ಊಟ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಾವು ಬದುಕಲು ಅವಶ್ಯಕವಾಗಿರುವ ಭಾಗ ಅದು. ಹಾಗಾಗಿ ನಾವು ಊಟ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗತ್ತೆ. ಅದನ್ನು ಗಮನಿಸದೇ, ನಾವು ಬೇಕಾದ ರೀತಿ ಊಟ ಮಾಡಿದ್ರೆ, ಆಮೇಲೆ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ. ಅದರಲ್ಲೂ ರಾತ್ರಿ ಊಟ ಮಾಡೋದು ತುಂಬಾ ಮುಖ್ಯ. ರಾತ್ರಿ ಊಟ ಮಾಡುವಾಗ ತಪ್ಪು ಮಾಡಿದ್ರೆ, ನಾವು ಬೆಳಿಗ್ಗೆ ಬೇಗ ಏಳಲು ಸಹ ಆಗೋದಿಲ್ಲಾ. ಹಾಗಾಗಿ ನಾವಿಂದು ಊಟ ಮಾಡುವಾಗ ಮಾಡಬಾರದ ಕೆಲ ತಪ್ಪುಗಳ ಬಗ್ಗೆ ಹೇಳಲಿದ್ದೇವೆ..
ಹಿರಿಯರು ಹೇಳಿದ ಪ್ರಕಾರ, ಬೆಳಿಗ್ಗೆ ರಾಜನಂತೆ ತಿನ್ನಬೇಕು. ಮಧ್ಯಾಹ್ನ ಸಾಮಾನ್ಯನಂತೆ ತಿನ್ನಬೇಕು ಮತ್ತು ರಾತ್ರಿ ಬಡವನಂತೆ ಊಟ ಮಾಡಬೇಕು. ಅಂದ್ರೆ ದೇಹವೆಂಬ ನಮ್ಮ ಮನೆ ಸರಿಯಾಗಿ ಇರಬೇಕು ಅಂದ್ರೆ, ಫೌಂಡೇಶನ್ ಗಟ್ಟಿಯಾಗಿರಬೇಕು. ಹಾಗಾಗಿ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನಬೇಕು. ಮಧ್ಯಾಹ್ನ ಎಷ್ಟು ಬೇಕೋ ಅಷ್ಟೇ ತಿನ್ನಬೇಕು ಮತ್ತು ರಾತ್ರಿ ಕೊಂಚವೇ ಊಟ ಮಾಡಬೇಕು. ನೀವು ರಾತ್ರಿ ಹೆಚ್ಚು ಊಟ ಮಾಡಿದ್ರೆ, ಬೆಳಿಗ್ಗೆ ಬೇಗ ಏಳಲು ಆಗಲ್ಲ. ಅಲ್ಲದೇ ಇದರಿಂದ ಬೊಜ್ಜು ಕೂಡ ಬೆಳೆಯುತ್ತೆ. ಹಾಗಾಗಿ ರಾತ್ರಿ ಲೈಟ್ ಆಗಿ ತಿನ್ನಿ, ರಾತ್ರಿ ಊಟದಲ್ಲಿ ತರಕಾರಿ ಹೆಚ್ಚು ಬಳಸಿ.
ಸಂಜೆ ಹೊತ್ತು ಅಥವಾ 7 ಗಂಟೆಯ ಬಳಿಕ ನೀವು ಟೀ, ಕಾಫಿ ಕುಡಿಯುವುದರಿಂದ, ರಾತ್ರಿ ನಿದ್ದೆ ಬರುವುದು ತಡವಾಗುತ್ತದೆ. ತಡವಾಗಿ ನಿದ್ದೆ ಮಾಡಿದಾಗ, ಮರುದಿನ ಬೆಳಿಗ್ಗೆ ಬೇಗ ಏಳಲು ಮನಸ್ಸಾಗುವುದಿಲ್ಲ. ಹಾಗಾಗಿ ಸಂಜೆ ಬಳಿಕ ಟೀ, ಕಾಫಿ ಸೇವನೆ ಮಾಡಬೇಡಿ.
ಅಲ್ಲದೇ ರಾತ್ರಿ ಸ್ವೀಟ್ಸ್, ಐಸ್‌ಕ್ರೀಮ್ ತಿನ್ನುವುದರಿಂದಲೂ ನಿಮಗೆ ಬೇಗ ನಿದ್ರೆ ಬರುವುದಿಲ್ಲ. ಹಾಗಾಗಿ ರಾತ್ರಿ ಸಿಹಿ ತಿನ್ನಬಾರದು. ಅಲ್ಲದೇ ಇದರಿಂದ ಬೊಜ್ಜು ಬೆಳೆಯುತ್ತೆ. ದೇಹದಲ್ಲಿ ಶುಗರ್ ಲೇವಲ್ ಹೆಚ್ಚತ್ತೆ. ಆದ ಕಾರಣ, ರಾತ್ರಿ ಸಿಹಿ ಸೇವನೆ ಉತ್ತಮವಲ್ಲ.
ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..