Health Tips: ಬೇಸಿಗೆ ಶುರುವಾಗಿದೆ. ಯಾವ ಮಟ್ಟಿಗಿನ ಬಿಸಿಲು ಎಂದರೆ, ದೇಹದಲ್ಲಿ ಶಕ್ತಿ ಎಲ್ಲ ಕುಂದಿಹೋಗಿ, ಚೈತನ್ಯವೇ ಇಲ್ಲದಂಥ ಅನುಭವ. ಇಂಥ ಬಿರು ಬೇಸಿಗೆಯಲ್ಲಿ ನಾವು ಬರೀ ನಮ್ಮ ಚರ್ಮದ ಆರೋಗ್ಯದ ಕಡೆ ಅಷ್ಟೇ ಅಲ್ಲದೇ, ನಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆಯೂ ನಮ್ಮ ಆರೋಗ್ಯವನ್ನು ಉತ್ತಮಗೊಳಿಸಬಲ್ಲದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಹೃದಯದ ಸಮಸ್ಯೆ, ಬಿಪಿ, ಶುಗರ್ ಸಮಸ್ಯೆ ಇದ್ದಲ್ಲಿ ಅಂಥವರು ಬೇಸಿಗೆಯಲ್ಲಿ ತಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬೇಕು. ಏಕೆಂದರೆ ಬಿಸಿಲಿನ ಬೇಗ ಹೆಚ್ಚಾಗುತ್ತಿದ್ದಂತೆ, ನಮ್ಮ ದೇಹದಲ್ಲಿನ ಶಕ್ತಿಯೂ ಕುಸಿಯುತ್ತ ಹೋಗುತ್ತದೆ. ಈ ವೇಳೆ ನೀವು ಹೊರಗೆ ಹೋಗದೇ ಮನೆಯಲ್ಲೇ ಇದ್ದರೂ, ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ಹಾಗಾಗಿಯೇ ಬಿಪಿ, ಶುಗರ್, ಹೃದಯದ ಸಮಸ್ಯೆ ಇದ್ದವರು ಆರೋಗ್ಯವನ್ನು ಆದಷ್ಟು ಚೆನ್ನಾಗಿ ನೋಡಿಕೊಳ್ಳಬೇಕು. ಅಲ್ಲದೇ, ಆರೋಗ್ಯಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು. ಮಾತ್ರೆ ಸೇವನೆಗೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ನೀವು ಒಂದು ದಿನ ಮಾತ್ರೆ ಸೇವನೆಗೆ ನಿರ್ಲಕ್ಷ್ಯ ಮಾಡಿದರೆ, ಅದು ನಿಮ್ಮ ಜೀವಕ್ಕೆ ಆಪತ್ತು ತರುವ ಮಟ್ಟಿಗೆ ಸಮಸ್ಯೆ ತಂದೊಡ್ಡಬಹುದು. ಹೀಗಾಗಿ ಮಾತ್ರೆ ಸೇವನೆ ಸರಿಯಾದ ಸಮಯಕ್ಕೆ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




