Health Tips: ಕೆಲವರಿಗೆ ಪ್ರತಿನಿತ್ಯ ಕುಡಿಯುವ ಚಟವಿರುತ್ತದೆ. ಎಷ್ಟೋ ಜನರಿಗೆ ಬೆಳಿಗ್ಗೆ ತಿಂಡಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಬೆಳ್ಳಂ ಬೆಳಿಗ್ಗೆ ಹೊಟ್ಟೆಗೆ ಎಣ್ಣೆ ಬೀಳದಿದ್ದರೆ, ಕೈ ಕಾಲೆಲ್ಲ ನಡುಗಲು ಶುರುವಾಗುತ್ತದೆ. ಆ ಮಟ್ಟಿಗೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ. ಹಾಾಗಾದ್ರೆ ಪ್ರತಿದಿನ ಮದ್ಯಪಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮವಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ಮದ್ಯಪಾನ ಮಾಡುವವರ ಮನೆಯಲ್ಲಿ ಯಾರೂ ಕೂಡ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಪತ್ನಿ, ಮಕ್ಕಳು, ತಂದೆ ತಾಯಿ ಯಾರ್ಯಾರೂ ಕೂಡ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಏಕೆಂದರೆ, ಮದ್ಯಪಾನ ಮಾಡುವ ಚಟ ಶುರುವಾದಾಗ, ಯಾವುದೂ ಕಂಟ್ರೋಲಿನಲ್ಲಿ ಇರುವುದಿಲ್ಲ. ಹಣವೆಲ್ಲ ಅಲ್ಲೇ ಪೋಲಾಗುತ್ತದೆ. ಕೆಲವೊಮ್ಮೆ ದಿನಸಿಗೂ ದುಡ್ಡಿಲ್ಲದ ಪರಿಸ್ಥಿತಿ ಬರುತ್ತದೆ. ಹಾಗಾಗಿ ಕುಡಿತ ಬರೀ ಆರೋಗ್ಯದ ಮೇಲಷ್ಟೇ ಅಲ್ಲ, ಜೀವನದ ಮೇಲೂ ಪರಿಣಾಮ ಬೀರುತ್ತದೆ.
ಇನ್ನು ಪ್ರತಿದಿನ ಮದ್ಯಪಾನ ಸೇವನೆ ಮಾಡುವುದರಿಂದ ಕೆಮ್ಮಿದಾಗ, ಹೊಟ್ಟೆಯಿಂದ ರಕ್ತ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೆದುಳಿಗೆ ಪೆಟ್ಟು ಬಿದ್ದು ಕೋಮಾಗೂ ಹೋಗಬಹುದು. ಪಿಡ್ಸ್ ಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಹೇಳಲಾಗುತ್ತದೆ.