Thursday, September 19, 2024

Latest Posts

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಯಾವ ಲಕ್ಷಣಗಳಿರುವವರು ಯಶಸ್ವಿಯಾಗುತ್ತಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 7 ಲಕ್ಷಣಗಳಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

ನಾಲ್ಕನೇಯದಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ. ಅದನ್ನು ಬಿಟ್ಟು ಸಮಸ್ಯೆಯನ್ನೇ ನೆಪವಾಗಿರಿಸಿಕೊಂಡು ಯಶಸ್ಸಿನ ಹಾದಿಗೆ ಬ್ರೇಕ್ ಹಾಕಬೇಡಿ. ಪ್ರಪಂಚದಲ್ಲಿರುವ ಯಶಸ್ವಿ ವ್ಯಕ್ತಿಗಳು ಹಲವು ಸಮಸ್ಯೆಗಳನ್ನು ಎದುರಿಸಿಯೇ, ಯಶಸ್ವಿಯಾಗಿರೋದು. ಅವರು ನನಗೆ ಈ ಸಮಸ್ಯೆ ಇದೆ, ಆ ಸಮಸ್ಯೆ ಇದೆ ಎಂದು ನೆಪ ಹೇಳಿಕೊಂಡು ಇದ್ದಿದ್ದರೆ, ಅವರು ಯಶಸ್ವಿಯಾಗುತ್ತಿರಲಿಲ್ಲ. ಹಾಗಾಗಿ ಸಮಸ್ಯೆಗೆ ಪರಿಹಾರ ಹುಡುಕಿ, ನೆಪವನ್ನಲ್ಲ.

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಐದನೇಯದಾಗಿ ನಿಮ್ಮ ಇಚ್ಛಾಶಕ್ತಿ ಉತ್ತಮವಾಗಿರಲಿ. ಇಚ್ಛಾಶಕ್ತಿಯನ್ನು ಇಂಗ್ಲೀಷಿನಲ್ಲಿ ವಿಲ್ ಪವರ್ ಎನ್ನಲಾಗತ್ತೆ. ಅಂದ್ರೆ ನಮ್ಮ ಆಸೆಯನ್ನು ನಾವು ಕಂಟ್ರೋಲ್ ಮಾಡುವುದು. ನಾವು ಜೀವನದಲ್ಲಿ ಸಕ್ಸಸ್ ಕಾಣಬೇಕು ಅಂದ್ರೆ, ಕೆಲವೊಂದು ಆಸೆಯನ್ನ ಕಂಟ್ರೋಲ್ ಮಾಡಬೇಕಾಗುತ್ತದೆ. ಹಾಗೇ ಮಾಡಿದಾಗಲೇ, ನಾವು ಯಶಸ್ಸು ಕಾಣೋಕ್ಕೆ ಸಾಧ್ಯವಾಗೋದು.

ಆರನೇಯದಾಗಿ ನಾನು ಈ ಜರ್ನಿಯಲ್ಲಿ ಫೇಲ್ ಆದ್ರೆ ಏನ್ಮಾಡ್ಲಿ ಅನ್ನೋ ಯೋಚನೆಯನ್ನು ಕಿತ್ತು ಹಾಕಿ. ಅಂದ್ರೆ ನೀವು ಯಾವುದಾದರೂ ಉದ್ಯಮ ಮಾಡಬೇಕು ಅಂತಾ ಇದ್ದೀರಿ ಎಂದಿಟ್ಟುಕೊಳ್ಳಿ. ಆಗ ನಾನು ಈ ಉದ್ಯಮದಲ್ಲಿ ನಷ್ಟ ಕಂಡ್ರೆ ಏನ್ಮಾಡ್ಲಿ..? ಅನ್ನೋ ಯೋಚನೆಯನ್ನು ತಲೆಯಿಂದ ತೆಗೆದು ಹಾಕಿ. ಅದರ ಬದ್ಲು, ನಷ್ಟ ಆದರೆ, ಅದನ್ನ ಹೇಗೆ ಕವರ್ ಮಾಡ್ಲಿ ಅನ್ನೋದನ್ನ ಯೋಚಿಸಿ. ನಷ್ಟವಾಗಿದ್ದನ್ನ, ಲಾಭಕ್ಕೆ ಹೇಗೆ ತಿರುಗಿಸಬೇಕು ಅನ್ನೋದನ್ನ ಯೋಚಿಸಿ.

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ಏಳನೇಯದಾಗಿ ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮಾಡಿ. ಎಲಾನ್ ಮಸ್ಕ್ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲಿಗ. ಇವರು ಈಗ ಆರಾಮವಾಗಿ ಕಾಲ ಕಳಿಯಬಹುದು. ಅಷ್ಟು ಆಸ್ತಿಯನ್ನು ಮಾಡಿದ್ದಾರೆ. ಆದ್ರೆ ಅವರು ಹಾಗೆ ಮಾಡುತ್ತಿಲ್ಲ. ಬದಲಾಗಿ ಅವರು ಬಿಲೇನಿಯರ್ ಆಗುವ ಮೊದಲು ಹೇಗೆ ದುಡಿಯುತ್ತಿದ್ದರೋ, ಅದೇ ರೀತಿ ಈಗಲೂ ದುಡಿಯುತ್ತಿದ್ದಾರೆ. ಹಾಗಾಗಿ ನೀವು ಬರೀ ಶ್ರೀಮಂತರಾಗುವ ಬಗ್ಗೆ ಯೋಚಿಸಬೇಡಿ. ಆ ಶ್ರೀಮಂತಿಕೆ ಉಳಿಸಿಕೊಳ್ಳುವ ಬುದ್ಧಿವಂತಿಕೆಯೂ ನಿಮ್ಮಲ್ಲಿರಬೇಕು. ಹಾಗಾಗಿ ಹಾರ್ಡ್‌ ವರ್ಕ್‌ ಜೊತೆ ಸ್ಮಾರ್ಟ್ ವರ್ಕ್ ಮಾಡೋದು ತುಂಬಾ ಮುಖ್ಯ.

- Advertisement -

Latest Posts

Don't Miss