Vidur Neeti: ಯಾರಿಗೆ ತಾನೇ ಜೀವನದಲ್ಲಿ ಯಶಸ್ಸು ಗಳಿಸಬೇಕು, ನಾಲ್ಕು ಜನ ತನ್ನನ್ನು ಗುರುತಿಸಿ ಮಾತನಾಡಬೇಕು, ಹಣ, ಕೀರ್ತಿ ಗಳಿಸಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದರೆ ಆ ರೀತಿ ಅಂದುಕ“ಂಡಿದ್ದನ್ನು ಸಾಧಿಸುವುದು ಕೆಲವೇ ಕೆಲವರು ಮಾತ್ರ. ಆದರೆ ವಿದುರ ಹೇಳಿದ ಈ ಮಾತನ್ನು ನೀವು ಅನುಸರಿಸಿದರೆ, ನೀವೂ ಜೀವನದಲ್ಲಿ ಯಶಸ್ಸು, ಗೌರವ ಗಳಿಸಬಹುದು. ಹಾಗಾದ್ರೆ ಈ ಬಗ್ಗೆ ವಿದುರ ನೀತಿ ಏನು ಹೇಳುತ್ತದೆ ಅಂತಾ ತಿಳಿಯೋಣ ಬನ್ನಿ..
ಯಶಸ್ವಿಯಾಗಲು ಪರಿಶ್ರಮ ಅತ್ಯಗತ್ಯ: ವಿದುರನ ಪ್ರಕಾರ, ಯಾರು ಸಮಯ ವ್ಯರ್ಥ ಮಾಡದೇ, ತಮ್ಮ ಮೇಲೆ ನಂಬಿಕೆ ಇರಿಸಿ, ಪರಿಶ್ರಮದಿಂದ ಕೆಲಸ ಮಾಡುತ್ತಾರೋ, ಅಂಥವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇಂಥವರು ಜೀವನದಲ್ಲಿ ಎಂಥದ್ದೇ ಸಮಸ್ಯೆ ಬಂದರೂ, ಅದನ್ನು ಎದುರಿಸಿ ನಿಲ್ಲಲು ಸಿದ್ಧವಾಗಿರುತ್ತಾರೆ.
ಮೋಸ, ಸುಳ್ಳು, ವಂಚನೆಯಿಂದ ಸಿಕ್ಕ ಯಶಸ್ಸು ಶಾಶ್ವತವಲ್ಲ: ಓರ್ವ ವ್ಯಕ್ತಿ ಯಾರನ್ನಾದರೂ ವಂಚಿಸಿ, ಮೋಸ ಮಾಡಿ, ಸುಳ್ಳು ಹೇಳಿ, ಅಡ್ಡದಾರಿ ಹಿಡಿದು ಯಶಸ್ಸು ಸಾಧಿಸಿದರೆ, ಅಂಥ ಯಶಸ್ಸು ಹೆಚ್ಚು ದಿನ ಉಳಿಯುವುದಿಲ್ಲ. ಅಂಥವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಆದರೆ ಯಾರೂ ನಿಜವಾದ ಪರಿಶ್ರಮದಿಂದ ಮೇಲೆ ಬರುತ್ತಾರೋ, ಅಂಥವರಿಗೆ ಸಮಾಜದಲ್ಲಿ ಜನ ಗೌರವಿಸುತ್ತಾರೆ.
ಧನ ಗಳಿಸುವುದು ಮಾತ್ರ ಯಶಸ್ಸಲ್ಲ, ಅದನ್ನು ಉಳಿಸುವುದು ನಿಜವಾದ ಯಶಸ್ಸು: ನಾವೆಲ್ಲ ಜೀವನ ಸಾಗಿಸಲು ದುಡಿಯುತ್ತೇವೆ. ನಮ್ಮ ಬಳಿ ಜೀವನ ನಡೆಸಲು 24 ಗಂಟೆ ಇದೆ. ಶ್ರೀಮಂತರ ಬಳಿಯೂ ಅಷ್ಟೇ ಸಮಯವಿದೆ. ಆದರೆ ಕೆಲವರು ಕೆಲಸ ಮಾಡಿ, ಅದರ ಹಣದಲ್ಲೇ ದಿನ ದೂಡುತ್ತಾರೆ. ಆದರೆ ಮತ್ತೆ ಕೆಲವರು ದುಡಿದ ಹಣವನ್ನು ಹೂಡಿಕೆ ಮಾಡಿ, ಅದನ್ನು ಕಾಪಾಡುವ ಕೆಲಸ ಮಾಡುತ್ತಾರೆ. ಮತ್ತು ಅದರಿಂದಲೇ ಶ್ರೀಮಂತರಾಗುತ್ತಾರೆ. ಹಾಗಾಗಿ ವಿದುರ ನೀತಿಯಲ್ಲಿ ವಿದುರ, ದುಡಿಯುವುದು ಯಶಸ್ಸಲ್ಲ, ದುಡಿದ ಹಣವನ್ನು ಉಳಿಸಿ, ಬಳಸುವುದು ಯಶಸ್ಸು ಎಂದಿದ್ದಾರೆ.




