ಸ್‌ನಲ್ಲಿ ಗೋಲ್ಡ್ ಮೆಡಲ್ ಗೆದ್ದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ.

ಹದಿನೆಂಟನೇಯವರು ಬಚೇಂದ್ರಿ ಪಾಲ್. ಇವರು 1984ರಲ್ಲಿ ಮೌಂಟ್ ಎವರೆಸ್ಟ್‌ನ ತುತ್ತ ತುದಿಯನ್ನ ಹತ್ತಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಹತ್ತೊಂಭತ್ತನೇಯವರು ಹರಿತಾ ಕೌರ್ ಡಿಯೋಲ್. 1994ರಲ್ಲಿ ಇಂಡಿಯನ್ ಏರ್‌ಫೋರ್ಸ್‌ನ ಮೊದಲ ಮಹಿಳಾ ಪೈಲಟ್ ಆಗಿದ್ದರು. ಮತ್ತು ಒಬ್ಬರೇ ಆ ವಿಮಾನವನ್ನ ಹಾರಿಸಿದ್ದರು.

ಇಪ್ಪತ್ತನೇಯವರು ಪ್ರಿಯಾ ಝಿಂಗಾನ್. ಇವರು ಭಾರತದ ಮೊದಲ ಮಹಿಳಾ ಆರ್ಮಿ ಆಫೀಸರ್ ಆಗಿದ್ದವರು.

ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..

ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡೋದು ಹೇಗೆ..?

- Advertisement -

Latest Posts

Don't Miss