Friday, December 27, 2024

Latest Posts

ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..

- Advertisement -

ಲಂಕಾಪತಿ ರಾವಣ, ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯೆಯನ್ನು ಅರಿತಿದ್ದ ಬ್ರಾಹ್ಮಣನಾಗಿದ್ದ. ಸಕಲ ಶಾಸ್ತ್ರಗಳನ್ನೂ ಪಾರಂಗತ ಮಾಡಿಕೊಂಡಿದ್ದ ರಾವಣ, ಶಿವನ ಪರಮ ಭಕ್ತನಾಗಿದ್ದು, ಶಿವತಾಂಡವ ಸ್ತ್ರೋತ್ರವನ್ನು ರಚಿಸಿ, ಶಿವನ ಪ್ರೀತಿಗೆ ಪಾತ್ರನಾಗಿದ್ದ. ಇಂಥ ರಾವಣ ಸೀತೆ ಬೇಕೆಂಬ ದುರಾಸೆಯಿಂದಲೇ, ರಾಮನ ಕೈಯಿಂದ ವಧೆಯಾಗಿದ್ದು. ಆದ್ರೆ ಇವನಲ್ಲಿದ್ದ 5 ಗುಣಗಳಿಂದಲೇ, ಅವನು ಅಷ್ಟು ಬುದ್ಧಿವಂತನಾಗಿದ್ದು. ಸ್ವರ್ಣ ಲಂಕೆಯ ಒಡೆಯನಾಗಿದ್ದು. ಹಾಗಾದ್ರೆ ಆ 5 ಗುಣಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ಗುಣ.. ಶತ್ರುಗಳು ಕಷ್ಟದಲ್ಲಿದ್ದರೆ ಅವರಿಗೂ ಸಹಾಯ ಮಾಡುವುದು. ಒಮ್ಮೆ ರಾಮ ಸೀತೆಯೊಂದಿಗೆ ಯಾಗದಲ್ಲಿ ಭಾಗವಹಿಸಬೇಕಿತ್ತು. ಆದರೆ ಆ ಯಾಗ ಮಾಡುವ ಪುರೋಹಿತರು ಬರಲಾಗಲಿಲ್ಲ. ಈಗ ಹೇಗಾದರೂ ಮಾಡಿ, ಯಾಗ ಮಾಡಲೇಬೇಕು. ಇಲ್ಲದಿದ್ದಲ್ಲಿ, ಅನಾಹುತವಾಗುತ್ತದೆ ಎಂದು ರಾಮ ಯೋಚಿಸುತ್ತಿದ್ದ. ಇದೇ ವೇಳೆ ರಾವಣ ಸೀತೆಯನ್ನು ತನ್ನ ಬಂಧನದಲ್ಲಿಟ್ಟುಕೊಂಡಿದ್ದ. ಆಗ ರಾಮನ ಗುಂಪಿನಲ್ಲೊಬ್ಬರು, ರಾವಣನನ್ನೇ ಯಾಗ ಮಾಡಲು ಕರೆದರೆ ಹೇಗೆ ಎಂದು ಕೇಳುತ್ತಾರೆ. ಆಗ ರಾವಣನನ್ನೇ ತಮ್ಮ ಯಾಗದ ಪುರೋಹಿತನನ್ನಾಗಿ ಕರೆಯಲಾಗುತ್ತದೆ.

ರಾವಣ ಸೀತೆ ಸಮೇತ ಯಾಗ ನಡೆಯುವ ಜಾಗಕ್ಕೆ ಬಂದು, ಯಾಗದ ಪೌರೋಹಿತ್ಯ ಮಾಡಿ. ನಂತರ ಮತ್ತೆ ಸೀತೆಯನ್ನು ಕರೆದುಕೊಂಡು ಹಿಂದಿರುಗುತ್ತಾನೆ. ಈ ಬಗ್ಗೆ ಕೆಲವು ಹಿಂದೂ ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ಇನ್ನು ಯಾಕೆ ರಾವಣ, ರಾಮನಿಗೆ ಸಹಾಯ ಮಾಡಿದನೆಂದರೆ, ರಾವಣನ ಪ್ರಕಾರ ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅವರು ನಮ್ಮ ಶತ್ರುವೇ ಆಗಲಿ, ಅಥವಾ ಮಿತ್ರನೇ ಆಗಲಿ. ಆ ಸಹಾಯದಿಂದ ನಮಗೇನೂ ನಷ್ಟವಿಲ್ಲವೆಂದಾದಲ್ಲಿ ಶತ್ರು ಕಷ್ಟದಲ್ಲಿದ್ದರೂ ಅವನಿಗೆ ಸಹಾಯ ಮಾಡಬೇಕು ಎಂದು ರಾವಣ ಹೇಳುತ್ತಾನೆ.

ಎರಡನೇಯ ಗುಣ.. ಇಷ್ಟ ದೇವರಲ್ಲಿ ಭಕ್ತಿ ಮಾಡಬೇಕು. ನಾವು ಇಷ್ಟಪಡುವ ದೇವರಲ್ಲಿ ಸದಾ ಭಕ್ತಿ ಮಾಡಿದರೆ, ಅವನು ನಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ ಅನ್ನೋದು ರಾವಣನ ನಂಬಿಕೆಯಾಗಿತ್ತು. ರಾವಣ ಶಿವನ ಪರಮ ಭಕ್ತನಾಗಿದ್ದು, ಶಿವನಿಗೋಸ್ಕರ, ಯಜ್ಞ, ಪೂಜೆ ಪುನಸ್ಕಾರ ಮಾಡುತ್ತಿದ್ದ. ಶಿವನಿಗಾಗಿ ಭಕ್ತಿಯಿಂದ ಶಿವ ತಾಂಡವ ಸ್ತೋತ್ರವನ್ನೂ ರಚಿಸಿದ. ರಾವಣನ ಭಕ್ತಿಗೆ ಮೆಚ್ಚಿದ ಶಿವ, ರಾವಣನ ನಾಭಿಯಲ್ಲಿ ಅಮೃತ ಕುಂಡವನ್ನು ಸೃಷ್ಟಿಸಿದ.

ಮೂರನೇಯ ಗುಣ.. ದ್ವೇಷ ಸಾಧಿಸಲು ಹೋಗಬೇಡಿ. ರಾವಣನ ಸಹೋದರಿ ಶೂರ್ಪನಖಾ, ಲಕ್ಷ್ಮಣನ ಮೇಲೆ ಕಣ್ಣು ಹಾಕಿದ್ದ ಕಾರಣ, ಆಕೆಯ ಮೂಗು ಕತ್ತರಿಸಿ, ಆಕೆಯ ಸೌಂದರ್ಯವನ್ನ ಲಕ್ಷ್ಮಣ ನಾಶ ಮಾಡಿದ್ದ. ಇದರ ದ್ವೇಷದಿಂದಲೇ ರಾವಣ, ಸೀತೆಯನ್ನು ತನ್ನ ಬಂಧನದಲ್ಲಿಟ್ಟುಕೊಂಡ. ನಂತರ ರಾಮನಿಂದಲೇ ರಾವಣ ವಧಿಸಲ್ಪಟ್ಟ. ಹಾಗಾಗಿ ದ್ವೇಷ ಸಾಧಿಸಿ, ನಾವು ಗಳಿಸುವುದೇನೂ ಇಲ್ಲ. ಹಾಗಾಗಿ ನಿಮ್ಮ ಯಶಸ್ಸಿಗೆ ಬೇಕಾದ ಕೆಲಸವನ್ನು ನೀವು ಮಾಡಿ, ವಿನಃ ದ್ವೇಷ ಸಾಧಿಸುವ ಕೆಲಸವನ್ನಲ್ಲ.

ನಾಲ್ಕನೇಯ ಗುಣ.. ಎಷ್ಟು ಸಾಧ್ಯವೋ ಅಷ್ಟು ಜ್ಞಾನ ಪಡೆಯಿರಿ. ರಾವಣ ಅಗಾಧ ಜ್ಞಾನಿಯಾಗಿದ್ದ. ಜ್ಯೋತಿಷ್ಯ, ಪೌರೋಹಿತ್ಯ, ಶಾಸ್ತ್ರ, ಯುದ್ಧ ನೀತಿ, ಸಂಸ್ಕೃತ ಶ್ಲೋಕ ಪಠಣ, ಇತ್ಯಾದಿಯಲ್ಲಿ ರಾವಣ ಜ್ಞಾನ ಹೊಂದಿದ್ದ. ಅವನಿಗೆ ಬರದ ವಿದ್ಯೆಯಿಲ್ಲ ಎನ್ನುವಂತೆ, ಆತ ಸಕಲ ವಿದ್ಯಾ ಪಾರಂಗತನಾಗಿದ್ದ. ಈ ರೀತಿ ನಾವೂ ಕೂಡ, ನಮ್ಮ ಉಸಿರಿರುವವರೆಗೂ, ಉತ್ತಮ ಜ್ಞಾನ ಸಿಗುವ ವಿದ್ಯೆಯನ್ನ ಕಲಿಯುತ್ತಿರಬೇಕು. ಅದರಿಂದ ನಮಗೆ ಸಾಕಷ್ಟು ಪ್ರಯೋಜನವಾಗುತ್ತದೆ.

ಐದನೇಯ ಗುಣ.. ಉತ್ತಮ ಆಡಳಿತ ನಡೆಸುವುದನ್ನು ಕಲಿಯಿರಿ. ಅಧಿಕಾರ ಇರುವವರಿಗೆ ಆಡಳಿತ ನಡೆಸುವ ಅವಕಾಶ ಸಿಗುತ್ತದೆ. ಆದ್ರೆ ಸಾಮಾನ್ಯ ಮನುಷ್ಯನಿಗೂ ಈ ರೀತಿಯ ಅವಕಾಶ ಒಮ್ಮೆಯಾದರೂ ಸಿಗಬಹುದು. ನಿಮಗೆ ಹಾಗೆ ಸಿಕ್ಕ ಉತ್ತಮ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ಲಂಕೆ ಮೊದಲು ಕುಬೇರನ ಆಡಳಿತದಲ್ಲಿತ್ತು. ಆದರೆ ಅಲ್ಲಿದ್ದ ರಾಕ್ಷಸರಿಗೆ, ಜನರಿಗೆ ರಾವಣ ಸಹಾಯ ಮಾಡುತ್ತಿದ್ದ. ಹಾಗಾಗಿ ರಾವಣನಿಗೆ ರಾಕ್ಷಸರ ಬೆಂಬಲ ಸಿಕ್ಕು, ಕುಬೇರನಿಂದ ಲಂಕೆ ರಾವಣನ ಕೈಸೇರಿತು.

- Advertisement -

Latest Posts

Don't Miss