ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ ಧರ್ಮ ಎಂದರೆ ಸತ್ಯ, ಧರ್ಮ ಎಂದರೆ ಅನಾಯ ಮಾಡದೇ, ನ್ಯಾಯದ ಪರವಾಗಿ ಇರೋದು ಧರ್ಮ. ನ್ಯಾಯ, ನಿಷ್ಠೆ, ಸಮಾನತೆ ಪರವಾಗಿ ನಿಲ್ಲೋದೇ ಧರ್ಮ ಅಂತಾರೆ ನಜ್ಮಾ ಚಿಕ್ಕನೇರಳೆ.

ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ ಎಲ್ಲ ಧರ್ಮಗಳ ತಳಪಾಯವೇ ಅನ್ಯಾಯದ ವಿರುದ್ಧದ ಹೋರಾಟ, ಸುಳ್ಳಿನ ವಿರುದ್ಧದ ಹೋರಾಟ, ಮೂಢನಂಬಿಕೆಗಳ ವಿರುದ್ಧದ ಹೋರಾಟ. ಇಸ್ಲಾಂ, ಸುಳ್ಳು ಹೇಳ್ಬಾರ್ದು, ಯಾರಿಗೂ ವಂಚನೆ ಮಾಡ್ಬಾರ್ದು ಅಂತಾ ಹೇಳತ್ತೆ. ಆದರೆ ನಾವು ಎಷ್ಟರ ಮಟ್ಟಿಗೆ ಅದನ್ನು ಪಾಲಿಸುತ್ತೇವೆ..? ಹಿಂದೂ ಧರ್ಮ ಕೂಡ ಇದ ರೀತಿ ಉತ್ತಮ ವಿಷಯಗಳನ್ನೇ ಹೇಳತ್ತೆ. ಆದರೆ ಅದನ್ನು ಎಷ್ಟು ಜನ ಪಾಲಿಸುತ್ತಾರೆ ಎಂದು ನಜ್ಮಾ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author