Political News: ಪ್ರತೀ ಮನುಷ್ಯನಿಗೂ ಜೀವನದಲ್ಲಿ ಸ್ವಲ್ಪವಾದರೂ ಕಷ್ಟವಿರುತ್ತದೆ. ಆದರೆ ಕಷ್ಟ ಎಂದು ತಲೆ ಮೇಲೆ ಕೈ ಇಟ್ಟು ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ನಾವು ಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚಾಣಕ್ಯರು ವಿವರಿಸಿದ್ದಾರೆ.
ದೌರ್ಬಲ್ಯ ತೋರಿಸಬೇಡಿ: ದೌರ್ಬಲ್ಯ ಅಂದ್ರೆ ವೀಕ್‌ನೆಸ್. ನಿಮ್ಮ ವೀಕ್‌ನೆಸ್ ಮತ್ತು ನೀವು ಯಾವ ಕಾರಣಕ್ಕೆ ಕಷ್ಟಕ್ಕೆ ಸಿಲುಕಿದ್ದೀರಿ ಎಂದು ಎಲ್ಲರ ಬಳಿ ಹೇಳಿಕ“ಂಡು ತಿರುಗಬೇಡಿ. ನೀವು ದುರ್ಬಲರೆಂದು ಯಾರಲ್ಲಿಯೂ ತೋರಿಸಬೇಡಿ. ಹಾವಿನಲ್ಲಿ ವಿಷವಿಲ್ಲದಿದ್ದರೂ ಅದು ಬುಸುಗೂಡುವುದು ಬಿಡುವುದಿಲ್ಲ. ಅದೇ ರೀತಿ ಏನೇ ಸಮಸ್ಯೆ ಬಂದರೂ ಅದನ್ನು ನಾನು ಎದುರಿಸಬಲ್ಲೆ ಎಂಬ ಧೈರ್ಯ ನಿಮ್ಮಲ್ಲಿರಬೇಕು.
ಶತ್ರುಗಳನ್ನು ನೀವು ಹೆದರಸಬೇಕು: ಶತ್ರುಗಳು ನಿಮ್ಮನ್ನು ನೋಡಿ ಹೆದರಬೇಕೇ ವಿನಃ ನೀವು ಶತ್ರುಗಳನ್ನು ನೋಡಿ ಹೆದರಬಾರದು ಅಂತಾರೆ ಚಾಣಕ್ಯರು. ಹಾವಿನಲ್ಲಿ ವಿಷ ತೆಗೆದಿದ್ದರೂ, ಹಲ್ಲು ಕಿತ್ತರೂ, ಅದು ಎದುರಿಗುವವರ ಎದೆ ನಡುಗಿಸುವ ಧೈರ್ಯ ಇರಿಸಿಕ“ಂಡಿರುತ್ತದೆ. ಅದೇ ರೀತಿ ನಾವು ಕೂಡ ನಮ್ಮಲ್ಲಿರುವ ದೌರ್ಬಲ್ಯ ಯಾರಿಗೂ ಹೇಳದೇ, ಧೈರ್ಯವಾಗಿಯೇ ಇರಬೇಕು ಅಂತಾರೆ ಚಾಣಕ್ಯರು.
ಹಾಗಾದರೆ ಸಮಸ್ಯೆ ಯಾರ ಬಳಿ ಹೇಳಬೇಕು..?
ಜೀವನದಲ್ಲಿ ಓರ್ವ ಮನುಷ್ಯನಿಗೆ ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಯಾರಾದರೂ ಪ್ರೀತಿ ಪಾತ್ರರು, ನಂಬಿಕಸ್ತರು ಇರುತ್ತಾರೆ. ನೀವು ಅವರ ಬಳಿ ನಿಮ್ಮ ಸಮಸ್ಯೆ ಹೇಳಿದಾಗ, ಅದನ್ನು ಅವರು ಯಾರ ಮುಂದೆಯೂ ಹೇಳದೇ, ನಿಮ್ಮ ಗೌರವವನ್ನು ಕಾಪಾಡುವವರಿರುತ್ತಾರೆ. ಅಂಥವರ ಬಳಿ ಮಾತ್ರ ನೀವು ಸಮಸ್ಯೆ ಹೇಳಿ, ಪರಿಹಾರ ಕೇಳಬಹುದು ಅಂತಾರೆ ಚಾಣಕ್ಯರು.




