ಈ ವಿಷಯಕ್ಕೆ ಸಂಬಂಧಿಸಿದದಂತೆ ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣ ಪಾಂಡವರಿಗೆ ಹೇಳಿದ 5 ಸತ್ಯಗಳಲ್ಲಿ 2 ಸತ್ಯಗಳ ಬಗ್ಗೆ ಹೇಳಿದ್ದೆವು. ಈಗ ಇನ್ನುಳಿದ ಸತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೂರನೇಯದಾಗಿ ಅರ್ಜುನ ಹೇಳುತ್ತಾನೆ, ನಾನು ಒಂದು ಪಕ್ಷಿಯನ್ನು ಕಂಡೆ, ಅದರ ರೆಕ್ಕೆಗಳ ಮೇಲೆ, ವೇದ ಮಂತ್ರಗಳು ಬರೆದಿತ್ತು. ಆದರೆ ಅದು ಓರ್ವ ಮನುಷ್ಯನ ಮಾಂಸವನ್ನು ತಿನ್ನುತ್ತಿತ್ತು ಎನ್ನುತ್ತಾನೆ. ಅದಕ್ಕೆ ಉತ್ತರಿಸಿದ ಶ್ರೀಕೃಷ್ಣ, ಕಲಿಯುಗದಲ್ಲಿ ಇಂಥ ಜನರಿರುತ್ತಾರೆ. ಅವರನ್ನು ವಿದ್ವಾಂಸರೆಂದು ಕರೆಯುತ್ತಾರೆ. ಆದರೆ, ಅವರು ಇನ್ನೊಬ್ಬರ ಸಂಪತ್ತಿನ ಮೇಲೆ ಕಣ್ಣಿಟ್ಟಿರುತ್ತಾರೆ. ಅವರೆಷ್ಟೇ ಶ್ರೀಮಂತರಿದ್ದರು, ವಿದ್ಯಾವಂತರಿದ್ದರು, ಉತ್ತಮ ಸಂಸಾರ ಹೊಂದಿದ್ದರೂ, ಇನ್ನೊಬ್ಬರ ಸಂಪತ್ತಿನ ಮೇಲೆಯೇ ಅವರ ಕಣ್ಣಿರುತ್ತದೆ. ಅವರು ಕೂಡ ಈ ಪಕ್ಷಿಯಂತೆಯೇ, ಮೈಮೇಲೆ ವೇದ ಬರೆದುಕೊಂಡು, ಮನುಷ್ಯನ ಮಾಂಸ ತಿನ್ನುವವರಂತೆ ಬದುಕುತ್ತಾರೆ.
ಇದು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆ.. ಗಜೇಂದ್ರ ಮೋಕ್ಷ..
ನಾಲ್ಕನೇಯದಾಗಿ ನಕುಲ ಹೇಳಿದ, ನಾನು ಒಂದು ದೊಡ್ಡ ಕಲ್ಲು ಬಂಡೆ, ಉರುಳುವುದನ್ನು ಕಂಡೆ. ಅಲ್ಲಿ ಎಷ್ಟೋ ದೊಡ್ಡ ದೊಡ್ಡ ಮರಗಳಿದ್ದವು. ಆದ್ರೆ ಅವುಗಳಿಂದ ಆ ಬಂಡೆಯನ್ನು ತಡೆಯಲು ಆಗಲಿಲ್ಲ. ಆದ್ರೆ ಒಂದು ಚಿಕ್ಕ ಮರ ಆ ಬಂಡೆಯನ್ನು ತಡೆಯಿತು ಎಂದ. ಅದಕ್ಕೆ ಉತ್ತರಿಸಿದ ಶ್ರೀಕೃಷ್ಣ, ಕಲಿಯುಗದಲ್ಲಿ, ಆ ಕಲ್ಲು ಬಂಡೆಯಂತೆ, ಮನುಷ್ಯನ ಜೀವನ ಪತನವಾಗುತ್ತದೆ. ಅದನ್ನು ಹಣವೆಂದ ಮರದಿಂದ ತಡೆಯಲಾಗುವುದಿಲ್ಲ. ಬದಲಾಗಿ ಭಕ್ತಿ ಎನ್ನುವ ಪುಟ್ಟ ಮರ, ಆ ಜೀವನವನ್ನು ಮತ್ತೆ ಉತ್ತಮಗೊಳಿಸುತ್ತದೆ.
ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..
ಐದನೇಯದಾಗಿ ಸಹದೇವ, ನಾನೊಂದು ದೊಡ್ಡ ಬಾವಿ ನೋಡಿದೆ. ಅದರಲ್ಲಿ ಚಿಕ್ಕ ಚಿಕ್ಕ ಬಾವಿಗಳಿದ್ದವು. ಅದರಲ್ಲಿ ಮಧ್ಯದ ಬಾವಿಯಷ್ಟೇ ಖಾಲಿ ಇತ್ತು. ಅಕ್ಕ ಪಕ್ಕದ ಬಾವಿಗಳೆಲ್ಲ ತುಂಬಿತ್ತು. ಇದು ನನಗೆ ತುಂಬ ವಿಚಿತ್ರವೆನಿಸಿತ್ತು ಎಂದು ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಶ್ರೀಕೃಷ್ಣ, ಕಲಿಯುಗದಲ್ಲಿ ಶ್ರೀಮಂತರು ತಮ್ಮ ಮನೆಯ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ. ಆದ್ರೆ ಓರ್ವ ಭಿಕ್ಷುಕನಿಗೆ ದುಡ್ಡು ಕೊಡಲು ಹಿಂಜರಿಯುತ್ತಾರೆ. ಹಸಿದವರ ಹೊಟ್ಟೆ ತುಂಬಿಸಲು ಕಂಜೂಸುತನ ಮಾಡುತ್ತಾರೆ. ಕಾಮ, ಮದಿರೆ, ಸೇರಿಸ ಇನ್ನಿತರ ಚಟಗಳ ದಾಸರಾಗುತ್ತಾರೆ. ಇದರಲ್ಲಿ ಕೆಲವೇ ಕೆಲವು ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆಂದು ಎಂದು ಹೇಳುತ್ತಾನೆ.




