Monday, December 23, 2024

Latest Posts

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂಸ್ ರೆಸಿಪಿ..

- Advertisement -

Health tips: ಬೆಳಿಗ್ಗೆ ಸಾಮಾನ್ಯವಾಗಿ ಜನ, ಚಹಾ, ಕಾಫಿ ಸೇವನೆ ಮಾಡುತ್ತಾರೆ. ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವೇನಾದರೂ, ಹಣ್ಣು ಸೇವಿಸಿದಿರಿ, ಅಥವಾ ಜ್ಯೂಸ್ ಕುಡಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ.

ಮೊದಲ ಜ್ಯೂಸ್ ರೆಸಿಪಿ, ಬೀಟ್‌ರೂಟ್, ಕ್ಯಾರೆಟ್, ಮತ್ತು ಸೇಬು ಜ್ಯೂಸ್. ಇದಕ್ಕಾಗಿ 1 ಆ್ಯಪಲ್, 2 ಬೀಟ್ರೂಟ್, 5 ಕ್ಯಾರೇಟ್, ಚಿಕ್ಕ ತುಂಡು ಶುಂಠಿ, ಕೊಂಚ ಪುದೀನಾ ಬೇಕು. ಇವನೆಲ್ಲ ಸಿಪ್ಪೆ ತೆಗೆದು ತುಂಡರಿಸಿ, ಜ್ಯೂಸರ್‌ನಲ್ಲಿ ಹಾಕಿ. ಜ್ಯೂಸ್ ಮಾಡಿ ಸೇವಿಸಿ. ಇದಕ್ಕೆ ನೀವು ಸಕ್ಕರೆ, ಬೆಲ್ಲ ಏನನ್ನು ಹಾಕದೇ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವೂ ಉತ್ತಮವಾಗಿರುತ್ತದೆ. ಆದರೆ ಶುಗರ್ ಇದ್ದವರು ಈ ಜ್ಯೂಸ್ ಕುಡಿಯಬೇಡಿ.

ಎರಡನೇಯ ಜ್ಯೂಸ್ ರೆಸಿಪಿ, ಗ್ರೀನ್ ಜ್ಯೂಸ್. 2 ಸೌತೇಕಾಯಿ, ಒಂದು ಮುಷ್ಠಿ ಪಾಲಕ್, ಅರ್ಧ ಕಪ್‌ ಪುದೀನಾ ಎಲೆ, 2 ಸೇಬು, ಚಿಕ್ಕ ತುಂಡು ಶುಂಠಿ, 1 ಚಮಚ ನಿಂಬೆರಸ. ಇವಿಷ್ಟನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ, ಜ್ಯೂಸರ್‌ಗೆ ಹಾಕಿ, ರಸ ತೆಗೆದರೆ, ಜ್ಯೂಸ್ ರೆಡಿ. ಇದನ್ನು ಕೂಡ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಮೂರನೇಯ ಜ್ಯೂಸ್ ರೆಸಿಪಿ, ಕ್ಯಾರೆಟ್ ಜ್ಯೂಸ್. 2 ಕ್ಯಾರೆಟ್, 3 ಕಪ್ ಪಪ್ಪಾಯಿ, 2 ಕಿತ್ತಳೆ, 1 ಸಣ್ಣ ತುಂಡು ಶುಂಠಿ. ಇವಿಷ್ಟನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ಜ್ಯೂಸರ್‌ಗೆ ಹಾಕಿ ರಸ ತೆಗೆದರೆ, ಜ್ಯೂಸ್ ರೆಡಿ.

ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?

ಮೊಸರು ಸೇವಿಸುವ ರೀತಿ ಮೊದಲು ತಿಳಿದುಕೊಳ್ಳಿ..

- Advertisement -

Latest Posts

Don't Miss