Web News: ಭಾರತದಲ್ಲಿ ನಾವು ಬಟ್ಟೆ ಒಗೆದ ಬಳಿಕ, ಆಚೆ ಬಿಸಿಲಿಗೆ ಆ ಬಟ್ಟೆಗಳನ್ನು ಒಣಗಿಸುತ್ತೇವೆ. ನಮಗೆ ಅದು ಕಾಮನ್ ವಿಷಯ. ಆದರೆ ಅಮೆರಿಕದಲ್ಲೇನಾದರೂ ನೀವು ಬಟ್ಟೆ ಒಗೆದು, ಆಚೆ ಒಣಗಿಸಿದ್ರೆ, ನಿಮಗೆ 20 ಸಾವಿರ ರೂಪಾಯಿ ತನಕ ದಂಡ ಬೀಳೋದು ಗ್ಯಾರಂಟಿ.
ಹೌದು, ಸ್ವಚ್ಛತೆ ಶಿಸ್ತಿನ ಬಗ್ಗೆ ಹೆಚ್ಚು ಗಮನ ಹರಿಸುವ ಅಮೆರಿಕದಲ್ಲಿ, ಒಗೆದ ಬಟ್ಟೆಯನ್ನು ಆಚೆ ಒಣಹಾಕುವುದು ಅಪರಾಧಕ್ಕೆ ಸಮ ಅಂತಲೇ ಹೇಳ್ತಾರೆ. ಹಾಗಾಗಿ ತಪ್ಪು ಮಾಡಿದಾಗ ದಂಡ ಹಾಕುವ ರೀತಿ, ಈ ಕೆಲಸಕ್ಕೂ ನಾವು 20 ಸಾವಿರದವರೆಗೆ ದಂಡ ನೀಡಬೇಕಾಗುತ್ತದೆ.
ಅಲ್ಲಿನ ಮನೆಗಳು ಎಷ್ಟು ಚಂದವಾಗಿ, ಶಿಸ್ತಿನಿಂದ ನಿರ್ಮಿಸಿದಂತಿರುತ್ತದೆ. ಕಾರ್ ಇಡಲು ಪ್ರತೀ ಮನೆಗೆ ಸಪರೇಟ್ ಆಗಿರುವ ಗ್ಯಾರೇಜ್ ವ್ಯವಸ್ಥೆ ಇದೆ. ಕಸ ಗುಡಿಸಲು, ನೆಲ ಒರೆಸಲು, ಅಂಗಳ ಕ್ಲೀನ್ ಮಾಡಲು ಹೀಗೆ ಎಲ್ಲದಕ್ಕೂ ಮಾಡರ್ನ್ ಆಗಿರುವ ರೀತಿ ರಿವಾಜುಗಳಿದೆ. ಅದಕ್ಕೆಲ್ಲ ವ್ಯಾಕ್ಯೂಮ್ ಕ್ಲೀನರ್ಗಳನ್ನೇ ಬಳಸಬೇಕು ಅಂತೆಲ್ಲ ರೂಲ್ಸ್ ಇದೆ. ಇಂಥ ರೂಲ್ಸ್ ಇರುವುದರಿಂದಲೇ ಅಲ್ಲಿ ಅಷ್ಟು ಕ್ಲೀನ್ ಆಗಿರೋದು.
ಹಾಗಾಗಿ ಮನೆಯ ಆಚೆ ಬಟ್ಟೆ ಒಣ ಹಾಕಿದ್ರೆ, ಮನೆಯ ಅಂದವೇ ಹೋಗುತ್ತದೆ. ಶಿಸ್ತು ಹೋಗುತ್ತದೆ ಎಂಬ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ ಅಲ್ಲಿನ ಜನ ಒಗೆದ ಬಟ್ಟೆಯನ್ನ ಹೇಗೆ ಒಣಗಿಸುತ್ತಾರೆ ಅಂತಾ ಕೇಳಿದ್ರೆ ಅವರು ಕ್ಲಾತ್ ಡ್ರೈಯರ್ ಬಳಸುತ್ತಾರೆ.
ಬಟ್ಟೆ ವಾಶ್ ಮಾಡಲು ವಾಶಿಂಗ್ ಮಶಿನ್ ಇರುತ್ತದೆ. ಅದೇ ರೀತಿ ಅದೇ ಗಾತ್ರದ ಕ್ಲಾತ್ ಡ್ರೈಯರ್ ಕೂಡ ಇರುತ್ತದೆ. ವಾಶ್ ಮಾಡಿದ ಬಟ್ಟೆಯನ್ನು ವಾಶಿಂಗ್ ಮಶಿನ್ನಿಂದ ತೆಗೆದು, ಕ್ಲಾತ್ ಡ್ರೈಯರ್ನಲ್ಲಿ ಹಾಕಲಾಗುತ್ತದೆ. ಬಿಸಿಲನಲ್ಲಿ ಬಟ್ಟೆ ಒಣಗಿದ ಹಾಗೆ, ವಿದ್ಯುತ್ ಸಹಾಯದಿಂದ ಬಟ್ಟೆ ಕೆಲವೇ ನಿಮಿಷಗಳಲ್ಲಿ ಒಣಗುತ್ತದೆ. ಬಳಿಕ ಐರನ್ ಮಾಡಿ, ಅದನ್ನು ಧರಿಸುತ್ತಾರೆ. ಹೆಚ್ಚು ಬಿಸಿಲು ಬಾರದ, ತಂಪಾದ ಪ್ರದೇಶಗಳಿಗೆಲ್ಲ ಇದು ತುಂಬಾ ಸಹಾಯಕಾರಿಯಾಗಿರುತ್ತದೆ.




