Vidur Neeti: ನಾವು ಸರಿಯಾಗಿದ್ದರೆ, ನಮ್ಮ ಮಾತು ಸರಿಯಾಗಿರುತ್ತದೆ. ನಮ್ಮ ಮಾತು ಸರಿಯಾಗಿದ್ದರೆ, ನಮ್ಮ ಜೀವನ ಸರಿಯಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿಧುರ ನೀತಿಯಲ್ಲಿಯೂ ಕೂಡ, ವಿದುರ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹೇಳಿದ್ದಾನೆ. ನಾವು ಜೀವನದಲ್ಲಿ 6 ಅಭ್ಯಾಸಗಳನ್ನು ಬಿಡದಿದ್ದರೆ, ಸಮಸ್ಯೆ ಖಚಿತವಂತೆ. ಹಾಗಾದ್ರೆ ಯಾವುದು ಆ 6 ಅಭ್ಯಾಸಗಳು ಅಂತಾ ತಿಳಿಯೋಣ ಬನ್ನಿ.
ಮಿತಿಮೀರಿದ ಮಾತು: ನಾವು ಆಡುವ ಮಾತುಗಳು ಎದುರಿಗಿರುವವರ ಮನಸ್ಸಿಗೆ ಖುಷಿ ನೀಡಬೇಕೇ ವಿನಃ ಬೇಸರ ಪಡುವಂತಿರಬಾರದು. ಮಾತು ಅತೀಯಾದಾಗ, ನಮ್ಮ ಮೇಲಿದ್ದ ಗೌರವ ಕಡಿಮೆಯಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರಿಗೆ, ಎಲ್ಲ ಸ್ಥಳದಲ್ಲೂ ಮಿತಿಮೀರಿ ಮಾತನಾಡುವವರನ್ನು ಯಾರೂ ಗೌರವಿಸುವುದಿಲ್ಲ.
ಸ್ವಾರ್ಥ ಗುಣ: ಯಾರಿಗೆ ಬರೀ ತಮ್ಮ ಬಗ್ಗೆ ಮಾತ್ರ ಕಾಳಜಿ ಇರುತ್ತದೆಯೋ, ಸ್ವಾರ್ಥಿಗಳಾಗಿರುತ್ತಾರೋ, ಅಂಥವರ ಸ್ನೇಹ ಯಾರೂ ಬಯಸುವುದಿಲ್ಲ. ತ್ಯಾಗದ ಮನೋಭಾವ ಇಲ್ಲದವರು ಜೀವನದಲ್ಲಿ ಸದಾ ಸೋಲನ್ನೇ ಕಾಣುತ್ತಾರೆ ಅಂತಾರೆ ವಿದುರ.
ಅತಿಯಾದ ಕೋಪ: ಅತಿಯಾದ ಕೋಪ ಅವರನ್ನೇ ಸುಡುತ್ತದೆ. ಆ ಕೋಪದಿಂದಲೇ ಅವರು ತಮ್ಮ ಜೀವನದ ಅಂತ್ಯ ಕಾಣುತ್ತಾರೆ. ಕೋಪ ಹೆಚ್ಚಿರುವವರ ಜತೆಗೆ ಯಾರೂ ಉತ್ತಮ ಸಂಭಂಧವನ್ನಿರಿಸುವುದಿಲ್ಲ. ಹಾಗಾಗಿ ಕೋಪ ತ್ಯಜಿಸಬೇಕು ಅಂತಾರೆ ವಿದುರರು.
ದುರಹಂಕಾರ: ದುರಹಂಕಾರ ಇರುವ ವ್ಯಕ್ತಿಗೆ ತಾನು ಮಾಡಿದ್ದೇ ಸರಿ, ಉಳಿದವರೆಲ್ಲೂ ಕೀಳು ಅನ್ನೋ ಮನೋಭಾವ ಇರುತ್ತದೆ. ಅಹಂಕಾರ ಇರುವವರಿಗೆ ಶತ್ರುಗಳೇ ಹೆಚ್ಚಾಗಿರುತ್ತಾರೆ. ಹಾಗಾಗಿ ಅಹಂಕಾರವೇ ಅವನತಿಗೆ ಕಾರಣ ಎನ್ನುತ್ತಾರೆ ವಿದುರ.




