Health Tips: ಶ್ವಾಸಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗೆ ಲಂಗ್ಸ್ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕ್ಯಾನ್ಸರ್ ಬರಲು ಮುಖ್ಯವಾದ ಕಾರಣ ಸ್ಮೋಕಿಂಗ್. ಧೂಮಪಾನದ ಸೇವನೆಯಿಂದ ನಮ್ಮ ಶ್ವಾಸಕೋಷ ಹಾಳಾಗುತ್ತದೆ. ಅತೀ ಹೆಚ್ಚು ಸ್ಮೋಕ್ ಮಾಡುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ.
ಅಲ್ಲದೇ, ಅನುವಂಶಿಕವಾಗಿಯೂ ಕ್ಯಾನ್ಸರ್ ಬರಬಹುದು. ಆದರೆ ಸ್ಮೋಕ್ ಮಾಡಿದರೆ ಲಂಗ್ಸ್ ಕ್ಯಾನ್ಸರ್ ಬರುತ್ತದೆ. ಅಲ್ಲದೇ ಹೊಗೆ, ಧೂಳು, ಕೆಮಿಕಲ್ ಹೆಚ್ಚು ಇರುವ ಜಾಗದಲ್ಲಿ ಕೆಲಸ ಮಾಡಿದರೂ ಸಹ, ಲಂಗ್ಸ್ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಅಂತಾರೆ ಡಾ.ಪವನ್ ಕುಮಾರ್.
ಲಂಗ್ಸ್ ಕ್ಯಾನ್ಸರ್ ಸೂಚನೆಗಳು ಸಿಕ್ಕಾಗ ವೈದ್ಯರ ಬಳಿ ಬಂಂದು ಪರೀಕ್ಷಿಸಿಕೊಂಡು, ಮೊದಲ ಹಂಂತದಲ್ಲೇ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬಹುದು. ಇನ್ನು ಮುಖ್ಯವಾದ ವಿಷಯ ಅಂದ್ರೆ, ಸ್ಮೋಕ್ ಮಾಡುವವರ ಜೊತೆ, ಅವರ ಅಕ್ಕ ಪಕ್ಕದಲ್ಲೇ ಇದ್ದು, ಸ್ಮೋಕ್ ನಿಂದ ಬರುವ ಹೊಗೆ ತೆಗೆದುಕೊಳ್ಳುವವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.




