UPI ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸೆಪ್ಟೆಂಬರ್ 15ರಿಂದ ಕೆಲವು ನಿರ್ದಿಷ್ಟ ವರ್ಗಗಳಿಗೆ UPI ವಹಿವಾಟು ಮಿತಿಯನ್ನು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಹೆಚ್ಚಿಸಿದೆ. ಈಗ ಕೆಲವು ಪಾವತಿಗಳಲ್ಲಿ ನೀವು ಮೊದಲಿಗಿಂತ ಒಂದೇ ಬಾರಿಗೆ, ಹೆಚ್ಚಿನ ಮೊತ್ತವನ್ನು ಕಳುಹಿಸಲು ಸಾಧ್ಯವಾಗುತ್ತದೆ.
ಇದುವರೆಗೆ ಒಂದೇ ಬಾರಿ ಗರಿಷ್ಠ 1 ಲಕ್ಷ ರೂಪಾಯಿ ಪಾವತಿ ಮಿತಿ ಇತ್ತು. ಇದೀಗ ಪಾವತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ದಿನವೊಂದಕ್ಕೆ 10 ಲಕ್ಷ ರೂಪಾಯಿವರೆಗೆ ವಹಿವಾಟು ಮಾಡಲು ಅವಕಾಶ ನೀಡಲಾಗಿದೆ. ತೆರಿಗೆ ಪಾವತಿ, ಸಾಲದ ಇಎಂಐ, ದೈನಂದಿನ ವಹಿವಾಟು, ಮುಂತಾದ ಹಣಕಾಸು ವ್ಯವಹಾರಗಳಲ್ಲಿ ಗ್ರಾಹಕರಿಗೆ, ಆಭರಣಗಳ ಖರೀದಿ ಮತ್ತು ಡಿಜಿಟಲ್ ಖಾತೆಗಳನ್ನು ತೆರೆಯುವ ಗ್ರಾಹಕರು, ಏಕಕಾಲದಲ್ಲಿ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವ ಸೌಲಭ್ಯವನ್ನು ಪಡೆಯುತ್ತಾರೆ.
ಆದರೆ, ಈ ಹೆಚ್ಚುವರಿ ಮಿತಿ ವ್ಯಾಪಾರಿಗಳಿಗೆ ಮಾತ್ರ ಅನ್ವಯವಾಗಲಿದೆ. ಆದರೆ, ವ್ಯಕ್ತಿಯಿಂದ ವ್ಯಕ್ತಿಗ ಮಾಡುವ ಪಾವತಿಯ ಮಿತಿ, ಹಿಂದಿನಂತೆ 1 ಲಕ್ಷ ರೂಪಾಯಿಯಲ್ಲೇ ಮುಂದುವರೆಯಲಿದೆ.ಡಿಜಿಟಲ್ ಪಾವತಿ ಬಳಕೆಯ ಹೆಚ್ಚಳಕ್ಕೆ ಸಾಕ್ಷಿಯಾಗಿ, 2025ರ ಆಗಸ್ಟ್ ತಿಂಗಳಲ್ಲಿ 2 ಸಾವಿರ ಕೋಟಿಗೂ ಹೆಚ್ಚು, ಯುಪಿಐ ವಹಿವಾಟು ನಡೆದಿದೆ. 2024ರ ಆಗಸ್ಟ್ಗೆ ಹೋಲಿಗೆ ಮಾಡಿದ್ರೆ ಶೇಕಡ 34 ರಷ್ಟು ಏರಿಕೆಯಾಗಿದೆ.
ಎನ್ಪಿಸಿಐ ಗರಿಷ್ಠ ಮಿತಿಗಳನ್ನು ನಿಗದಿಪಡಿಸಿದ್ದರೂ, ತಮ್ಮ ಆಂತರಿಕ ನೀತಿಗಳಿಗೆ ಅನುಗುಣವಾಗಿ ವಹಿವಾಟು ಮಿತಿಗಳನ್ನು ಹೊಂದಿಸಲು ಬ್ಯಾಂಕ್ಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲಾ ಬ್ಯಾಂಕ್ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಯುಪಿಐ ಆ್ಯಪ್ಗಳು ಸೆಪ್ಟೆಂಬರ್ 15, 2025ರೊಳಗೆ ಈ ಹೊಸ ಮಿತಿಗಳನ್ನು ಜಾರಿಗೆ ತರಬೇಕು ಎಂದು ಎನ್ಪಿಸಿಐ ಸೂಚಿಸಿದೆ.