Chanakya Neeti: ಈ 5 ಗುಣಗಳು ನಿಮ್ಮಲ್ಲಿದ್ದರೆ ಸಮಾಜ ನಿಮ್ಮನ್ನು ಖಂಡಿತವಾಗಿಯೂ ಗೌರವಿಸುತ್ತದೆ.

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ನಮಗೆ ಸಮಾಜದಲ್ಲಿ ಗೌರವ ಸಿಗಬೇಕು ಅಂದ್ರೆ ನಾವು ಹೇಗಿರಬೇಕು ಅಂತಲೂ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ನೀಡಿದ ಮಾತಿಗೆ ತಕ್ಕಂತೆ ಇರಿ: ಯಾರಿಗಾದರೂ ಏನಾದರೂ ಮಾತು ನೀಡುವ ಮುಂಚೆ 10 ಬಾರಿ ಯೋಚಿಸಬೇಕು. ಮಾತು ನೀಡಿ, ಬಳಿಕ ತಪ್ಪಿದರೆ, ಸಮಾಜ ನಿಮ್ಮನ್ನು ಗೌರವಿಸುವುದಿಲ್ಲ. ಹಾಗಾಗಿ ನೀಡಿದ ಮಾತಿನಂತೆ ನಡೆಯಬೇಕು. ಏನಾದರೂ ಮಾಡುತ್ತೇನೆ, ಏನಾದರೂ ನೀಡುತ್ತೇನೆ ಹೀಗೆ ಬೇರೆಯವರಿಗೆ ಸಹಾಯ ಮಾಡುತ್ತೇನೆಂದು ಭರವಸೆ ನೀಡಿ, ಅದನ್ನು ಹುಸಿಗ“ಳಿಸದೇ ಇದ್ದಾಗ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಮಾತುಗಳನ್ನು ಆಲಿಸಿ: ಯಾರಾದರೂ ಮಾತನಾಡುತ್ತಿದ್ದರೆ, ಅವರ ಮಾತಿಗೆ ಅಡ್ಡ ಪಡಿಸುವುದು. ನಿಮ್ಮ ಮಾತನ್ನು ಎಳೆದು ತರುವುದು, ಇದೆಲ್ಲವೂ ಸಣ್ಣತನದ ಗುಣ. ಇಂಥ ಗುಣವಿದ್ದಾಗ ಜನ ನಿಮ್ಮನ್ನು ಗೌರವಿಸುವುದಿಲ್ಲ. ತಾಳ್ಮೆಯಿಂದ ಎದುರಿನವರ ಮಾತು ಕೇಳಿ.

ಪ್ರೀತಿ, ಕಾಳಜಿ, ಗೌರವ ತೋರಿಸಿ: ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ, ಕಾಳಜಿ ತೋರಿಸಿದಾಗ, ನಿಮ್ಮ ಮೇಲಿನ ಗೌರವ ತನ್ನಿಂದ ತಾನೇ ಹೆಚ್ಚುತ್ತದೆ.

ವಯಸ್ಸಿನ ಮಿತಿ ಮೀರಿ ಕಲಿಯಿರಿ: ಯಾರ ಬಳಿಯಾದರೂ ನಿಮಗೆ ಉತ್ತಮ ನಾಲೆಜ್ ಇದೆ ಅಂತಾದ್ರೆ, ಅವರಿಂದ ಆ ವಿಷಯ ಅರಿಯಲು ಪ್ರಯತ್ನಿಸಿ. ನಿಮಗೆ ವಯಸ್ಸಾಗಿರಬಹುದು. ಆದರೆ ನಿಮಗಿಂತ ಚಿಕ್ಕವರ ಮಾತನ್ನು ಗೌರವಿಸಿ. ಹಿರಿತನ ಬದಿಗಿರಿಸಿ, ಗೆಳೆಯರ ರೀತಿ ವರ್ತಿಸಿ, ಅವರಿಂದ ನಿಮಗೆ ಸಹಾಯವಾಗುವ ವಿದ್ಯೆ ಕಲಿಯಲು ಪ್ರಯತ್ನಿಸಿ. ಇವೆಲ್ಲ ಗುಣಗಳು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಿಸಲು ಸಹಾಯವಾಗುತ್ತದೆ.

About The Author