ಕುವೈತ್ ಖಾಲಿ ಮಾಡಬೇಕಿದೆ 8 ಲಕ್ಷ ಭಾರತೀಯರು

ಕರ್ನಾಟಕ ಟಿವಿ : ಇನ್ನು ಕುವೈತ್ ನಿಂದ ವಲಸಿಗರನ್ನ ಹೊರಹಾಕುವ ಪ್ರಕ್ರಿಯೆಗೆ ಅಂತಿಮ ಮುದ್ರೆ ದೊರಕಿದೆ. ನಿನ್ನೆ ಈ ಮಸೂದೆಗೆ ಒಂದು ಕಮಿಟಿ ಅನುಮತಿಯನ್ನ ನೀಡಬೇಕಿತ್ತು, ಅಂದು ಕಮಿಟಿ ಅನುಮತಿ ನೀಡಿದ್ದು ಹೊಸ ಕಾಯ್ದೆಯ ಪ್ರಕಾರ ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯ ಬೇಕಿದೆ.. 45 ಲಕ್ಷ ಕುವೈತ್ ಜನಸಂಖ್ಯೆಯಲ್ಲಿ 30 % ಮಾತ್ರ ಮೂಲ ನಿವಾಸಿಗಳು ಅಂತ್ರೆ 13 ಲಕ್ಷ ಮಾತ್ರ. ಇಲ್ಲಿ 14 ಲಕ್ಷ ಭಾರತೀಯರಿದ್ದು ಪ್ರಸ್ತುತ ಇರುವ ಜನಸಂಖ್ಯೆ 15% ಭಾರತೀಯರ ಹೆಚ್ಚಾಗಿ ವಾಸಿಸುವಂತಿಲ್ಲ.. ಹೀಗಾಗಿ 6.5-7 ಲಕ್ಷ ಭಾರತೀಯರರು ಕುವೈತ್ ನಲ್ಲಿ ಉಳಿಯಬಹುದು.. ಹೆಚ್ಚುವರಿಯಾದ 8 ಲಕ್ಷ ಭಾರತೀಯರು ವಾಪಸ್ ತಾಯ್ನಾಡಿಗೆ ಮರಳಬೇಕಿದೆ.. ವಾರ್ಷಿಕ 35 ಸಾವಿರ ಕೋಟಿ ಹಣ ಕುವೈತ್ ನಿಂದ ಭಾರತಕ್ಕೆ ಹರಿದುಬರ್ತಿತ್ತು ಅಂದ್ರೆ, ಅಲ್ಲಿರುವ ಭಾರತೀಯರು ದುಡಿದು 35 ಸಾಔಇರ ಕೋಟಿ ಹಣವನ್ನ ಭಾರತದಲ್ಲಿರುವ ಪೋಷಕರಿಗೆ ಕಳುಹಿಸ್ತಿದ್ರು.. ಇದೀಗ ತೈಲ ಬೆಲೆ ಕುಸಿತದಿಂದ ಕುವೈತ್ ಸೇರಿದಂತ ತೈಲವನ್ನ ನೆಚ್ಚಿಕೊಂಡ ರಾಷ್ಟ್ರಗಳು ನೆಲಕಚ್ಚಿವೆ.

ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,

ನೀವೂ ಚೀನಾ ಆ್ಯಪ್ ಗಳನ್ನ  ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ

About The Author