National News: ಕುಂಭಮೇಳದ ರುದ್ರಾಕ್ಷಿ ಮಾಲೆ ಮಾರಾಟಗಾರ್ತಿ ಮೋನಾಲೀಸಾ ಈಗ ಗರ್ಭಿಣಿ

National News: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಮೋನಾಲೀಸಾ, ತನ್ನ ಸುಂದರ ಕಣ್ಣುಗಳಿಂದಾಗಿ ಫೇಮಸ್ ಆಗಿದ್ದಳು. ಈಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು.

ಬಳಿಕ ಅದೇ ಸಿನಿಮಾದಲ್ಲಿ ನಟಿಸಿದ್ದ ಮುಸ್ಲಿಂ ಯುವಕ ಫರ್ಮಾನ್ ಮೇಲೆ ಪ್ರೀತಿಯಾಗಿ, ಆಕೆ ಕೇರಳದ ದೇವಸ್ಥಾನದಲ್ಲಿ ವಿವಾಹವಾದಳು. ಈ ವಿವಾಹಕ್ಕೆ ನನ್ನ ಅಪ್ಪ-ಅಮ್ಮನ ವಿರೋಧವಿದೆ. ಅವರಿಂದ ನಮ್ಮನ್ನು ರಕ್ಷಿಸಿ ಎಂದು ಕೇರಳ ಪೋಲೀಸರಲ್ಲಿ ಅಪ್ಪನ ವಿರುದ್ಧವೇ ದೂರು ದಾಖಲಿಸಿದ್ದಳು.

ಅಲ್ಲದೇ, ಮದುವೆ ಬಳಿಕ ಪ್ರೆಸ್ಮೀಟ್ ನಡೆಸಿ, ನಾನು ಮುಸ್ಲಿಂ ಯುವಕನನ್ನು ಪ್ರೀತಿ ಮಾಡಿದ್ದರಲ್ಲೇನು ತಪ್ಪಿದೆ..? ಕೃಷ್ಣ ರಾಧೆಯನ್ನು ಪ್ರೀತಿಸುವಾಗ, ಆಕೆ ಕೃಷ್ಣನನ್ನು ನೀನು ಹಿಂದೂನಾ-ಮುಸ್ಲಿಂನಾ ಅಂತಾ ಕೇಳಿದ್ದಳಾ ಅಂತಲೂ ಉದ್ಧಟತನದ ಪ್ರಶ್ನೆ ಕೇಳಿದ್ದಳು.

ಅದಾದ ಬಳಿಕ ಮೋನಾಲೀಸಾಗೆ 16 ವರ್ಷ ವಯಸ್ಸು. ಇದು ತಿಳಿದು ಕೂಡ ಫರ್ಮಾನ್ ಆಕೆಯನ್ನು ವಿವಾಹವಾಗಿದ್ದಾನೆ ಎಂದು, ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು.

ಬಳಿಕ ಮೋನಾಲೀಸಾ ಕಾಣೆಯಾಗಿದ್ದಾಳೆ. ನಾನು ಆಕೆಯನ್ನು ಹುಡುಕಲು ಪುಷ್ಕರಕ್ಕೆ ಬಂದಿದ್ದೇನೆ ಎಂದು ಫರ್ಮಾನ್ ಹೇಳಿದ್ದ. ಅದಾದ ಬಳಿಕ ಇದೀಗ ಮೋನಾಲೀಸಾ ಗರ್ಭಿಣಿ ಎಂದು ಫರ್ಮಾನ್ ಹೇಳಿದ್ದಾನೆ. ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿರುವ ಕಾರಣಕ್ಕೆ, ಮೋನಾಲೀಸಾ ಹೇಳಿಕೆ ನೀಡಬೇಕಿದೆ. ಅದಕ್ಕಾಗಿ ಮೋನಾಲೀಸಾ ಪ್ರಯಾಣ ಮಾಡಬೇಕಿದೆ.

ಆದರೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಮೋನಾಲೀಸಾಗೆ ಸಾಧ್ಯವಿಲ್ಲ. ಆಕೆ ಗರ್ಭಿಣಿಯಾಗಿದ್ದು ಪ್ರಯಾಣ ಮಾಡಲು ಆಗುವುದಿಲ್ಲ ಎಂದು ಫರ್ಮಾನ್ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾನೆ. ಸದ್ಯ ಪೋಲೀಸರು ಈಕೆಯ ವೈದ್ಯಕೀಯ ಧೃಡೀಕರಣ ಪಡೆಯುವ ಸಾಧ್ಯತೆ ಇದ್ದು, ಮೇ 20ರವರೆಗೆ ಫರ್ಮಾನ್ ಖಾನ್ ಬಂಧನಕ್ಕೆ ತಡೆಯ“ಡ್ಡಿದೆ.

About The Author