Sunday, September 8, 2024

Latest Posts

ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..

- Advertisement -

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆ. ಈ ಸಮಸ್ಯೆಯಿಂದ ಬೊಜ್ಜು ಬೆಳೆಯುತ್ತೆ, ಕೈ ಕಾಲು ನೋವು ಬರತ್ತೆ, ಮುಟ್ಟಿನ ಸಮಸ್ಯೆ ಎದುರಾಗತ್ತೆ. ಹೀಗೆ ಅನೇಕ ಸಮಸ್ಯೆ ತಲೆ ದೂರತ್ತೆ. ಹಾಗಾಗಿ ನಾವಿಂದು ಈ ಸಮಸ್ಯೆ ಇದ್ದವರು ತಿನ್ನಬೇಕಾದ 5 ಸೂಪರ್ ಫುಡ್ ಯಾವುದು ಅಂತಾ ಹೇಳಲಿದ್ದೇವೆ..

ಮೊದಲನೇಯ ಆಹಾರ ನವಣೆ. ನವಣೆ ಸಿರಿಧಾನ್ಯಗಳಲ್ಲಿ ಒಂದು. ನವಣೆಯಿಂದ ಉಪ್ಪಿಟ್ಟು ತಯಾರಿಸಲಾಗುತ್ತದೆ. ಪಿಸಿಓಡಿ ಇದ್ದವರಿಗೆ ನವಣೆ ಒಂದು ವರದಾನವಿದ್ದಂತೆ. ಪಿಸಿಓಡಿ ಇದ್ದವರು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಈ ನವಣೆ ಪದಾರ್ಥ ಮಾಡಿ ಸೇವಿಸಿದ್ರೆ, ಪಿಸಿಓಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ಗ್ಲುಟಿನ್ ಫ್ರೀ ಆಹಾರವಾಗಿರುವುದರಿಂದ ಇದರ ಸೇವನೆಯಿಂದ ಪಿಸಿಓಡಿ ಜೊತೆ ಥೈರಾಯ್ಡ್ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.ಇದು ಹೈ ಫೈಬರ್ ಡಯಟ್ ಆಹಾರವಾಗಿರುವುದರಿಂದ ಇದರ ಸೇವನೆಯಿಂದ ತೂಕವೂ ಇಳಿಯುತ್ತದೆ.

ಎರಡನೇಯ ಆಹಾರ ಅಖರೋಟ್. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಖರೋಟನ್ನು ನೀರಿನಲ್ಲಿ ನೆನೆಸಿ ತಿನ್ನಬೇಕು. ಇದರಿಂದ ನಿಮ್ಮ ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ ಸರಿಯಾಗಿ ಇರತ್ತೆ. ಅಲ್ಲದೇ ಪಿಸಿಓಡಿ ಸಮಸ್ಯೆ ಇದ್ದಲ್ಲಿ ಇದು ನಿಮಗೆ ಹೆಲ್ಪ್ ಆಗತ್ತೆ. ಪಿಸಿಓಡಿ ಸಮಸ್ಯೆ ಇರುವವರಲ್ಲಿ ಪುರುಷರ ಹಾರ್ಮೋನ್ ಜಾಸ್ತಿ ಇರುತ್ತದೆ. ಅಂಥ ಹಾರ್ಮೋನ್‌ಗಳಲ್ಲಿ ಕಡಿಮೆ ಮಾಡುವುದರಲ್ಲಿ ವಾಲ್ನಟ್ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮುಖದ ಮೇಲೆ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ. ದಿನಕ್ಕೆ ಎರಡು ವಾಲ್ನಟ್ ತಿನ್ನಬಹುದು.

ಮೂರನೇಯ ಆಹಾರ ಅಗಸೆ ಬೀಜ. ಈ ಮೊದಲು ನಾವು ನಿಮಗೆ ಅಗಸೆ ಬೀಜದ ಪ್ರಯೋಜನಗಳನ್ನು ಹೇಳಿದ್ದೆವು. ಈ ಆಹಾರ ಪಿಸಿಓಡಿ ಸಮಸ್ಯೆ ಇದ್ದವರಿಗೂ ಕೂಡ ಸಹಾಯ ಮಾಡತ್ತೆ. ಅಗಸೆಬೀಜದಿಂದ ಚಟ್ನಿಪುಡಿ ಮಾಡಿ ಸೇವಿಸಬಹುದು.

ನಾಲ್ಕನೇಯ ಆಹಾರ ಓಟ್ಸ್. ಇತ್ತೀಚಿಗೆ ಡಯಟ್ ಮಾಡುವವರು ಹೆಚ್ಚು ಸೇವಿಸುವ ಆಹಾರವೆಂದರೆ ಓಟ್ಸ್. ಇದರ ಸೇವನೆಯಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ತೂಕ ಕಡಿಮೆ ಮಾಡತ್ತೆ. ಇದರಿಂದ ಪಿಸಿಓಡಿ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಐದನೇಯ ಆಹಾರ ಅರಿಶಿನ. ನೀವು ಪ್ರತಿದಿನ ಮಾಡುವ ಅಡಿಗೆಯಲ್ಲಿ ಅರಿಶಿನ ಬಳಸಿದ್ರೆ ಸಾಕು. ನಿಮಗೆ ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ.

ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು..?

ಗರ್ಭಿಣಿಯಾಗುವುದಕ್ಕೆ 5 ಉತ್ತಮ ಆಹಾರಗಳಿವು..

ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

- Advertisement -

Latest Posts

Don't Miss