ಪುದೀನಾ ಎಲೆ, ಎಲ್ಲಾ ಚಾಟ್ಸ್‌ನಲ್ಲೂ ಸಾಮಾನ್ಯವಾಗಿ ಬಳಸೋ ವಸ್ತು ಇದು. ಈ ಚಟ್ನಿ ಇಲ್ಲದೇ ಪಾನಿಪುರಿ ಮಾಡೋಕ್ಕೆ ಸಾಧ್ಯಾನೇ ಇಲ್ಲಾ. ಇಂಥ ಸ್ವಾದಿಷ್ಟ ರುಚಿ ಕೊಡುವ ಪುದೀನಾ ಎಲೆ ಬರೀ ಸವಿಯಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕರವೂ ಹೌದು. ಇವತ್ತು ನಾವು ಪುದೀನಾ ಸೇವಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..

ಬಾಯಿ ವಾಸನೆ ಬರುವ ಸಮಸ್ಯೆ ಇದ್ದರೆ ಅಂಥವರು ಪುದೀನಾ ಸೇವಿಸಬೇಕು. ಆದ್ದರಿಂದಲೇ ಟೂತ್‌ಪೇಸ್ಟ್, ಬಬಲ್ಗಮ್, ಮಿಂಟ್ ಫ್ಲೇವರ್ ಚಾಕೋಲೆಟ್ಸ್‌ನಲ್ಲಿ ಪುದೀನಾವನ್ನ ಬಳಕೆ ಮಾಡ್ತಾರೆ.
ಅಜೀರ್ಣತೆಯ ಸಮಸ್ಯೆ ಇದ್ದರೆ ನಿಯಮಿತವಾಗಿ ಪುದೀನಾ ಸೇವಿಸಿ. ಪುದೀನಾ ಎಲೆ ಸೇವನೆಯಿಂದ ಹೊಟ್ಟೆ ಸಮಸ್ಯೆ ಏನೇ ಇದ್ದರೂ ಗುಣವಾಗುತ್ತದೆ.
ಶೀತವಾದಾಗ ಪುದೀನಾ ಎಲೆಯನ್ನ ಚೆನ್ನಾಗಿ ತೊಳೆದು ತಿನ್ನಬೇಕು. ಅಥವಾ ಚಟ್ನಿ, ರಸಂ ಕೂಡ ಸೇವಿಸಬಹುದು.
ಪುದೀನ ಎಲೆಯ ಸೇವನೆಯಿಂದ ಸೌಂದರ್ಯ ಅಭಿವೃದ್ಧಿ ಕೂಡಾ ಆಗುತ್ತದೆ. ಅಲ್ಲದೇ ಮುಖದ ಮೇಲೆ ಗುಳ್ಳೆಗಳಾಗಿದ್ರೆ ಆ ಜಾಗಕ್ಕೆ ಪುದೀನಾ ಪೇಸ್ಟ್ ಹಚ್ಚಿ.
ಇನ್ನು ಸ್ಟೀಮ್ ತೆಗೆದುಕೊಳ್ಳುವಾಗ ನೀರಿನಲ್ಲಿ 4ರಿಂದ 5 ಎಸಳು ಪುದೀನಾ ಸೊಪ್ಪು ಹಾಕಿಕೊಂಡರೆ ಉತ್ತಮ.
ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪುದೀನಾ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಇನ್ನು ಬೇಸಿಗೆಯಲ್ಲಿ ಪುದೀನಾ ಬಳಸೋದ್ರಿಂದ ದೇಹತಂಪಾಗಿರುತ್ತೆ. ಇದರೊಂದಿಗೆ ನಿಂಬೆ ರಸ ಬಳಸಿದ್ರೆ ಇನ್ನೂ ಉತ್ತಮ.
ತಲೆ ನೋವಿದ್ದಾಗ ಬಿಸಿ ಬಿಸಿ ನೀರು ಕುಡಿಯಿರಿ. ಪುದೀನಾ ಸ್ಮೆಲ್ ತೆಗೆದುಕೊಳ್ಳಿ ತಲೆ ನೋವು ವಾಸಿಯಾಗತ್ತೆ. ಯಾಕಂದ್ರೆ ನಾವು ತಲೆ ನೋವಿಗಾಗಿ ಬಳಸೋ ಬಾಮ್‌ಗಳಲ್ಲಿ ಪುದೀನಾವನ್ನೇ ಬಳಸುತ್ತಾರೆ.
ಇನ್ನು ತಿಂದ ಆಹಾರ ಸರಿಯಾಗಿ ನಿಲ್ತಿಲ್ಲ, ಪದೇ ಪದೇ ಮಲಮೂತ್ರ ವಿಸರ್ಜನೆ ಆಗುತ್ತಿದ್ದರೆ ಅಂಥವರು ಊಟದ ಬಳಿಕ ಪುದೀನಾ ಕಶಾಯ ಸೇವಿಸಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

