Spiritual: ಹಿಂದೂ ಧರ್ಮದಲ್ಲಿ ಜೀವನದಲ್ಲಿ ಕಹಿಯಾಗಿದ್ದರೂ ಸತ್ಯ ಹೇಳಿರುವ ಗ್ರಂಥ ಅಂದ್ರೆ ಅದು ಗರುಡ ಪುರಾಣ. ಇಂದು ನಾವು ಗರುಡ ಪುರಾಣದಲ್ಲಿ ಜೀವನದಲ್ಲಿ ಖುಷಿಯಾಗಿ, ಯಶಸ್ವಿಯಾಗಿ, ಗೌರವಯುತರಾಗಿ, ನೆಮ್ಮದಿಯಿಂದ ಇರಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ.
ದಾನ ಮಾಡಿ: ದಾನ ಮಾಡುವುದು ಪುಣ್ಯದ ಕಾರ್ಯ. ಆದರೆ ದರಿದ್ರರಾಗುವಷ್ಟು ದಾನ ಮಾಡಬಾರದು ಅಂತಾರೆ ಹಿರಿಯರು. ನಾವು ದುಡಿದ ಹಣದಲ್ಲಿ ಸಣ್ಣ ಭಾಗವನ್ನಾದರೂ ನಾವು ದಾನ ಮಾಡಬೇಕು.
ಮಹಿಳೆಯರನ್ನು ಗೌರವಿಸಿ: ಮಹಿಳೆಯರನ್ನು ಗೌರವಿಸುವ ವ್ಯಕ್ತಿ ಸಮಾಜದಲ್ಲಿ ಗೌರವವಾನ್ವಿತನಾಗಿರುತ್ತಾನೆ. ಆದರೆ ಆತ ತನ್ನ ತಾಯಿ, ಸಹೋದರಿ, ಪತ್ನಿ, ಮಗಳು ಸೇರಿ ಸಮಾಜದಲ್ಲಿರುವ ಎಲ್ಲ ಹೆಣ್ಣು ಮಕ್ಕಳನ್ನು ಗೌರವಿಸುವನಾಗಿರಬೇಕು. ಆತ ಸಹೋದರಿಯನ್ನೋ, ಅಮ್ಮನನ್ನೋ, ಪತ್ನಿಯನ್ನೋ ಇವರಲ್ಲಿ ಯಾರನ್ನಾದರೂ ಕೀಳಾಗಿ ಕಂಡರೆ, ಆತನ ಗೌರವಕ್ಕೂ ಧಕ್ಕೆ ಬರುತ್ತದೆ. ಹಾಗಾಗಿ ಎಲ್ಲ ಮಹಿಳೆಯರನ್ನು ಯಶಸ್ಸು ಬಯಸುವ ಪುರುಷರು ಗೌರವಿಸಬೇಕು.
ದೇವರಲ್ಲಿ ಭಕ್ತಿ ಮಾಡಿ: ದೇವರಲ್ಲಿ ಭಕ್ತಿ ಮಾಡಬೇಕು ಅಂದ್ರೆ, ದೇವರ ಬಗ್ಗೆ ಭಯ-ಭಕ್ತಿ ಇರಬೇಕು. ದೇವರನ್ನು ಆರಾಧಿಸಬೇಕು. ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ಎಂದರ್ಥ. ಏಕೆಂದರೆ, ಯಾರು ದೇವರಲ್ಲಿ ಭಕ್ತಿ ಮಾಡುತ್ತಾರೋ, ಅವರು ಎಂದಿಗೂ ಪಾಪದ ಕಾರ್ಯ ಮಾಡುವುದಿಲ್ಲ ಎಂದರ್ಥ. ಹೀಗಾಗಿ ದೇವರಲ್ಲಿ ಯಾರು ನಿಜವಾದ ಭಕ್ತಿ ಮಾಡುತ್ತಾರೋ, ಅವರಿಗೆ ಯಶಸ್ಸು ಖಚಿತ.




