Life Lesson: ಈ Mobile Manners ನಿಮ್ಮಲ್ಲಿ ಇರದಿದ್ದರೆ ನಿಮ್ಮ ಗೌರವ ಹಾಳಾಗುತ್ತದೆ

Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ ಕಾಲದಲ್ಲಿ ಸ್ನೇಹ, ಸಂಬಂಧ ಎಲ್ಲ ಸೆಲ್‌ ಫೋನ್ ಮೇಲೆಯೇ ಡಿಪೆಂಡ್ ಆಗಿದೆ. ಬರ್ತ್‌ಡೇ, ಮ್ಯಾರೇಜ್‌ಡೇ ಎಲ್ಲ ದಿನದಂದು ಸ್ಟೇಟಸ್ ಹಾಕಿಯೇ ವಿಶ್ ಮಾಡಬೇಕು. ಹಾಕದಿದ್ದರೆ, ಸಂಬಂಧಕ್ಕೆ ಬೆಲೆ ಇಲ್ಲ ಎಂದರ್ಥ.

ಅಲ್ಲದೇ ಕಾಲ್ ಮಾಡಲಿಲ್ಲ, ಮೆಸೇಜ್ ಮಾಡಲಿಲ್ಲ. ಹೀಗೆ ಹಲವು ಕಾರಣಗಳಿಂದ ಸಂಬಂಧವೇ ಮುರಿಯುವ ಸಾಧ್ಯತೆಗಳಿದೆ. ಇದೆಲ್ಲವೂ ಮನುಷ್ಯನ ನಿರೀಕ್ಷೆಗಳಿಂದ ಆಗುವ ಅವಘಡವಾದರೂ, ಇಲ್ಲಿ ಮೇನ್ ರೀಸನ್ ಎನ್ನಿಸೋದು ಸೆಲ್ ಫೋನ್. ಹಾಗಾಗಿ ನಾವಿಂದು ಸೆಲ್ ಫೋನ್ ಬಳಸುವವರಿಗೆ ಇರಬೇಕಾದ ಕೆಲವು ಮ್ಯಾನರ್ಸ್ ಬಗ್ಗೆ ಹೇಳಲಿದ್ದೇವೆ.

ಸಾರ್ವಜನಿಕ ಸ್ಥಳದಲ್ಲಿ ಹೆಡ್‌ಫೋನ್ ಬಳಸಲೇಬೇಕು: ನೀವು ಬಸ್, ಬಸ್‌ಸ್ಟ್ಯಾಂಡ್, ಮೆಟ್ರೋ, ಆಫೀಸ್, ಯಾರದ್ದಾದರೂ ಮನೆ ಅಥವಾ ಯಾವುದಾದರೂ ಸಾರ್ವಜನಿಕ ಸ್ಥಳ ಎಲ್ಲೇ ಇದ್ದರೂ ನೀವು ಯಾವುದಾದರೂ ವೀಡಿಯೋ ನೋಡುತ್ತಿದ್ದರೆ ಅಥವಾ ಯಾರ ಜತೆಗಾದರೂ ಮಾತನಾಡುತ್ತಿದ್ದರೆ, ಹೆಡ್ ಫೋನ್ ಬಳಸುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಬಗ್ಗೆ ಯಾರಿಗೂ ತಪ್ಪು ಅಭಿಪ್ರಾಯ ಬರುವುದಿಲ್ಲ. ಇಲ್ಲವಾದಲ್ಲಿ, ಜನ ಎದುರಿಗೆ ಅಥವಾ ಮನಸ್ಸಿನಲ್ಲಿ ನಿಮ್ಮನ್ನು ಬೈಯ್ಯಬಹುದು. ನಿಮಗೆ ಅಗೌರವ ತೋರಿಸಬಹುದು.

ಬೇರೆಯವರ ಸೆಲ್ ಫೋನ್ ಸ್ವೈಪ್ ಮಾಡಬೇಡಿ: ಯಾರಾದರೂ ನಿಮಗೆ ಯಾವುದಾದರೂ, ಫೋಟೋ, ವೀಡಿಯೋ ನೋಡೋಕ್ಕೆ ನೀಡಿದರೆ, ಅದನ್ನು ಸ್ವೈಪ್ ಮಾಡಬೇಡಿ.

ಪದೇ ಪದೇ ಫೋನ್ ನೋಡುವುದು ಅಗೌರವ ತೋರಿದಂತೆ : ಯಾರಾದರೂ ನಿಮ್ಮ ಬಳಿ ಮಾತನಾಡುವಾಗ ನೀವು ಪದೇ ಪದೇ ಫೋನ್ ನೋಡಿದರೆ, ಅದು ಅವರ ಮಾತಿಗೆ ಅಗೌರವ ತೋರಿದಂತೆ. ಇದರಿಂದ ನಿಮ್ಮ ಬಗೆಗಿನ ಗೌರವ, ಪ್ರೀತಿ ಎಲ್ಲವೂ ಕಡಿಮೆಯಾಗುತ್ತದೆ.

ಅಕ್ಕ ಪಕ್ಕದವರ ಫೋನ್ ನೋಡುವುದು: ನೀವು ಸುಮ್ಮನೆ ಕುಳಿತಾಗ , ನಿಮ್ಮ ಅಕ್ಕಪಕ್ಕದವರು ಫೋನ್ ನೋಡುತ್ತಿದರೆ, ಅದನ್ನು ಇಣುಕಿ ನೋಡಬೇಡಿ.

About The Author