ತಲೆಕೂದಲು ಉದುರಲು ಹಲವು ಕಾರಣಗಳಿರುತ್ತದೆ. ಅದೇ ರೀತಿ ಅದರ ಬೆಳವಣಿಗೆಗೂ ಹಲವು ಕಾರಣಗಳಿರುತ್ತದೆ. ಆದ್ರೆ ಕೆಲವರು ಈ ರೀತಿ ಮಾಡಿದ್ರೆ, ಕೂದಲು ಬೆಳೆಯುತ್ತದೆ ಎಂದು ನಿಮಗೆ ತರಹೇವಾರಿ ಐಡಿಯಾಗಳನ್ನು ಕೊಡಬಹುದು. ಆದ್ರೆ ಅದನ್ನೆಲ್ಲ ನೀವು ನಂಬಬೇಡಿ. ಇಂದು ನಾವು ತಲೆಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಸುಳ್ಳು ಟ್ರಿಮ್ಮಿಂಗ್ ಮಾಡುವುದರಿಂದ ಕೂದಲು ಉದ್ದ ಬೆಳೆಯುತ್ತದೆ. ಟ್ರಿಮ್ಮಿಂಗ್ ಮಾಡುವುದರಿಂದ ಕೂದಲಿನ ವಾಲ್ಯೂಮ್ ಹೆಚ್ಚಾದಂತೆ ಕಾಣುತ್ತದೆ. ಸ್ಪ್ಲಿಟೆಂಡ್ಸ್ ಹೋಗಿ, ಕೂದಲು ಆರೋಗ್ಯವಾಗಿರುತ್ತದೆ. ಆದ್ರೆ ಕೂದಲನ್ನ ಟ್ರಿಮ್ ಮಾಡುವುದರಿಂದ ಅದು ಉದ್ದ ಬೆಳೆಯುವುದಿಲ್ಲ.
ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಎರಡನೇಯ ಸುಳ್ಳು ಶ್ಯಾಂಪೂ ಬದಲಿಸುವುದರಿಂದ ಕೂದಲು ಉದುರಲು ಶುರುವಾಗುತ್ತದೆ. ಶ್ಯಾಂಪೂ ಬದಲಾಯಿಸುವುದರಿಂದ ನಿಮ್ಮ ಕೂದಲು ಆಯ್ಲಿಯಾಗಬಹುದು. ಅಥವಾ ಡ್ರೈಯಾಗಬಹುದು. ಆದ್ರೆ ಶ್ಯಾಂಪೂ ಬದಲಾಯಿಸುವುದರಿಂದ ಕೂದಲು ಉದುರುವುದಿಲ್ಲ.
ಮೂರನೇಯ ಸುಳ್ಳು ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವುದಿಲ್ಲ ಅಂತಾ ಹೇಳುವುದು. ಚಿಕ್ಕ ಮಕ್ಕಳು ತಿನ್ನುವ ಆಹಾರದಿಂದ ಉತ್ತಮ ಪೋಷ್ಟಿಕಾಂಷ ಸಿಗದಿದ್ದಲ್ಲಿ, ದೇಹದಲ್ಲಿ ಹಾರ್ಮೋನು ಇಂಬ್ಯಾಲೆನ್ಸ್ ಆಗಿದ್ದಲ್ಲಿ, ಕೂದಲು ಉದುರತ್ತೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂದಲು ಉದುರುತ್ತದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಕೂದಲು ಉದುರೋದಿಲ್ಲಾ ಅನ್ನೋದು ಸುಳ್ಳು. ಹೆಚ್ಚು ಕೂದಲು ಉದುರುತ್ತಿದ್ದಲ್ಲಿ, ಉತ್ತಮ ಆಹಾರ ಸೇವಿಸಿ. ಅಥವಾ ವೈದ್ಯರನ್ನು ಸಂಪರ್ಕಿಸಿ.
ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..
ನಾಲ್ಕನೇಯ ಸುಳ್ಳು ತಣ್ಣೀರಿನಿಂದ ಸ್ನಾನ ಮಾಡಿದ್ರೆ, ಕೂದಲು ಉದುರುವುದು ನಿಲ್ಲುತ್ತದೆ ಅನ್ನೋದು ಸುಳ್ಳು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಡ್ಯಾಂಡ್ರಫ್ ಸಮಸ್ಯೆ ಇದ್ದಲ್ಲಿ ಅದು ದೂರವಾಗುತ್ತದೆ. ಕೂದಲು ರಫ್ ಆಗುವುದಿಲ್ಲ. ಆದ್ರೆ ತಣ್ಣೀರಿನ ಸ್ನಾನ ಮಾಡುವುದರಿಂದ ಕೂದಲು ಉದುರುವುದನ್ನ ಕಂಟ್ರೋಲ್ ಮಾಡಲಾಗುವುದಿಲ್ಲ. ಹಾಗಾಗಿ ತಣ್ಣೀರು ಅಥವಾ ಬಿಸಿ ನೀರಿನಿಂದ ತಲೆ ಸ್ನಾನ ಮಾಡುವ ಬದಲು, ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ.
ಐದನೇಯ ಸುಳ್ಳು ಬಿಳಿ ಕೂದಲನ್ನು ತೆಗೆಯುವುದರಿಂದ, ಇನ್ನೂ ಹೆಚ್ಚು ಬಿಳಿ ಕೂದಲು ಬೆಳೆಯುತ್ತದೆ ಅನ್ನೋದು ಸುಳ್ಳು. ಹಾಗಂತ ತಲೆಯಲ್ಲಿರೋ ಬಿಳಿ ಕೂದಲನ್ನ ಹುಡುಕಿ ನೀವು ಅದನ್ನ ಕೀಳಬೇಡಿ. ಬಿಳಿ ಕೂದಲನ್ನ ಕೀಳಬಾರದು. ಉತ್ತಮ ಆಹಾರ ತಿನ್ನುವುದು, ಸರಿಯಾಗಿ ಎಣ್ಣೆ ಮಸಾಜ್ ಮಾಡುವುದು, ಕೂದಲನ್ನ ಕ್ಲೀನ್ ಆಗಿ ವಾಶ್ ಮಾಡುವುದರಿಂದ ಬಿಳಿ ಕೂದಲು ಹೋಗುತ್ತದೆ. ಆದ್ರೆ ಒಂದು ಬಿಳಿ ಕೂದಲು ಕಿತ್ತರೆ, ಅಷ್ಟೂ ಕೂದಲು ಬಿಳಿಯಾಗುತ್ತದೆ ಅನ್ನೋದು ಸುಳ್ಳು.