ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಕಾರ್ಯ ನಿಧಾನ: ವಿಜಯೇಂದ್ರ ವ್ಯಂಗ್ಯ

Political News: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಸಮೀಕ್ಷೆ ಆರಂಭವಾಗಿ ಒಂದು ತಿಂಗಳು ಕಳೆದರೂ, ಇದುವರೆಗೆ ಕೇವಲ ಶೇ.38ರಷ್ಟು ಫಲಾನುಭವಿಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿದೆ.

ಈ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್‌ಕಾರವನ್ನು ಟೀಕಿಸಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸರ್ಕಾರದಂತೆ, ನಿಮ್ಮ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯೂ ಕುಂಟುತ್ತಾ ಸಾಗಿದೆ. ಇದು ನಿಮ್ಮ ಅಧಿಕಾರಿಗಳ ಹಾಗೂ ನಿಮ್ಮ ಸರ್ಕಾರ, ಮಂತ್ರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಚುನಾವಣೆಗೂ ಮುಂಚೆ ಮಹಾದೇವಪ್ಪನಿಗೂ ಫ್ರಿ, ಕಾಕಾ ಸಾಹೇಬ್ ಗೂ ಫ್ರಿ ಅಂತ ಹೇಳಿ ಈಗ ಪರಿಷ್ಕರಣೆ ನೆಪದಲ್ಲಿ ಯೋಜನೆಯನ್ನೇ ಕುಂಠಿತಗೋಳಿಸುತ್ತಿದ್ದೀರಿ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಮೊದಲು ಬೇಕಾಬಿಟ್ಟಿಯಾಗಿ ಯಾವುದೇ ಪೂರ್ವನಿಯೋಜಿತ ಯೋಜನೆಯಿಲ್ಲದೇ ಎಲ್ಲರಿಗೂ ಉಚಿತ ನೀಡಿದ್ದೀರಿ. ಈಗ ಪರಿಷ್ಕರಣೆ ನೆಪದಲ್ಲಿ ಯೋಜನೆಗೆ ಎಳ್ಳು ನೀರು ಬಿಡಲು ಮುಂದಾಗಿದ್ದೀರಿ. ಸಮೀಕ್ಷೆ ನೆಪದಲ್ಲಿ ಎಸ್ಕಾಂ ನಲ್ಲಿರುವ ಎಲ್ಲ ಉದ್ಯೋಗಿಗಳನ್ನು ಮನೆ ಮನೆಗೆ ತಿರುಗಾಡಲು ಹಚ್ಚಿದ್ದೀರಿ. ನಿಮಗೆ ಈ ಮೊದಲು ಅನ್ಯರಾಜ್ಯದವರು, ಅನರ್ಹರು ಇದ್ದಾರೆ ಎಂಬುದು ಗೊತ್ತಾಗಲಿಲ್ಲವೇ? ಪರಿಷ್ಕರಣೆಯೇ ಇನ್ನೂ ಕುಂಟುತ್ತಾ ಸಾಗಿದೆ. ಸಮೀಕ್ಷೆ ಮುಗಿಯೋದು ಯಾವಾಗ ಸ್ವಾಮಿ..? ಎಂದು ವಿಜಯೇಂದ್ರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

About The Author