ಹಿಂದೂ ಧರ್ಮದಲ್ಲಿ ಹಲವು ದೇವರು, ದೇವತೆಗಳನ್ನ ಪೂಜಿಸಲಾಗತ್ತೆ. ಶಿವ, ವಿಷ್ಣು, ಗಣೇಶ, ಹನುಮಂತ, ಕೃಷ್ಣ, ಸರಸ್ವತಿ, ಲಕ್ಷ್ಮೀ, ದುರ್ಗೆ ಹೀಗೆ ಹಲವಾರು ದೇವಿ, ದೇವತೆಗಳನ್ನ ನಾವು ಪೂಜಿಸುತ್ತೇವೆ. ಅದರಲ್ಲೂ ಕೃಷ್ಣ ಪರಮಾತ್ಮ ಹಲವರಿಗೆ ಇಷ್ಟ ದೇವರು. ಯಾಕಂದ್ರೆ ಅವನು ಅಲಂಕಾರ ಪ್ರಿಯ, ಅಲ್ಲದೇ, ಭಗವದ್ಗೀತೆಯ ಮೂಲಕ ಹಲವು ಜೀವನ ಪಾಠಗಳನ್ನು ಹೇಳಿದವ. ಇಂಥ ಶ್ರೀಕೃಷ್ಣ ಕಲಿಯುಗದ ಬಗ್ಗೆ 5 ಸತ್ಯಗಳನ್ನು ಹೇಳಿದ್ದಾನೆ. ಹಾಗಾದ್ರೆ ಆ ಸತ್ಯಗಳೇನು ಅಂತಾ ತಿಳಿಯೋಣ ಬನ್ನಿ..
ಇದು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆ.. ಗಜೇಂದ್ರ ಮೋಕ್ಷ..
ಮಹಾಭಾರತ ಕಾಲದಲ್ಲಿ ಪಾಂಡವರಿಗೆ ಕಲಿಯುಗದ ಬಗ್ಗೆ ತಿಳಿಯಲು ಕುತೂಹಲವಿತ್ತು. ಹಾಗಾಗಿ ಅವರು ಶ್ರೀಕೃಷ್ಣನಲ್ಲಿ, ಕಲಿಯುಗ ಎಂದರೇನು..? ಕಲಿಯುಗ ಹೇಗಿರುತ್ತದೆ..? ಕಲಿಯುದಲ್ಲಿ ಜನ ಹೇಗಿರುತ್ತಾರೆ ಎಂದು ಕೇಳುತ್ತಾರೆ. ಇದನ್ನು ಕೇಳಿದ ಶ್ರೀಕೃಷ್ಣ, ಪಾಂಡವರನ್ನ ಕಾಡಿಗೆ ಹೋಗಲು ಹೇಳಿದ. ಮತ್ತು ಅಲ್ಲಿ ನೀವೇನು ನೋಡುತ್ತೀರೋ, ಅದನ್ನ ವಿಸ್ತಾರವಾಗಿ ನನಗೆ ಹೇಳಬೇಕು ಎಂದು ಹೇಳುತ್ತಾನೆ. ಪಾಂಡವರು ಶ್ರೀಕೃಷ್ಣ ಹೇಳಿದಂತೆ, ಕಾಡಿಗೆ ಹೋಗುತ್ತಾರೆ. ಮತ್ತು ಅಲ್ಲಿ ಅವರೇನೇನು ನೋಡಿದರೋ, ಅದನ್ನ ವಿಸ್ತಾರವಾಗಿ ಹೇಳಲು ಶುರು ಮಾಡುತ್ತಾರೆ.
ಮೊದಲನೇಯದಾಗಿ ಯುಧಿಷ್ಠಿರ ಕಾಡಿನಲ್ಲಿ ಎರಡು ಸೊಂಡಿಲಿರುವ ಆನೆಯನ್ನು ನೋಡುತ್ತಾನೆ. ಶ್ರೀಕೃಷ್ಣನ ಬಳಿ ವಿಸ್ತಾರವಾಗಿ ಆ ಬಗ್ಗೆ ಹೇಳುತ್ತಾನೆ. ಆಗ ಶ್ರೀಕೃಷ್ಣ ಹೇಳುತ್ತಾನೆ, ಕಲಿಯುಗದಲ್ಲಿ ಇಂಥ ಜನರೇ ರಾಜ್ಯವಾಳುತ್ತಾರೆ. ಒಂದು ರೀತಿಯ ಹೇಳಿಕೆ ಕೊಟ್ಟ, ಇನ್ನೊಂದು ರೀತಿಯಲ್ಲಿ ಆಡಳಿತ ನಡೆಸುತ್ತಾರೆ.
ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..
ಎರಡನೇಯದಾಗಿ ಭೀಮ, ಕಾಡಿನಲ್ಲಿ ಒಂದು ಆಕಳು ತನ್ನ ಕರುವಿಗೆ ನಾಲಿಗೆಯಿಂದ ಮೈ ಸವರುತ್ತಿತ್ತು. ಹಾಗೆ ಸವರಿದಾಗ, ಆ ಕರುವಿನ ದೇಹದಿಂದ ರಕ್ತ ಸುರಿಯುತ್ತಿತ್ತು ಎಂದು ವಿವರಿಸುತ್ತಾನೆ. ಅದಕ್ಕೆ ಕೃಷ್ಣ, ಕಲಿಯುಗದಲ್ಲಿ ತಂದೆ ತಾಯಿ ಮಕ್ಕಳನ್ನು ಎಷ್ಟು ಪ್ರೀತಿಯಿಂದ ಬೆಳೆಸುತ್ತಾರೆಂದರೆ, ಅವರ ವಿಕಾಸವೇ ನಿಂತು ಹೋಗುತ್ತದೆ. ಅಂಥ ಮಕ್ಕಳು ಅಪ್ಪ ಅಮ್ಮನಿಗೆ ಗೌರವಿಸುವುದಿಲ್ಲ. ಪ್ರೀತಿ ಹಂಚುವುದಿಲ್ಲ ಎಂದು ಹೇಳುತ್ತಾನೆ.
ಇನ್ನುಳಿದ ಮೂರು ಸತ್ಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..