Political News: ಬೆಂಗಳೂರಿನಲ್ಲಿ ಮಳೆಯಿಂದ ಧರೆಗುರುಳಿದ ಹಲವು ಮರಗಳನ್ನು ಇನ್ನೂ ತೆರವುಗ“ಳಿಸಲಾಗಿಲ್ಲ ಎಂದು ಸಾರ್ವಜನಿಕರು ರಾಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಯುತ್ತಿದ್ದಾರೆ.
ಈ ಮಧ್ಯೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಕುರ್ಚಿ ತೆರವುಗೊಳಿಸುವಲ್ಲಿ ಇರುವ ಆಸಕ್ತಿ, ರಸ್ತೆಯಲ್ಲಿ ಬಿದ್ದರುವ ಮರ ತೆರವುಗೊಳಿಸುವಲ್ಲಿ ಇಲ್ಲ! ಏಪ್ರಿಲ್ 29ರ ಮಳೆಗೆ 500ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ವಾರ ಕಳೆದರೂ 1,305ಕ್ಕೂ ಹೆಚ್ಚು ಮರ-ಕೊಂಬೆಗಳು ಇನ್ನೂ ರಸ್ತೆ ಬದಿಯಲ್ಲೇ ಕೊಳೆಯುತ್ತಿವೆ. ಪಾದಚಾರಿ ಮಾರ್ಗಗಳು ಬಂದ್ ಆಗಿವೆ. ಜನ ಜೀವ ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ನಡೆಯುವ ಪರಿಸ್ಥಿತಿ ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಮರ ತೆರವುಗಿಂತ, ಸಿಎಂ ಕುರ್ಚಿ ತೆರವುಗೊಳಿಸುವ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ದೆಹಲಿಗೆ ಕರೆದು “ಶುಭ ಸುದ್ದಿ” ಕೊಡುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ.“30 ತಂಡಗಳನ್ನು ನಿಯೋಜಿಸಿದ್ದೇವೆ” ಎಂದು ಸರ್ಕಾರ ಘೋಷಣೆ ಮಾಡುತ್ತದೆ. ಆದರೆ ವಾಸ್ತವದಲ್ಲಿ ಕಾಣಿಸುವುದು ಏನು? ಅಸ್ತವ್ಯಸ್ತವಾಗಿ ಬಿದ್ದಿರುವ ಕೊಂಬೆಗಳ ರಾಶಿ… ನಿರ್ಲಕ್ಷ್ಯದ ಆಡಳಿತ! ಫ್ಲೆಕ್ಸ್ಗಳಲ್ಲಿ, ಜಾಹೀರಾತುಗಳಲ್ಲಿ “Brand Bengaluru” ಕಟ್ಟುವ ಸರ್ಕಾರಕ್ಕೆ, ರಸ್ತೆಯ ಮೇಲೆ ಬಿದ್ದ ಒಂದು ಮರವನ್ನು ತೆರವುಗೊಳಿಸುವ ಸಾಮರ್ಥ್ಯವೂ ಇಲ್ಲವೇ? ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಬೆಂಗಳೂರಿನ ಜನರ ಸುರಕ್ಷತೆಯ ಮೇಲಿನ ನಿರ್ಲಕ್ಷ್ಯ ಎಂದು ಆರ್.ಅಶೋಕ್ ನೇರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ನೇರ ಪ್ರಶ್ನೆ: ಬಜೆಟ್ ಇಲ್ಲವೇ? ಇಚ್ಛಾಶಕ್ತಿ ಇಲ್ಲವೇ? ಅಥವಾ ಮರ ತೆರವಿಗೂ “ಕಮಿಷನ್” ಬೇಕೇ? ಬೆಂಗಳೂರು ಎಲ್ಲವನ್ನೂ ನೋಡುತ್ತಿದೆ. ಜನ ಉತ್ತರ ಕೇಳುತ್ತಿದ್ದಾರೆ ಎಂದು ಆರ್.ಅಶೋಕ್ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ್ದಾರೆ.




