Wednesday, February 5, 2025

Latest Posts

ಯಾರ ಗುಟ್ಟನ್ನೂ ಬಿಟ್ಟುಕೊಡದೇ, ನಿಯತ್ತಿನಿಂದ ಇರುವ ರಾಶಿಯವರು ಇವರು

- Advertisement -

Spiritual: ನೀವು ಗಮನಿಸಿರಬಹುದು. ಹೆಣ್ಣು ಮಕ್ಕಳಲ್ಲಿ ಯಾವುದೇ ಸಿಕ್ರೇಟ್ ಉಳಿಯುವುದಿಲ್ಲ. ಅವರ ಬಳಿ ಯಾವುದೇ ವಿಷಯ ಹೇಳಿದ್ರು, ಅದನ್ನು ಅವರು ಬೇರೆಯವರಿಗೆ ಹೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಹಣ್ಣು ಮಕ್ಕಳಲ್ಲೂ ಗುಟ್ಟು ಬಿಟ್ಟುಕೊಡದ ಸ್ವಭಾವದವರೂ ಇದ್ದಾರೆ. ಇಂದು ನಾವು ಆ ರಾಶಿಯವರ ಬಗ್ಗೆ ಹೇಳಲಿದ್ದೇವೆ.

ಮಕರ ರಾಶಿ: ಮಕರ ರಾಶಿಯವರ ಬಳಿ ನೀವೇನಾದರೂ ಗುಟ್ಟು ಹೇಳಿದ್ರೆ, ಅದು ಅವರ ಬಳಿ ಸೇಫ್ ಆಗಿರತ್ತೆ. ಯಾಕಂದ್ರೆ ಈ ರಾಶಿಯವರು ಬೇಡದ ವಿಷಯಗಳನ್ನು ತಲೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಅಲ್ಲದೇ, ತಮ್ಮ ಜೀವನದ ಬಗ್ಗೆ ಬಿಟ್ಟರೆ, ತಮ್ಮ ಗುರಿ ತಲುಪುದು ಬಿಟ್ಟರೆ, ಬೇರೆಯವರ ವಿಷಯದಲ್ಲಿ ಇವರಿಗೆ ಅಂಥ ಇಂಟ್ರೆಸ್ಟ್ ಇರೋದಿಲ್ಲ. ಹಾಾಗಾಗಿ ಇವರು ಈ ಕಿವಿಯಿಂದ ಕೇಳಿಸಿಕೊಂಡು, ಆ ಕಿವಿಯಿಂದ ಹೊರಹಾಕುತ್ತಾರೆ.

ಕರ್ಕ ರಾಶಿ: ಕರ್ಕ ರಾಶಿಯವರು ಯಾರ ಸುದ್ದಿಗೂ ಹೋಗಲು ಬಯಸುವವರಲ್ಲ. ತಮ್ಮ ಸುದ್ದಿ ಬಂದವರನ್ನು ಕ್ಷಮಿಸುವವರೂ ಅಲ್ಲ. ಹಾಗಂತ ಇವರು ಜಗಳಗಂಟರೂ ಅಲ್ಲ. ಈ ರಾಶಿಯವರಲ್ಲಿರುವ ನಿಯತ್ತಿನ ಗುಣವೇ ಇವರನ್ನು ಕಾಪಾಡುತ್ತದೆ. ಇದೇ ನಿಯತ್ತಿನಿಂದಲೇ, ಬೇರೆಯವರು ಇವರಿಗೆ ಹೇಳುವ ಗುಟ್ಟನ್ನು ಇವರು ತಮ್ಮ ಮನಸ್ಸಿನಲ್ಲಿಯೇ, ಇಟ್ಟುಕೊಳ್ಳುತ್ತಾರೆ ಹೊರತು, ಬೇರೆಯವರಿಗೆ ಹೇಳಲು ಹೋಗುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಸಿಟ್ಟಿನ ಗುಣ ಉಳ್ಳವರು. ಆದರೆ ಇವರಿಗೆ ಎಷ್ಟು ಸಿಟ್ಟೋ, ಅಷ್ಟೇ ಕಾಳಜಿಯ ಗುಣವಿರುತ್ತದೆ. ಅಲ್ಲದೇ, ಇವರು ಸದಾ ತಮ್ಮ ಜೀವನದ ಗುರಿ ಮುಟ್ಟುವ ಯೋಚನೆಯಲ್ಲೇ ಇರುವವರು. ಅಲ್ಲದೇ, ಹೆಚ್ಚು ವಿಶ್ರಾಂತಿ ಬಯಸುವವರು. ಹಾಗಾಗಿ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದೇ, ಆರಾಮವಾಗಿ ಇರಲು ಬಯಸುವವರು. ಇವರ ಬಳಿ ಸಿಕ್ರೇಟ್ ಹೇಳಿದರೆ, ಬಂಡೆಯ ಮೇಲೆ ನೀರು ಹೊಯ್ದಂತೆ. ಹಾಗಾಗಿ ಇವರ ಬಳಿ ಸಿಕ್ರೇಟ್ ಹೇಳಿದರೆ, ಅದು ಸಿಕ್ರೇಟ್ ಆಗಿಯೇ ಇರುತ್ತದೆ.

- Advertisement -

Latest Posts

Don't Miss