Spiritual: ಭಾರತದಲ್ಲಿರುವ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅರ್ಧ ದೇವಸ್ಥಾನವಿರುವುದೇ ಪಾರ್ವತಿಯದ್ದು. ಏಕೆಂದರೆ, ಆಕೆಯ ದೇಹದ 52 ಭಾಗಗಳು ಒಂದೊಂದು ದಿಕ್ಕಿಗೆ ಹೋಗಿ ಬಿದ್ದು, ಅದುವೇ 52 ಶಕ್ತಿ ಪೀಠಗಳಾಗಿದೆ. ಹಾಗಾದ್ರೆ ಪಾರ್ವತಿಯದ್ದೇ ರೂಪವಾಗಿದ್ದ ಸತಿಯ ದೇಹ 52 ತುಂಡುಗಳಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸತಿ ಶಿವನ ಭಕ್ತೆಯಾಗಿದ್ದಳು. ಅವನನ್ನೇ ವಿವಾಹವಾಗಿದ್ದಳು. ಆದರೆ ಸತಿಯ ತಂದೆ ದಕ್ಷ ರಾಜನಿಗೆ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಒಮ್ಮೆ ದಕ್ಷ ಪ್ರಜಾಪತಿ ಯಜ್ಞವನ್ನು ಏರ್ಪಡಿಸಿದ್ದ. ಆದರೆ ಶಿವನನ್ನು ಮತ್ತು ಸತಿಯನ್ನು ಬಿಟ್ಟು ಉಳಿದೆಲ್ಲರನ್ನೂ ದಕ್ಷ ಈ ಯಜ್ಞಕ್ಕೆ ಆಮಂತ್ರಿಸಿದ್ದ. ಇದರಿಂದ ಸತಿಗೆ ಬೇಸರವಾಗಿತ್ತು. ಸತಿ ಯಜ್ಞ ನಡೆಯುವ ಸ್ಥಳಕ್ಕೆ ಹೋಗಿ, ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದಳು. ಆಗ ದಕ್ಷ ಆಕೆಯ ಮನಸ್ಸಿಗೆ ನೋವಾಗುವಂತೆ, ಶಿವನನ್ನು ಹಂಗಿಸಿದ.
ತನ್ನನ್ನು ಮತ್ತು ತನ್ನ ಪತಿಯನ್ನು ಅವಮಾನಿಸಿದ್ದಕ್ಕೆ ಸತಿ ಯಜ್ಞ ಕುಂಡಕ್ಕೆ ಹಾರಿ, ಪ್ರಾಣ ತ್ಯಾಗ ಮಾಡುತ್ತಾಳೆ. ವಿಷಯ ತಿಳಿದ ಶಿವ, ಅಲ್ಲಿಗೆ ಹೋಗುತ್ತಾನೆ. ತನ್ನ ಮೂರನೇ ಕಣ್ಣು ತೆರೆದು, ತನ್ನದೇ ಅಂಶವಾದ ವೀರಭದ್ರ ಪ್ರಕಟವಾಗುತ್ತಾನೆ. ಶಿವ ತನ್ನ ಸತಿಯನ್ನು ಕೈಲಾಸಕ್ಕೆ ಹೊತ್ತುಕೊಂಡು ಬಂದು, ಸಿಟ್ಟಿನಿಂದ ತಾಂಡವವಾಡುತ್ತಾನೆ. ಅತ್ತ ವೀರಭದ್ರ, ದಕ್ಷನ ರುಂಡ ಕತ್ತರಿಸಿ, ಯಜ್ಞ ಕುಂಡಕ್ಕೆ ಹಾಕುತ್ತಾನೆ.
ಈ ಸಂದರ್ಭದಲ್ಲಿ ಇಡೀ ಲೋಕ ಅಲ್ಲೋಲ ಕಲ್ಲೋಲವಾಯಿತು. ಪ್ರಾಣಿ, ಪಕ್ಷಿ, ಮನುಷ್ಯರ ಜೊತೆಗೆ ದೇವಾನುದೇವತೆಗಳೆಲ್ಲ ಸೇರಿ, ಎಲ್ಲರೂ ತೊಂದರೆಗೆ ಒಳಪಟ್ಟರು. ಈ ವೇಳೆ ಎಲ್ಲರೂ ಸೇರಿ ವಿಷ್ಣುವಿನ ಬಳಿ ಹೋಗಿ, ಪರಿಹಾರ ಕೇಳಿದರು. ಆಗ ವಿಷ್ಣು ಲೋಕ ಕಲ್ಯಾಣಕ್ಕಾಗಿ, ಶಿವನಿಂದ ಸತಿಯನ್ನು ದೂರ ಮಾಡಲು ನಿರ್ಧರಿಸಿದ.
ಶಿವನ ಬಳಿ ಹೋಗಿ, ತಮ್ಮ ಸುದರ್ಶನ ಚಕ್ರದಿಂದ ಸತಿಯನ್ನು 52 ಭಾಗಗಳಾಗಿ ತುಂಡರಿಸಿದ. ಆಗ ಸತಿಯ ದೇಹ 52 ಭಾಗಗಳಾಗಿ, ಭೂಲೋಕದ ಹಲವು ಕಡೆ ಬಿದ್ದಿತು. ಅದರಲ್ಲಿ ಆಕೆಯ ಆಭರಣಗಳು ಕೂಡ ಸೇರಿದ್ದವು. ಹಾಗೆ ಸತಿಯ 52 ಭಾಗಗಳು ಬಿದ್ದ ಸ್ಥಳಗಳೇ ಶಕ್ತಿಪೀಠಗಳಾದವು.
ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನವೆಂಬ ಪ್ರಖ್ಯಾತಿ ಈ 2 ದೇವಾಲಯಕ್ಕಿದೆ..