Tuesday, June 3, 2025

Latest Posts

ಥೈರಾಯ್ಡ್ ಸಮಸ್ಯೆ ಇದ್ದವರು 5 ಸೂಪರ್ ಫುಡ್ ಸೇವಿಸಿ..

- Advertisement -

ಥೈರಾಯ್ಡ್ ರೋಗ ಬಂದರೆ, ಅದರಿಂದ ಬೊಜ್ಜು ಬೆಳೆಯುತ್ತೆ. ಹೆಣ್ಣು ಮಕ್ಕಳಿಗೆ ಮುಟ್ಟಿನಲ್ಲಿ ಏರುಪೇರಾಗತ್‌ತೆ. ಪುರುಷರಿಗೂ ಪುರುಷತ್ವ ಸಮಸ್ಯೆ ಬರತ್ತೆ. ಮಕ್ಕಳಾಗುವ ಲಕ್ಷಣಗಳು ಕ್ಷಿಣಿಸುತ್ತ ಹೋಗತ್ತೆ. ಹಾಗಾಗಿ ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಇಂದು ನಾವು ಥೈರಾಯ್ಡ್ ಸಮಸ್ಯೆ ಇದ್ದವರು ಸೇವಿಸಬೇಕಾದ 5 ಸೂಪರ್ ಫುಡ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..

ಮೊದಲನೇಯ ಆಹಾರ ಫ್ಲ್ಯಾಕ್ಸ್ ಸೀಡ್ಸ್. ಅಂದ್ರೆ ಅಗಸಿ ಬೀಜ. ಹೃದಯದ ಆರೋಗ್ಯ, ಸೌಂದರ್ಯ, ಕೂದಲು ಉದುರುವ ಸಮಸ್ಯೆ ಎಲ್ಲದರಲ್ಲೂ ಈ ಅಗಸೆ ಬೀಜ ಸಹಾಯ ಮಾಡತ್ತೆ. ಅದೇ ರೀತಿ ಅಗಸೆ ಬೀಜದ ಸೇವನೆಯಿಂದ ಥೈರಾಯ್ಡ್ ಸಮಸ್ಯೆ ಕೂಡ ಕಡಿಮೆಯಾಗತ್ತೆ. ಅಗಸೆ ಬೀಜದ ಚಟ್ನಿ ಪುಡಿ ಮಾಡಿ, ಕೊಂಚ ಕೊಂಚ ತಿಂದರೂ ಉತ್ತಮ. ಇದರಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಇದು ನಿಮ್ಮ ದೇಹದ ತೂಕ ಇಳಿಸಲು ಸಹಕಾರಿಯಾಗಿದೆ. ನಿಮ್ಮ ದೇಹದ ತೂಕ ಕಡಿಮೆ ಇದ್ದರೆ ಥೈರಾಯ್ಡ್ ಪ್ರಾಬ್ಲಮ್ ಕೂಡ ಕಂಟ್ರೋಲಿನಲ್ಲಿರತ್ತೆ.

ಎರಡನೇಯ ಆಹಾರ ಮಶ್ರೂಮ್. ಮಶ್ರೂಮ್‌ನಿಂದ ರುಚಿಯಾದ ಗ್ರೇವಿ, ರೈಸ್ ಭಾತ್ ಮಾಡ್ತಾರೆ. ಆದ್ರೆ ನೀವು ಮಶ್ರೂಮ್ ಬಳಸುವಾಗ, ಆ ಪದಾರ್ಥವನ್ನು ಹೆಚ್ಚು ಖಾರ ಮಾಡದೇ, ಹೆಚ್ಚು ಉಪ್ಪು, ಹುಳಿ, ಖಾರ, ಮಸಾಲೆ ಬಳಸದೇ, ಪದಾರ್ಥ ಮಾಡಿ ತಿಂದರೆ ಅಷ್ಟೇ, ಅದರ ಲಾಭವನ್ನು ಪಡೆಯಬಹುದು. ಇದರ ಸೇವನೆಯಿಂದ ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗತ್ತೆ.

ಮೂರನೇಯ ಆಹಾರ ಈರುಳ್ಳಿ, ಬೆಳ್ಳುಳ್ಳಿ. ಈರುಳ್ಳಿಯನ್ನ ಹಸಿಯಾಗಿ ತಿಂದರೆ ಇನ್ನೂ ಉತ್ತಮ. ನಿಮಗೆ ಬೆಳ್ಳುಳ್ಳಿ ಹಸಿಯಾಗಿ ತಿನ್ನಲು ಆಗದಿದ್ದಲ್ಲಿ, ಬೆಳ್ಳುಳ್ಳಿಯನ್ನು ಹುರಿದು, ತಿನ್ನಬಹುದು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ. ಥೈರಾಯ್ಡ್‌ ಸಮಸ್ಯೆ ಇದ್ದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅಂಥವರು ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಬೇಕು.

ನಾಲ್ಕನೇಯ ಆಹಾರ ಹರಿವೆ ಸೊಪ್ಪು. ಹರಿವೆ ಸೊಪ್ಪು ಹಲವು ರೋಗಗಳಿಗೆ ರಾಮಬಾಣವಿದ್ದಂತೆ. ಗರ್ಭಿಣಿಯರು ಕೂಡ ಹರಿವೆ ಸೊಪ್ಪನ್ನ ಹೇರಳವಾಗಿ ತಿನ್ನಬೇಕು. ಇದರಿಂದ ಆರೋಗ್ಯ, ಸೌಂದರ್ಯ ಎರಡೂ ಅಭಿವೃದ್ಧಿಯಾಗತ್ತೆ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗತ್ತೆ. ಇದು ಗ್ಲುಟಿನ್ ಫ್ರೀಯಾಗಿದ್ದು, ಇಂಥ ಆಹಾರವನ್ನೇ ವೈದ್ಯರು, ಥೈರಾಯ್ಡ್ ರೋಗಿಗಳಿಗೆ ಬಳಸೋಕ್ಕೆ ಹೇಳ್ತಾರೆ.

ಐದನೇಯ ಆಹಾರ ನೆಲ್ಲಿಕಾಯಿ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಾಮಿನ್ ಸಿ ಸಿಕ್ಕರೆ, ಥೈರಾಯ್ಡ್ ಕಂಟ್ರೋಲಿನಲ್ಲಿರತ್ತೆ. ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನ ಕೂಡ ಹೆಚ್ಚಿಸುತ್ತೆ. ಅಲ್ಲದೇ ಇದರಲ್ಲಿ ಐರನ್ ಪ್ರಮಾಣ ಕೂಡ ಹೆಚ್ಚಾಗಿರತ್ತೆ. ನೀವು ಒಂದು ನೆಲ್ಲಿಕಾಯಿ ಸೇವಿಸುವುದು, 20 ಕಿತ್ತಳೆ ಹಣ್ಣು ತಿನ್ನುವುದಕ್ಕೆ ಸಮವಾಗಿರುತ್ತದೆ. ಹಾಗಾಗಿ ಪ್ರತಿದಿನ ನೀವು ಒಂದು ನೆಲ್ಲಿಕಾಯಿ ತಿಂದರೂ ಉತ್ತಮ.

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

- Advertisement -

Latest Posts

Don't Miss