Political News: ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದಾಗ, ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಭಯೋತ್ಪಾದಕರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಗೆ 1 ವರ್ಷವಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬಲಿಯಾದ ಜೀವಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಒಂದು ವರ್ಷ ಕಳೆದರೂ ಆ ಕ್ರೂರ, ಪೈಶಾಚಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನೋವು, ನೆನಪು ಭಾರತದ ಆತ್ಮಸಾಕ್ಷಿಯ ಮೇಲೆ ಭಾರವಾಗಿ ತೂಗುತ್ತಲೇ ಇದೆ. ಈ ಸಂದರ್ಭದಲ್ಲಿ ಪಾತಕಿಗಳಿಗೆ ಬಲಿಯಾದ 26 ಅಮೂಲ್ಯ ಜೀವಗಳಿಗೆ ನನ್ನ ಪ್ರಗಾಢ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತೇನೆ. ಅವರ ನೆನಪು ಭಯೋತ್ಪಾದನೆ ವಿರುದ್ಧದ ಹೋರಾಟದ ನಮ್ಮ ಧೃಢಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತಲೇ ಇದೆ ಎಂದು ಭಾವಿಸಿದ್ದೇನೆ.
ಭಯೋತ್ಪಾದನೆ ನಮ್ಮ ಚೈತನ್ಯವನ್ನು ಎಂದಿಗೂ ಬಲಹೀನಗೊಳಿಸಲಾರದು. ನಮ್ಮ ಶಾಂತಿ, ಪ್ರಗತಿ ಮತ್ತು ರಾಷ್ಟ್ರೀಯ ಏಕತೆಯ ಹಾದಿಗೆ ತಡೆಯೊಡ್ಡಲಾರದು. ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ನಿರ್ಣಾಯಕ, ಬಲಿಷ್ಠ ನಾಯಕತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಬದ್ಧತೆಯು ದೃಢವಾಗಿ ಮತ್ತು ರಾಜಿಯಾಗದೆ ಉಳಿದಿದೆ. ಜೈ ಹಿಂದ್ ಎಂದು ಎಕ್ಸ್ ಖಾತೆಯಲ್ಲಿ ಬರೆದು ಕೇಂದ್ರ ಸಚಿವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.




