Thursday, June 19, 2025

Latest Posts

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

- Advertisement -

ನಿಮಗೆ ಎಷ್ಟೇ ಬುದ್ಧಿವಂತಿಕೆ ಇದ್ದರೂ, ನೀವು ಎಷ್ಟೇ ಜಾಣರಿದ್ದರೂ, ನಿಮಗೆ ಕಾನ್ಫಿಡೆನ್ಸ್ ಇಲ್ಲದಿದ್ದಲ್ಲಿ, ಆ ಬುದ್ಧಿವಂತಿಕೆ, ಜಾಣತನದಿಂದ ನೀವೇನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವು ನಿಮ್ಮನ್ನು ಎಲ್ಲರೆದರು ಪ್ರಸ್ತುತ ಪಡಿಸಲು ಕಾನ್ಫಿಡೆನ್ಸ್ ಅನ್ನೋದು ತುಂಬಾ ಮುಖ್ಯ. ಆದ್ರೆ ಕೆಲವು ಕಾರಣಗಳಿಂದ ನಮ್ಮಲ್ಲಿರುವ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ. ಹಾಗಾದ್ರೆ ಆ ಕಾರಣಗಳೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..

ಮೊದಲನೇಯದಾಗಿ ನಿಮ್ಮ ಬಗ್ಗೆ ನೀವು ಕೀಳರಿಮೆ ಹೊಂದಿರುವುದು. ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಮೇಲೆ ತಮಗೇ ಕಾನ್ಫಿಡೆನ್ಸ್ ಇರುವುದಿಲ್ಲ. ಯಾಕಂದ್ರೆ ಇತರರಿಗೆ ನಿಮ್ಮ ಬಗ್ಗೆ ಇರುವ ಕೀಳುಮಟ್ಟದ ಅಭಿಪ್ರಾಯವನ್ನು ಕೇಳಿ, ನಿಮ್ಮ ಮೇಲಿನ ಕಾನ್ಫಿಡೆನ್ಸ್ ಕುಂದಿಹೋಗುತ್ತದೆ. ಅವನಿಗೆ ಸರಿಯಾಗಿ ಮಾತನಾಡೋಕ್ಕೆ ಬರೋದಿಲ್ಲ, ಅವಳಿಗೆ ಸರಿಯಾಗಿ ಅಡಿಗೆ ಮಾಡೋಕ್ಕೆ ಬರಲ್ಲ, ಅವನ್ಯಾವ ಕೆಲಸಕ್ಕೆ ಯೋಗ್ಯನಲ್ಲ ದಂಡ. ಹೀಗೆ ನಿಮ್ಮ ಮನೆಯವರೇ ಆಗಿರಬಹುದು, ಅಥವಾ ಹೊರಗಿನವರೇ ಆಗಿರಬಹುದು, ಈ ರೀತಿ ಆಡುವ ಮಾತಿಗೆ ಕಿವಿಗೊಟ್ಟು, ತಮ್ಮ ಬಗ್ಗೆಯೇ ಕೀಳರಿಮೆ ಪಡುತ್ತಾರೆ.

ನಿಮ್ಮ ಸ್ಕಿನ್ ಗ್ಲೋ ಆಗಲು ಜೇನುತುಪ್ಪವನ್ನು ಈ ರೀತಿಯಾಗಿ ಬಳಸಿ..

ಆದ್ರೆ ಹೀಗೆಂದೂ ಮಾಡಬೇಡಿ. ಅವರು ನಿಮಗೇನು ಬರುವುದಿಲ್ಲವೆಂದು ಹೇಳಿರುತ್ತಾರೋ, ಅದು ನನಗೆ ಬರುತ್ತದೆ ಎಂದು ನಿಮಗೆ ನೀವೇ ಸಾಬೀತುಪಡಿಸಿಕೊಳ್ಳುವಷ್ಟು ನೀವು ಕೆಲಸ ಮಾಡಬೇಕು. ನಿಮ್ಮ ಜೀವನ ಹೇಗಿರಬೇಕು ಎಂಬುದನ್ನು ಇನ್ನೊಬ್ಬರು ನಿರ್ಧಸುವ ಅವಕಾಶವನ್ನು ನೀವು ಮಾಡಿಕೊಡಬಾರದು. ಹೀಗಾಗಬೇಕು ಅಂದ್ರೆ ಕೀಳರಿಮೆ ಬಿಟ್ಟು, ನಾನು ಸಾಧಿಸಬಲ್ಲೆ, ಏನಾಗತ್ತೋ ನೋಡೇ ಬಿಡೋಣ ಅನ್ನೋ ಮನಸ್ಥಿತಿ ನಿಮ್ಮದಾಗಿಸಿಕೊಳ್ಳಿ.

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಎರಡನೇಯದಾಗಿ ಕ್ಷಮೆ ಕೇಳುವುದು ಒಳ್ಳೆಯದು. ಆದ್ರೆ ಅದು ನೀವು ತಪ್ಪು ಮಾಡಿದಾಗ, ತಪ್ಪು ನಿಮ್ಮದಿದ್ದಾಗ ಮಾತ್ರ. ಹಾಗಂತ, ಪ್ರತೀ ವಿಷಯಕ್ಕೂ ಎಲ್ಲರ ಬಳಿಯೂ ನೀವು ಸಾರಿ ಸಾರಿ ಸಾರಿ ಎಂದು ಗೋಗರೆದರೆ, ನಿಮ್ಮನ್ನು ಯಾರೂ ಗೌರವಿಸುವುದಿಲ್ಲ. ಬದಲಾಗಿ ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೆ. ಇದರಿಂದ ನಿಮ್ಮ ಕಾನ್ಫಿಡೆನ್ಸ್ ಲೆವಲ್ ಕಡಿಮೆಯಾಗುತ್ತದೆ. ಹಾಗಾಗಿ ಎಲ್ಲರೊಂದಿಗೂ ಪ್ರೀತಿ, ಕಾಳಜಿಯಿಂದ ಇರಿ. ಹಾಗಂತ, ಪದೇ ಪದೇ ಕ್ಷಮೆ ಕೇಳುವಷ್ಟು ಕೆಳಮಟ್ಟಕ್ಕಿಳಿಯಬೇಡಿ.

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ಮೂರನೇಯದಾಗಿ ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಳ್ಳುವುದು. ಅವನು ಎಷ್ಟು ಬುದ್ಧಿವಂತನಿದ್ದಾನೆ. ನಾನು ಅಷ್ಟು ಬುದ್ದಿವಂತನಿದ್ದೇನಾ..? ಅವನೆಷ್ಟು ಶ್ರೀಮಂತನಿದ್ದಾನೆ, ನಾನು ಅಷ್ಟು ಶ್ರೀಮಂತನಾಗಬಲ್ಲೆನಾ..? ಹೀಗೆ ಪ್ರತೀ ವಿಷಯದಲ್ಲೂ ನೀವು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ. ಅಥವಾ ನಿಮ್ಮಲ್ಲಿ ಯಾರಾದರೂ, ಅವನೆಷ್ಟು ಬುದ್ಧಿವಂತ, ಶ್ರೀಮಂತ, ಅವನೆಲ್ಲಿ ನೀನೇಲ್ಲಿ ಎಂದು ಹೀಯಾಳಿಸಬಹುದು. ಹಾಗಂತ ನೀವು ಅದರ ಬಗ್ಗೆ ಯೋಚಿಸಿ, ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ನೀವು ಜೀವನದಲ್ಲಿ ಯಶಸ್ಸು ಕಾಣಲು ಏನು ಮಾಡಬೇಕು ಅನ್ನೋದರ ಬಗ್ಗೆ ಗಮನ ಕೊಡಿ. ಯಾಕಂದ್ರೆ ಹೋಲಿಕೆ ಮಾಡುವವರು ಎಲ್ಲಿರುತ್ತಾರೋ ಅಲ್ಲೇ ಇರುತ್ತಾರೆ ಹೊರತು, ಉದ್ಧಾರವಾಗಲು ಸಾಧ್ಯವೇ ಇಲ್ಲ.

ಇನ್ನುಳಿದ ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss