Sunday, September 8, 2024

Latest Posts

೨೦೦೦ ರುಪಾಯಿ ನೋಟು ಕೇಳೋರೇ ಇಲ್ಲ..!

- Advertisement -

 

ಪಿಂಕ್ ನೋಟು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲೆಕ್ಷನ್ ಬಂದ್ರೆ ಸಾಕು ಯಾವ ನೋಟು ಕೊಟ್ರು ಅನ್ನೋದೇ ಸುದ್ದಿ. ಪಿಂಕ್ ನೋಟು ಕೊಟ್ರೆ ಓಟ್ ಅವರಿಗೇ ಫಿಕ್ಸ್. ಆದ್ರೆ ಈಗ ನೋಡಿದ್ರೆ ೨೦೦೦ ರುಪಾಯಿ ನೋಟು ಕೇಳೋರೇ ಇಲ್ವಂತೆ. ಚಲಾವಣೆಯಲ್ಲಿರೋ ೨೦೦೦ದ ನೋಟುಗಳ ಸಂಖ್ಯೆ ೨೧೪ ಕೋಟಿಗೆ ಇಳಿಕೆಯಾಗಿದೆ. ಜನರ ಹತ್ರ ದುಡ್ಡೇ ಕಡಿಮೆಯಾಗಿದೆ ಅಂತ ನೀವು ಅನ್ಕೋಬೇಡಿ, ತಪ್ಪು ತಿಳುವಳಿಕೆ, ಇಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯ ಇದೆ.
೨೦೦೦ ರುಪಾಯಿ ನೋಟುಗಳನ್ನು ಶೇಕರಿಸೋದು ಸುಲಭ, ನೂರಾರು ಕೋಟಿ ಬ್ಲಾö್ಯಕ್‌ಮನಿ ಇಡುವವರು ೨೦೦೦ ನೋಟುಗಳನ್ನೇ ಪ್ರಿಫರ್ ಮಾಡ್ತಾರೆ. ಯಾಕಂದ್ರೆ ಕಡಿಮೆ ಜಾಗದಲ್ಲಿ ಅತ್ಯಂತ ಹೆಚ್ಚು ನೋಟುಗಳನ್ನು ಇಡಬಹುದು. ಇದು ಆಗ್ತಿರುವ ಸಾಧ್ಯತೆಗಳು ಹೆಚ್ಚಿದೆ ಅನ್ನೋದೂ ನಂಬುವAತ ವಿಷ್ಯಾನೇ ಅಲ್ವಾ..? ಆದ್ರೆ ಒಂದAತೂ ಕನ್ಫರ್ಮ್ ಇನ್ನೊಂದು ವರ್ಷದಲ್ಲಿ ರ‍್ತಿರೋ ಎಲೆಕ್ಷನ್ ಅಥ್ವಾ ಸದ್ಯದಲ್ಲಿ ಬರೋ ಬಿಬಿಎಂಪಿ ಎಲೆಕ್ಷನ್‌ಗೆ ೨೦೦೦ ರುಪಾಯಿ ನೋಟುಗಳು ಕೋಟಿ ಕೋಟಿಗಳ ಸಂಖ್ಯೆಯಲ್ಲಿ ಹೊರಬರೋದು ಪಕ್ಕಾ.
ರಿಸರ್ವ್ ಬ್ಯಾಂಕ್ ಕೊಟ್ಟಿರೋ ಅಂಕಿ ಅಂಶಗಳನ್ನ ಹೇಳೋದಾದ್ರೆ ೨೦೨೦ರಲ್ಲಿ ೨.೪ರಷ್ಟು ಚಲಾವಣೆಯಾಗ್ತಿದ್ದ ನೋಟುಗಳು ಈಗ ೧.೬ರಷ್ಟಾಗಿದೆ. ಹೆಚ್ಚೂ ಕಡಿಮೆ ಅರ್ಧದಷ್ಟು ಕಡಿಮೆಯಾಗಿದೆ ಅನ್ನೋದನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ನೋಟು ಚಲಾವಣೆ ಕಡಿಮೆಯಾಗಿದೆ ಅಂದ್ರೆ ಎಲ್ಲೋ ಒಂದು ಕಡೆ ಶೇಖರಣೆಯಾಗಿದೆ ಅಂತಾನೇ ಅರ್ಥ. ಅದೆಲ್ಲಾ ನಮಗ್ಯಾಕೆ ದೊಡ್ಡವರ ದುಡ್ಡಿನ ವಿಷ್ಯ ಅಂತ ಸುಮ್ನಾಗ್ಬೇಕಷ್ಟೇ. ಇವತ್ತು ಒಬ್ಬ ಸಾಮಾನ್ಯ ಪಿಡಿಓ ಮನೆಗೆ ರೇಡ್ ಮಾಡಿದ್ರೇ ಕೋಟಿಗಳು ಸಿಗುತ್ತೆ ಅಂದ್ರೆ ಬ್ಲಾö್ಯಕ್‌ಮನಿ ಎಷ್ಟು ಲಾಕ್ ಆಗಿರಲ್ಲ ಹೇಳಿ..?

- Advertisement -

Latest Posts

Don't Miss