Thursday, November 21, 2024

Latest Posts

ಭಾರತದ 5 ಪ್ರಸಿದ್ಧ ತಿನಿಸುಗಳಿವು: ಯಾವ ರಾಜ್ಯಕ್ಕೆ ಹೋದ್ರೂ ನಿಮಗೆ ಈ ತಿಂಡಿ ಸಿಕ್ಕೇ ಸಿಗತ್ತೆ..

- Advertisement -

ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ತಿಂಡಿ ನಿಮಗೆ ದೇಶದ ಯಾವುದೇ ರಾಜ್ಯದಲ್ಲಿ ಸಿಗುತ್ತದೆ. ಯಾವುದು ಅಂಥ 5 ಖಾದ್ಯ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಮೊದಲನೇಯ ತಿಂಡಿ ದೋಸೆ. ದೋಸೆ ದಕ್ಷಿಣ ಭಾರತದ ಖಾದ್ಯವಾಗಿದ್ದರೂ ಕೂಡ, ಇದು ದೇಶದ ನಾನಾ ಭಾಗಗಳಲ್ಲಿ ಸಿಗುತ್ತದೆ. ಅಷ್ಟೇ ಅಲ್ಲದೇ, ಈಗ ವಿದೇಶದಲ್ಲೂ ಕೂಡ ನೀವು ದೋಸೆಗಳ ರುಚಿಯನ್ನ ಸವಿಯಬಹುದು. ಇನ್ನು ದೋಸೆಯಲ್ಲಿ ಹಲವಾರು ವೆರೈಟಿ ದೋಸೆಗಳಿದ್ದು, ಎಲ್ಲಕ್ಕಿಂತ ಫೇಮಸ್ ದೋಸೆ ಅಂದ್ರೆ ಮಸಾಲೆ ದೋಸೆ.

ಎರಡನೇಯ ತಿಂಡಿ ಚಾಟ್ಸ್. ಭಾರತದಲ್ಲಿ ಚಾಟ್ಸ್ ಬಗ್ಗೆ ಗೊತ್ತಿಲ್ಲದ ಜನರೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಗೋಬಿ ಮಂಚೂರಿ, ಹೀಗೆ ಹೇಳುತ್ತಾ ಹೋದ್ರೆ, ಸಾವಿರ ಸಾವಿರ ವೆರೈಟಿ ಚಾಟ್ಸ್ ಸಿಗತ್ತೆ ನಮ್ಮ ದೇಶದಲ್ಲಿ. ಅದರಲ್ಲೂ ಉತ್ತರ ಭಾರತದಲ್ಲಿ ಕೆಲ ಜನರು, ಬೆಳಬೆಳಿಗ್ಗೆನೇ ತಿಂಡಿಗಾಗಿ ಚಾಟ್ಸ್ ತಿನ್ನೋರೂ ಇದ್ದಾರೆ. ಇನ್ನು ಭಾರತದಲ್ಲಿ ಚಾಟ್ ಸ್ಟ್ರೀಟ್‌ಗಳಿಗೇನೂ ಕಡಿಮೆ ಇಲ್ಲಾ.

ಮೂರನೇಯ ತಿಂಡಿ ಬಿರಿಯಾನಿ. ಬಿರಿಯಾನಿಯಲ್ಲಿ ಎರಡು ವೆರೈಟಿ ಬಿರಿಯಾನಿ ಸಿಗತ್ತೆ., ಒಂದು ವೆಜ್ ಬಿರಿಯಾನಿ, ಎರಡನೇಯದ್ದು ನಾನ್‌ವೆಜ್ ಬಿರಿಯಾನಿ. ಅದರಲ್ಲೂ ಹಲವು ವೆರೈಟಿಗಳಿದೆ. ಹೊಟೇಲ್‌ಗಳಲ್ಲಿ ಹೆಚ್ಚಾಗಿ ಸೇಲ್ ಆಗುವ ತಿಂಡಿಗಳಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ಇನ್ನು ದೇಶದ ಯಾವುದೇ ಭಾಗದ ಹೊಟೇಲ್‌ಗೆ ಹೋದರೂ, ಬಿರಿಯಾನಿ ತಿನ್ನೋಕ್ಕೆ ರೆಡಿಯಾಗಿರುತ್ತದೆ.

ನಾಲ್ಕನೇಯ ತಿಂಡಿ ಪರೋಠಾ. ಪರೋಠಾ ಮೂಲತಃ ಪಂಜಾಬಿಗಳ ತಿಂಡಿಯಾಗಿದೆ. ಆದ್ರೂ ಭಾರತದ ಹಲವು ಹೊಟೇಲ್‌ಗಳಲ್ಲಿ ಪರೋಠಾ ಸಿಗುತ್ತದೆ. ಆಲೂ ಪರೋಠಾ, ಗೋಬಿ ಪರೋಠಾ, ಪನೀರ್ ಪರೋಠಾ ಹೀಗೆ ಹಲವು ವೆರೈಟಿ ಪರೋಠಾವನ್ನ ನಾವು ಸವಿಯಬಹುದು.

ಐದನೇಯ ತಿಂಡಿ ಪೂರಿ. ಪೂರಿ ರಾಜಸ್ತಾನಿಗಳ ತಿಂಡಿಯಾಗಿದ್ರು, ಅದನ್ನ ಭಾರತದ ಎಲ್ಲ ಭಾಗಗಳಲ್ಲೂ ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲೂ ಹಲವರಿಗೆ ಪೂರಿ ಭಾಜಿಯೇ ಫೇವರಿಟ್ ತಿಂಡಿ.

- Advertisement -

Latest Posts

Don't Miss