Bantwala: ಕುಟುಂಬ ಸಮೇತ ಕೊರಗಜ್ಜನ ಕೋಲದಲ್ಲಿ ಭಾಗಿಯಾದ ನಟಿ ರಚಿತಾ ರಾಮ್

Bantwala News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೆಂಜನಪದವು ಎಂಬಲ್ಲಿ ನಡೆದ ಭೂತಕೋಲದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿ, ಆಶೀರ್ವಾದ ಪಡೆದಿದ್ದಾರೆ.

ಕೊರಗಜ್ಜನ ಕೋಲದಲ್ಲಿ ಭಾಗಿಯಾದ ರಚಿತಾ ರಾಮ್, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಶೇರ್ ಮಾಡಿ, ಕಾಪುಲೆ ಕೊರಗಜ್ಜನ ಎಂದು ಬರೆದಿದ್ದಾರೆ. ಕೊರಗಜ್ಜನ ಪವಾಡ ಎಂಥದ್ದು ಎಂದು ಬರೀ ದಕ್ಷಿಣ ಕನ್ನಡದ ಜನಕ್ಕೆ ಮಾತ್ರವಲ್ಲದೇ, ಇಡೀ ಭಾರತಕ್ಕೆ ಮತ್ತು ಇಡೀ ಪ್ರಪಂಚದಲ್ಲಿ ಪಸರಿಸಿರುವ ಭಾರತೀಯರಿಗೆ ತಿಳಿದಿದೆ.

ಇದಕ್ಕೆ ಉದಾಹರಣೆ ಅಂದ್ರೆ ವಿದೇಶದಲ್ಲಿ ನೆಲೆಸಿರುವ ಹಲವು ಭಾರತೀಯರು ಆಗಾಗ ದಕ್ಷಿಣ ಕನ್ನಡಕ್ಕೆ ಬಂದು ಕೊರಗಜ್ಜನ ಸನ್ನಿಧಿಯಾದ ಕುತ್ತಾರಿಗೆ ಬಂದು ದರ್ಶನ ಪಡೆದು ಹೋಗುತ್ತಾರೆ. ಅಲ್ಲದೇ, ಬಾಲಿವುಡ್ ಅಭಿನೇತ್ರಿ ಕತ್ರೀನಾ ಕೈಫ್ ಕೂಡ ಕೆ.ಎನ್.ರಾಹುಲ್ ಜತೆ ಮಂಗಳೂರಿಗೆ ಬಂದು ಕೊರಗಜ್ಜನ ಕೋಲದಲ್ಲಿ ಭಾಗಿಯಾಗಿದ್ದರು.

ಇದೀಗ ರಚಿತಾ ರಾಮ್ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿದ್ದಾರೆ. ಸದ್ಯ ರಚಿತಾ ರಾಮ್ ಅಯೋಗ್ಯ 2 ಮತ್ತು ಕ್ರಿಮಿನಲ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

About The Author