Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೇ, ಸತ್ಯವನ್ನು ಹೇಳಿ ಬಿಡುತ್ತಾರೆ. ಎದುರಿಗೆ ಇರುವವರ ಮನಸ್ಸಿಗೆ ನೋವಾದರೂ, ಶಾಕ್ ಆದರೂ ಅದರಿಂದ ಅವರಿಗೇನು ವ್ಯತ್ಯಾಸವೇ ಆಗುವುದಿಲ್ಲ. ಅಂಥವರು ಕಟ್ಟುನಿಟ್ಟಾಗಿ ಜೀವನ ನಡೆಸಲು ಇಚ್ಛಿಸುತ್ತಾರೆ. ಆ ರಾಶಿಯವರ ಬಗ್ಗೆ ಇಂದು ನಾವು ತಿಳಿಯೋಣ.
ಸಿಂಹ: ಸಿಂಹ ರಾಶಿಯವರು ಇದ್ದದ್ದನ್ನು ಇದ್ದ ಹಾಗೆ ಹೇಳಿಬಿಡುವ ಸ್ವಭಾವದವರು. ಅವರು ಯಾರಿಗೂ ಹೆಚ್ಚು ಸಲುಗೆ ಕೊಡಲು ಬಯಸುವುದಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವವರು, ಸ್ಟ್ರಿಕ್ಟ್ ಆಗಿ ಇರುವ ಕಾರಣ, ಬಹುಬೇಗ ನಾಯಕತ್ವದ ಪಟ್ಟ ಪಡೆಯುತ್ತಾರೆ. ಪ್ರಮೋಷನ್ ಪಡೆಯುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಅಂದುಕೊಂಡ ಕೆಲಸವನ್ನು ಮಾಡದೇ ಬಿಡುವವರಲ್ಲ. ಈ ಕೆಲಸ ಆಗಬೇಕು ಎಂದರೆ, ಅಂದುಕೊಂಡ ಸಮಯಕ್ಕೆ ಅದು ಆಗಿಬಿಡಬೇಕು. ಇವರ ಈ ಸ್ವಭಾವದಿಂದಲೇ, ಚಿಕ್ಕ ವಯಸ್ಸಿಗೆ ಅವರು, ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಅಭಿವೃದ್ಧಿ ಹೊಂದುತ್ತಾರೆ.
ಮಕರ: ಮಕರ ರಾಶಿಯವರು ಹಿಡಿದ ಕೆಲಸವನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಇಂಥ ಏಕಾಗೃತೆಯ ಸ್ವಭಾವ, ಕಟ್ಟುನಿಟ್ಟಿನ ಸ್ವಭಾವವೇ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಿರುತ್ತದೆ. ಈ ರಾಶಿಯವರು ಎಷ್ಟು ಶಿಸ್ತಿನಿಂದ ಇರುತ್ತಾರೋ, ಅಷ್ಟು ಚೆನ್ನಾಗಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಕುಂಭ: ಕುಂಭ ರಾಶಿಯವರು ಸ್ವಲ್ಪ ಹಠಮಾರಿ ಸ್ವಭಾವದವರು. ಹಾಗಾಗಿ ಕುಂಭ ರಾಶಿಯವರು ಹುಂಭ ಜನರು ಅಂತಾ ಹೇಳುವುದು. ಇವರು ಎದುರಿಗಿದ್ದವರು ಬೇಸರ ಮಾಡಿಕೊಳ್ಳುತ್ತಾರೆ ಅನ್ನುವುದನ್ನು ತಿಳಿಯದೇ, ಮನಸ್ಸಿಗೆ ಬಂದಿದ್ದನ್ನು ಹೇಳಿಬಿಡುವ ಸ್ವಭಾವದವರಾಗಿರುತ್ತಾರೆ.