Dharwad News: ತಪ್ಪಿದ ಭಾರೀ ಅನಾಹುತ, ಎಕ್ಸಲ್ ಕಟ್ ಆಗಿ ಕಾಲೇಜ್ ಕಾಂಪೌಂಡ್‌ಗೆ ನುಗ್ಗಿದ ಚಿಗರಿ ಬಸ್

Dharwad News: ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಅನುಷ್ಠಾನಗೊಂಡಿರುವ ಚಿಗರಿ ಬಸ್‌ನಿಂದ ಆಗಾಗ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಈಗ ಅದೇ ರೀತಿ ಚಿಗರಿ ಬಸ್‌ನಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಚಿಗರಿ ಬಸ್‌ನ ಎಕ್ಸಲ್ ಕಟ್ ಆಗಿ ಜೆಎಸ್‌ಎಸ್ ಕಾಲೇಜಿನ ಕಂಪೌಂಡ್‌ಗೆ ನುಗ್ಗಿದೆ. ನಿತ್ಯ ಜನ ಇರುವ ಈ ಕಂಪೌಂಡ್‌ ಬಳಿ ಇಂದು ಯಾರೂ ಇಲ್ಲದೇ ಹೋಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಏಕಾಏಕಿ ಚಿಗರಿ ಬಸ್ ಬ್ಯಾರಿಕೇಡ್ ಮುರಿದುಕೊಂಡು ಜೆಎಸ್‌ಎಸ್ ಕಾಲೇಜಿನ ಕಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಸರಿಯಾಗಿ ಈ ಚಿಗರಿ ಬಸ್‌ಗಳನ್ನು ದುರಸ್ತಿಗೊಳಪಡಿಸದ ಕಾರಣ ಈ ರೀತಿಯ ಅಪಘಾತಗಳು ಮೇಲಿಂದ ಮೇಲೆ ಆಗುತ್ತಿವೆ ಎಂಬ ಮಾತುಗಳು ಕೇಳಿ ಬಂದಿದ್ದು, ಭಯದಲ್ಲೇ ಚಾಲಕರು ಈ ಬಸ್‌ಗಳನ್ನು ಓಡಿಸಬೇಕಿದೆ.

ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

About The Author