Horoscope: ಅಣ್ಣ-ತಂಗಿ, ಅಕ್ಕ-ತಮ್ಮನ ಬಾಂಧವ್ಯ ಎಂದರೆ ಹಾಗೆ. ಜೀವಕ್ಕೆ ಜೀವ ನೀಡುವ ಸಂಬಂಧ. ಮದುವೆಯಾದ ಬಳಿಕ ಕೆಲವರು ಬದಲಾಗಬಹುದೆನೋ. ಆದರೆ ಕೆಲವರು ಸಾಯುವವರೆಗೂ ಅದೇ ಪ್ರೀತಿಯಿಂದಲೇ ಇರುತ್ತಾರೆ. ಅಂಥವರಲ್ಲಿ ಕೆಲವು ರಾಶಿಯಗಳ ಸಹೋದರಿಯರ ಬಗ್ಗೆ ನಾವಿಂದು ಹೇಳಲಿದ್ದೇವೆ.
ವೃಷಭ ರಾಶಿ: ವೃಷಭ ರಾಶಿಯ ಮಹಿಳೆಯರು ಕಾಳಜಿ, ಪ್ರೀತಿ ತೋರುವುದರಲ್ಲಿ ಮುಂದಿರುತ್ತಾರೆ. ತಮ್ಮವರಿಗಾಗಿ ಅದೆಷ್ಟು ಕಾಳಜಿ ಮಾಡುತ್ತಾರೆಂದರೆ, ಖುದ್ದು ತಮ್ಮ ಇಷ್ಟ ಕಷ್ಟಗಳನ್ನೆಲ್ಲಾ ಮರೆತು, ಬರೀ ತಮ್ಮವರ ಉಪಚಾರದಲ್ಲೇ ಜೀವನ ಕಳೆಯುತ್ತಾರೆ. ಇಂಥವರು ತಮ್ಮ ಸಹೋದರ-ಸಹೋದರಿಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ.
ಕರ್ಕ ರಾಶಿ: ಕರ್ಕ ರಾಶಿಯವರು ಜಲ ತತ್ವದವರು. ಸಂಬಂಧವನ್ನು ಕಾಯ್ದುಕ“ಳ್ಳಲು ಸದಾ ಇಚ್ಛಿಸುವವರು. ಬರೀ ಸಹೋದರತ್ವಕ್ಕೆ ಮಾತ್ರವಲ್ಲದೇ, ಎಲ್ಲ ಸಂಬಂಧಗಳಿಗೂ ಇವರು ಮಹತ್ವ ನೀಡುತ್ತಾರೆ. ಎಂಥ ಪರಿಸ್ಥಿತಿಯಲ್ಲೂ ತಮ್ಮವರ ಜತೆಗಿದ್ದು, ಧೈರ್ಯ ತುಂಬುವ, ಸಹಾಯ ಮಾಡುವ, ಬೆಂಬಲ ನೀಡುವ ಗುಣ ಇವರಿಗಿರುತ್ತದೆ.
ತುಲಾ ರಾಶಿ: ತುಲಾ ರಾಶಿಯವರು ತಾಯಿಯ ಗುಣ ಉಳ್ಳವರು. ಪ್ರೀತಿ, ಕಾಳಜಿ ತೋರಿಸುವಲ್ಲಿ ತುಲಾ ರಾಶಿಯವರು ಸದಾ ಮುಂದೆ. ಹಾಗಾಗಿ ಸಹೋದರ- ಸಹೋದರಿಗೆ ಪ್ರೀತಿ, ಕಾಳಜಿ ತೋರಿಸುವುದು ಇವರ ಪ್ರಮುಖ ಆದ್ಯತೆಯಾಗಿರುತ್ತದೆ.
ಮೀನ ರಾಶಿ: ಮೀನರಾಶಿಯವರು ಸ್ವಭಾವದಿಂದಲೇ ಮೃದು ಮಾತು, ಮೃದು ಮನಸ್ಸುಳ್ಳವರು. ಇವರು ಬರೀ ಸಹೋದರ-ಸಹೋದರಿಯ ಬಳಿ ಅಷ್ಟೇ ಉತ್ತಮ ಸಂಬಂಧ ಉಳ್ಳವರಲ್ಲ. ಎಲ್ಲರ ಜತೆ ಉತ್ತಮ ರೀತಿಯಲ್ಲೇ ಇರಲು ಇವರು ಬಯಸುತ್ತಾರೆ. ಅದರಲ್ಲೂ ರಕ್ತ ಸಂಬಂಧಕ್ಕೆ ಹೆಚ್ಚು ಮಹತ್ವ ನೀಡುವವರು ಮೀನ ರಾಶಿಯವರು.




