Saturday, November 9, 2024

Latest Posts

ಬಾಣಂತನದಲ್ಲಿ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡುವುದು ಹೇಗೆ..?

- Advertisement -

Health tips: ಹೆಣ್ಣು ಹುಟ್ಟಿದಾಗಿನಿಂದ, ಸಾವಿನವರೆಗೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಸಮಾಜದ ಕಣ್ಣಿಗೆ ಅದೊಂದು ನ್ಯಾಚುರಲ್ ಮತ್ತು ನಾರ್ಮಲ್ ಸಂಗತಿಯಾಗಿದ್ದರೂ, ಅನನುಭವಿಸುವವಳಿಗೆ ಮಾತ್ರ ಅದು ದೊಡ್ಡದೇ. ಮೈನೆರೆಯುವುದು, ಮುಟ್ಟು, ಗರ್ಭಾವಸ್ಥೆ, ಬಾಣಂತನ, ಮುಟ್ಟು ನಿಲ್ಲುವ ಸಮಯ, ಇವೆಲ್ಲವೂ ಆಕೆಗೆ ಕಷ್ಟವಾದುದ್ದೇ. ಅದರಲ್ಲೂ ಮಗು ಹುಟ್ಟಿದ ಬಳಿಕ, ಹೊಟ್ಟೆ ಮೇಲೆ ಮೂಡುವ ಗೆರೆ, ಆಕೆಯ ದೆಹದ ಸಂಪೂರ್ಣ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾವಿಂದು ಸ್ಟ್ರೆಚ್ ಮಾರ್ಕ್‌ನಿಂದ ಮುಕ್ತಿ ಪಡೆಯುವುದು ಹೇಗೆ ಅಂತಾ ತಿಳಿಸಲಿದ್ದೇವೆ.

ಮೊದಲನೇಯ ಟಿಪ್ಸ್. ತೆಂಗಿನ ಎಣ್ಣೆ ಮತ್ತು ಬಾದಾಮ್ ಎಣ್ಣೆಯನ್ನು ಸಮಾನ ಮಾತ್ರದಲ್ಲಿ ತೆಗೆದುಕೊಳ್ಳಬೇಕು. ಅಂದ್ರೆ 2 ಸ್ಪೂನ್ ತೆಂಗಿನ ಎಣ್ಣೆ ಮತ್ತು 2 ಸ್ಪೂನ್ ಬಾದಾಮ್ ಎಣ್ಣೆ. ನಿಮ್ಮ ಹೊಟ್ಟೆ ಎಷ್ಟು ದೊಡ್ಡದಿದೆ, ಅಥವಾ ಅಗಲವಿದೆ ಎನ್ನುವುದರ ಮೇಲೆ ಇದು ಡಿಪೆಂಡ್ ಆಗಿರುತ್ತದೆ. ಎರಡನ್ನೂ ಮಿಕ್ಸ್ ಮಾಡಿ, ಹೊಟ್ಟೆಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು. ಪ್ರತಿರಾತ್ರಿ ಈ ರೀತಿ ಮಸಾಜ್ ಮಾಡಿ, ಬೆಳಿಗ್ಗೆ ಎದ್ದು ಸ್ನಾನ ಮಾಡಿ.

ಇನ್ನು ಹೆಚ್ಚು ನೀರು ಕುಡಿಯಬೇಕು. ನಾವು ಎಷ್ಟು ನೀರು ಕುಡಿಯುತ್ತೆವೋ, ಅಷ್ಟು ನಮ್ಮ ಸ್ಕಿನ್ ಕ್ರ್ಯಾಕ್ ಆಗುವುದು ಕಡಿಮೆಯಾಗುತ್ತದೆ. ಮತ್ತು ನಿಮ್ಮ ಹೊಟ್ಟೆಯ ಮೇಲಿರುವ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ. ಜೊತೆಗೆ ವಿಟಾಮಿನ್ ಸಿಯಿಂದ ಭರಪೂರವಾದ ಹಣ್ಣನ್ನು ತಿನ್ನಬೇಕು. ಕಿವಿಫ್ರೂಟ್, ಕಿತ್ತಳೆ ಹಣ್ಣು, ಮೂಸಂಬಿ ಹಣ್ಣು ಸೇರಿ, ವಿಟಾಮಿನ್ ಸಿ ಇರುವ ಹಣ್ಣನ್ನು ಪ್ರತಿದಿನ ಮಿತವಾಗಿ ಸೇವಿಸಬೇಕು.

ಹಸಿರು ಸೊಪ್ಪು, ಹಸಿ ತರಕಾರಿ, ಮೊಳಕೆ ಬರಿಸಿದ ಕಾಳು, ಡ್ರೈಫ್ರೂಟ್ಸ್ ಎಲ್ಲದರ ಸೇವನೆಯೂ ನಿಮ್ಮ ತ್ವಚೆಯನ್ನು ಚಂದಗೊಳಿಸುತ್ತದೆ. ದೇಹದಲ್ಲಿನ ಆರೋಗ್ಯವನ್ನೂ ಚೆನ್ನಾಗಿ ಇಟ್ಟಿರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಕೊನೆಯದಾಗಿ ಆದಷ್ಟು ಯೋಗಾಸನವನ್ನು ಕಲಿತು, ಸರಿಯಾದ ರೀತಿಯಲ್ಲಿ ಮಾಡಿ. ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾದಾಗ, ಯಾವ ತೊಂದರೆಯೂ ಆಗುವುದಿಲ್ಲ. ಹಾಗೆ ಆಗಬೇಕು ಅಂದ್ರೆ, ನೀವು ಯೋಗ ಮಾಡಬೇಕು. ಇದರಿಂದ ಸೌಂದರ್ಯ ಮತ್ತು ಆರೋಗ್ಯ ಎಲ್ಲವೂ ಚೆನ್ನಾಗಿರುತ್ತದೆ.

- Advertisement -

Latest Posts

Don't Miss