Tuesday, December 3, 2024

Latest Posts

ಪಾಕಿಸ್ತಾನಕ್ಕೆ ಕ್ರಿಕೆಟ್ ಶಾಕ್ – ಭಾರತದ ಏಟಿಗೆ ಕೋಟಿ ಕೋಟಿ ನಷ್ಟ

- Advertisement -

ಭಾರತ ಹಾಗೇ ಪಾಕಿಸ್ತಾನದ ನಡುವಿನ ಫೈಟ್​​​ ಶುರುವಾಗಿ 77 ವರ್ಷ ಆಯ್ತು. ಈವರೆಗೂ ಈ ಎರಡು ದೇಶಗಳ ನಡುವಿನ ವೈರತ್ವ ಕಡಿಮೆಯೇ ಆಗಿಲ್ಲ.. ಕ್ರಿಕೆಟ್ ಮ್ಯಾಚ್​ನಿಂದ ಹಿಡಿದು, ಗಡಿಯಲ್ಲಿನ ಸೈನಿಕರವರೆಗೂ ಎರಡೂ ದೇಶಗಳ ಫೈಟ್ ಜೋರಾಗೇ ಇರುತ್ತೆ. ಈಗ ಮತ್ತೆ ಕ್ರಿಕೆಟ್ ವಿಚಾರದಲ್ಲಿ ಭಾರತ-ಪಾಕಿಸ್ತಾನ ಸಮರ ಶುರುವಾಗಿದೆ. ಈ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತೆ ಎನ್ನಲಾಗ್ತಿದೆ. ಆದ್ರೆ ಅದು ಅಧಿಕೃತ ಆಗೋಕೆ ಮುಂಚೆಯೇ ಭಾರತ, ಪಾಕಿಸ್ತಾನಕ್ಕೆ ಭಾರಿ ಆಘಾತ ಒಂದನ್ನ ಕೊಟ್ಟಿದೆ.

2025ರಲ್ಲಿ ನಡೆಯಲಿರೋ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಈ ಬಾರಿ ಪಾಕಿಸ್ತಾನದಲ್ಲಿ ನಡೀತಿದೆ.. ಫೆಬ್ರವರಿ 19ರಿಂದ ಮಾರ್ಚ್ 9ವರೆಗೂ ಈ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದ್ರೆ ಈ ಟೂರ್ನಮೆಂಟ್ ಮಾತ್ರ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡ್ತಿದೆ.. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಿರೋ ಕಾರಣಕ್ಕೆ, ಕೆಲ ದೇಶಗಳು ಪಾಲ್ಗೊಳ್ಳೋಕೆ ಈಗಾಗ್ಲೇ ಹಿಂದೇಟು ಹಾಕಿದೆ. ಅದ್ರಲ್ಲೂ ಬಿಸಿಸಿಐ ಮಾತ್ರ ಭದ್ರತೆಯ ಕಾರಣ ನೀಡಿ ಪಾಕ್​​ನಲ್ಲಿ ಆಡೋಕೆ ಆಗಲ್ಲ ಅಂತ ಹೇಳ್ತಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಿದ್ರೆ ಮಾತ್ರ ಪಾಲ್ಗೊಳ್ತೀವಿ ಅಂತ ಭಾರತ ಹೇಳಿದೆ. ಆದ್ರೆ ಪಾಕಿಸ್ತಾನ ಮಾತ್ರ ಒಂದಿಲ್ಲೊಂದು ಕಾರಣ ನೀಡಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಸಾಧ್ಯವಿಲ್ಲ ಅಂತಿದೆ.

ಉಗ್ರವಾದ ಹಾಗೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರೋ ಪಾಕಿಸ್ತಾನಕ್ಕೆ 28 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆ ಮಾಡುವ ಅವಕಾಶ ಸಿಕ್ಕಿದೆ. ಇದನ್ನ ಕಳೆದುಕೊಳ್ಳೋಕೆ ಪಾಕ್ ಸರ್ಕಾರ ಹಾಗೇ ಅಲ್ಲಿನ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ. ಹೀಗಾಗಿ ಹೇಗಾದ್ರೂ ಮಾಡಿ ಭಾರತವನ್ನ ಒಪ್ಪಿಸಬೇಕು ಅಂತ ಶತಪ್ರಯತ್ನ ನಡೆಸ್ತಿದೆ. ಟೀಂ ಇಂಡಿಯಾದ ಎಲ್ಲಾ ಪಂದ್ಯಗಳನ್ನೂ ಲಾಹೋರ್​​​​ನ ಗಡಾಫಿ ಕ್ರೀಡಾಂಗಣದಲ್ಲಿ ಭಿಗಿಭದ್ರತೆಯೊಂದಿಗೆ ನಡೆಸ್ತೀವಿ ಅಂತ ಹೇಳಿಕೊಳ್ತಿದೆ.

-ಪಾಕಿಸ್ತಾನಕ್ಕೆ ಭಾರತದ ಗೈರಿನ ಭಯ..!
ಇಡೀ ವಿಶ್ವದಲ್ಲೇ ಭಾರತದ ಬಿಸಿಸಿಐ ನಂಬರ್ 1 ಶ್ರೀಮಂತ ಕ್ರಿಕೆಟ್ ಸಂಸ್ಥೆ.. ಭಾರತ ಈ ಟೂರ್ನಿಯಲ್ಲಿ ಪಾಲ್ಗೊಂಡ್ರೆ ಮಾತ್ರವೇ ಪಾಕಿಸ್ತಾನಕ್ಕೂ ಲಾಭ ಆಗೋದು.. ಭಾರತ ಒಂದ್ವೇಳೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ರೆ ಟೂರ್ನಿಯೇ ಸಪ್ಪೆ ಸಪ್ಪೆ ಆಗಿಬಿಡುತ್ತೆ… ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದರೆ ಅದರಿಂದ ಆರ್ಥಿಕವಾಗಿಯೂ ಪಾಕಿಸ್ತಾನಕ್ಕೆ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಹಾಗೂ ಸರ್ಕಾರ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಕಡ್ಡಿ ಮರಿದಂತೆ ಹೇಳಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತ್ನದ ಆಟಗಾರರು ಹಾಗೂ ಒಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ಡ್ ನಿರ್ಮಿಸುತ್ತಿರುವುದಾಗಿ ಪಿಸಿಬಿ ತಿಳಿಸಿದೆ. ಆದ್ರೆ ಭಾರತ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ.

ʻಚಾಂಪಿಯನ್ಸ್‌ ಟ್ರೋಫಿʼಯ ಆತಿಥ್ಯ ಪಾಕ್‌ ಬಳಿಯೇ ಇದ್ದರೂ, ವಿಶ್ವದ ಪವರ್‌ಫುಲ್‌ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಬಿಸಿಸಿಐ ಬಿಲ್‌ಕುಲ್‌ ಬರಲ್ಲ ಎಂದು ಹೇಳಿದ್ದರೂ, ಪಾಕ್‌ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಭಾರತ ಬಾರದಿದ್ದರೂ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಸುವುದಾಗಿ ಪಟ್ಟು ಹಿಡಿದಿದೆ. ಅಲ್ಲದೇ ಟೀಂ ಇಂಡಿಯಾ ಪಾಕ್‌ಗೆ ಪ್ರಯಾಣಿಸದಿರಲು ಲಿಖಿತ ರೂಪದಲ್ಲಿ ಐಸಿಸಿಗೆ ಕಾರಣ ತಿಳಿಸುವಂತೆ ಹೇಳಿತ್ತು. ಅದರಂತೆ ಬಿಸಿಸಿಐ ಐಸಿಸಿಗೆ ಕಾರಣ ತಿಳಿಸಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಬಿಸಿಸಿಐಗೆ ಕಳವಳವಿದೆ. ಈಗ ಗಡಿಯಾಚೆಗೆ ಭಯೋತ್ಪಾದನೆ ನಡೆಯುತ್ತಿದೆ. ಭಾರತೀಯ ಕ್ರಿಕೆಟ್‌ ತಂಡ ಸಾಮಾನ್ಯರಿಂದ ಪ್ರೀತಿ ಗಳಿಸಬಹುದಾದರೂ ಉಗ್ರರಿಂದ ದಾಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ. 2009ರ ಟಿ20 ವಿಶ್ವಕಪ್‌ ವೇಳೆ ಶ್ರೀಲಂಕಾ ತಂಡದ ಮೇಲೆ ಆಗಿದ್ದ ದಾಳಿಯೇ ಇದಕ್ಕೆ ಉದಾಹರಣೆ ಎಂದು ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ..

ಈ ಉತ್ತರ ಕಂಡ ಐಸಿಸಿ 3 ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ. ಪಂದ್ಯಾವಳಿಯ 15 ಪಂದ್ಯಗಳಲ್ಲಿ 5 ಪಂದ್ಯಗಳನ್ನ ಯುಎಇಗೆ ಶಿಫ್ಟ್ ಮಾಡಬೇಕಾಗುತ್ತೆ.. ಅಲ್ಲಿ ಭಾರತದ ಪಂದ್ಯಗಳು ನಡೆಯುವಂತೆ ನೋಡ್ಕೋಬೇಕಾಗುತ್ತೆ.. ಇಲ್ಲದಿದ್ರೆ ಚಾಂಪಿಯನ್ಸ್ ಟ್ರೋಫಿಯನ್ನೇ ಪಾಕಿಸ್ತಾನದಿಂದ ತೆಗೆದುಹಾಕಬೇಕಾಗುತ್ತೆ.. ಆದ್ರೆ ಆಗ ಪಾಕಿಸ್ತಾನ ಈ ಟೂರ್ನಿಯಲ್ಲಿ ಪಾಲ್ಗೊಳ್ಳೋದಿಲ್ಲ.. ಇನ್ನು ಇರೋ 3ನೇ OPTION ಅಂದ್ರೆ, ಅನಿರ್ದಿಷ್ಟಾವಧಿವರೆಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನೇ ಮುಂದೂಡಬೇಕಾಗುತ್ತೆ.. 2006ರಲ್ಲಿ ಕಡೇ ಬಾರಿ ಭಾರತ, ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.. ಅದಾದ್ಮೇಲೆ ಭಾರತ ಟೀಂ ಪಾಕ್​​ಗೆ ಹೋಗಿ ಆಡಿಲ್ಲ

– ಶ್ರೀಲಂಕಾ ಮೇಲೆ ನಡೆದಿತ್ತು ದಾಳಿ
2009ರ ಮಾರ್ಚ್​​​ನಲ್ಲಿ ಶ್ರೀಲಂಕಾ ಟೀಂ ಪಾಕಿಸ್ತಾನದ ಲಾಹೋರ್​​ನ ಗಡಾಫಿ ಸ್ಟೇಡಿಯಂನಲ್ಲಿ ಟೆಸ್ಟ್​​ ಮ್ಯಾಚ್ ಆಡ್ತಿತ್ತು.. 3ನೇ ದಿನದ ಆಟ ಆಡೋಕೆ ಅಂತ ಲಂಕಾ ಕ್ರಿಕೆಟ್ ಟೀಂ ಸ್ಟೇಡಿಯಂಗೆ ಬಸ್​​ನಲ್ಲಿ ಬರ್ತಿದ್ರು . ಈ ಅವಧಿಯಲ್ಲಿ 12 ಮಂದಿ ಬಂಧೂಕುದಾರಿಗಳು ಕ್ರಿಕೆಟಿಗರಿದ್ದ ಬಸ್​​ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಿದ್ರು.. ಆಗ 6 ಮಂದಿ ಲಂಕಾ ಆಟಗಾರರು ಗಾಯಗೊಂಡ್ರು.. 6 ಮಂದಿ ಪಾಕಿಸ್ತಾನಿ ಪೊಲೀಸರು ಸಾವನ್ನಪ್ಪಿದ್ರು. ಉಳಿದ ಆಟಗಾರರು ಬಚಾವ್ ಆದ್ರು.. ಈ ಘಟನೆ ಬಳಿಕ, ಟೀಂ ಇಂಡಿಯಾ ಕೂಡ ಪಾಕಿಸ್ತಾನಕ್ಕೆ ಹೋಗಲು ಇಷ್ಟ ಪಟ್ಟಿಲ್ಲ..

ಈಗ ಚಿನ್ನದ ಮೂಟೆ ಆಗಿರೋ ಬಿಸಿಸಿಐ ತನ್ನ ಟೀಂ ಅನ್ನು ಪಾಕಿಸ್ತಾನಕ್ಕೆ ಕಳಿಸಲು ಇಷ್ಟ ಪಡ್ತಿಲ್ಲ.. ಹೀಗಾಗಿ ಐಸಿಸಿ ಸ್ಥಳಬದಲಾವಣೆಗೆ ಯೋಚಿಸಿದೆ…

– ಪಾಕ್​​​ನಲ್ಲಿ ಟ್ರೋಫಿ ಪ್ರವಾಸ
ಇದರ ನಡುವೆಯೂ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನಕ್ಕೆ ಬಂದಿದ್ದು, ಅದರ ಪ್ರವಾಸ ಆರಂಭವಾಗಿದೆ. ಇಡೀ ಪಾಕಿಸ್ತಾನದಲ್ಲಿ ಟ್ರೋಫಿ ಹೊತ್ತ ವಾಹನ ಮೆರವಣಿಗೆ ನಡೆಸ್ತಿದೆ.. ಆದ್ರೆ ಭಾರತ ಇದೇ ವೇಳೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಒಂದನ್ನ ಕೊಟ್ಟಿದೆ.. ಟ್ರೋಫಿಯ ಮೆರವಣಿಗೆ ಪಾಕಿಸ್ತಾನದಲ್ಲಷ್ಟೇ ಮಾಡಬೇಕು. ಆದ್ರೆ ಜಮ್ಮೂ ಕಾಶ್ಮೀರದ ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ತರುವಂತಿಲ್ಲ ಅಂತ ಎಚ್ಚರಿಸಿದೆ.. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಟ್ರೋಫಿ ಪ್ರವಾಸಕ್ಕೆ ಐಸಿಸಿ ಕೂಡ ನಿಷೇಧ ಹೇರಿದೆ. ನವೆಂಬರ್ 16 ರಿಂದ ನವೆಂಬರ್ 24 ರವರೆಗೆ ಪಾಕಿಸ್ತಾನದಾದ್ಯಂತ ಟ್ರೋಫಿ ಇರೋ ವಾಹನ ಪ್ರವಾಸ ಹೋಗ್ತಿದೆ. ಇದನ್ನು K2 ಪರ್ವತ ಶಿಖರ ಸೇರಿ ಪಾಕಿಸ್ತಾನ ಸರ್ಕಾರ ಪಿಒಕೆಯ ಮೂರು ನಗರಗಳಾದ ಸ್ಕಾರ್ಡು, ಮುರ್ರಿ, ಮುಜಫರಾಬಾದ್‌ಗಳಿಗೆ ಕೊಂಡೊಯ್ಯಲು ನಿರ್ಧರಿಸಿತ್ತು. ಆದರೆ ಭಾರತದ ಆಕ್ಷೇಪಣೆಯ ನಂತರ ಐಸಿಸಿ ಪಿಒಕೆಗೆ ಟ್ರೋಫಿ ಕೊಂಡೊಯ್ಯುವುದನ್ನು ನಿಷೇಧಿಸಿದೆ.

ಭಾರತ ಪಾಕ್ನಲ್ಲಿ ಆಡಲ್ಲ ಅಂತ ಗೊತ್ತಾದ ಕಾರಣ, ಈ ಎಲ್ಲ ಪಂದ್ಯಗಳು ದುಬೈನಲ್ಲೇ ನಡೆಯೋ ಸಾಧ್ಯತೆ ಇದೆ.. ದಿನಾಂಕ ಪ್ರಕಟ ಆದ್ರೂ, ಸ್ಥಳ ಹಾಗೂ ವೇಳಾಪಟ್ಟಿ ಇನ್ನೂ ಫೈನಲ್ ಆಗಿಲ್ಲ.. ಪಾಕಿಸ್ತಾನವು ಹೈಬ್ರಿಡ್ ಮಾದರಿಗೆ ಸಿದ್ಧವಾಗದ ಕಾರಣ, ವೇಳಾಪಟ್ಟಿ ಪ್ರಕಟಣೆ ವಿಳಂಬವಾಗುತ್ತಿದೆ. ಇದೇ ಮೊದಲ ಬಾರಿಗೆ, ಯಾವುದೇ ಅಧಿಕೃತ ಪಂದ್ಯಾವಳಿಯ ವೇಳಾಪಟ್ಟಿಯಿಲ್ಲದೆ ಟ್ರೋಫಿಯ ಪ್ರದರ್ಶನ ನಡೆಯುತ್ತಿದೆ. ಸಾಮಾನ್ಯವಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕನಿಷ್ಠ 100 ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ. ಇದರ ನಂತರವೇ ಟ್ರೋಫಿಯ ಪ್ರದರ್ಶನ ನಡಿಬೇಕಾಗಿತ್ತು

– ಪಾಕಿಸ್ತಾನಕ್ಕೆ 548 ಕೋಟಿ ನಷ್ಟ!
ಈಗ ಪಾಕಿಸ್ತಾನದಲ್ಲಿ ಭಾರತ ಏನೋ ಆಡಲ್ಲ.. ಒಂದ್ವೇಳೆ ಪಿಸಿಬಿ ಹೈಬ್ರಿಡ್ ಮೋಡ್​​ಗೆ ಒಪ್ಪದೆ ಟೂರ್ನಿಯಿಂದ ಹಿಂದೆ ಸರಿದ್ರೆ ಭಾರಿ ನಷ್ಟ ಎದುರಿಸಬೇಕಾಗುತ್ತೆ.. ಪಾಕಿಸ್ತಾನ ಮಂಡಳಿಗೆ ಐಸಿಸಿ ಒದಗಿಸಿರುವ ಆಯೋಜನೆ ಹಕ್ಕನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಪಂದ್ಯಾವಳಿಯ ಆತಿಥ್ಯವನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಿದರೆ ಅಥವಾ ಮುಂದೂಡಿದರೆ, ಆತಿಥ್ಯ ಶುಲ್ಕವಾಗಿ ಪಡೆಯಬೇಕಾಗಿರುವ ಸುಮಾರು 548 ಕೋಟಿ ರೂಪಾಯಿಗಳನ್ನು ಪಾಕಿಸ್ತಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

- Advertisement -

Latest Posts

Don't Miss