Health Tips: ನೀವು ಯಾವುದಾದರೂ ಮಾರ್ಟ್ ಅಥವಾ ಅಂಗಡಿಗೆ ಹೋದಾಗ ಅಲ್ಲಿ ತಾವರೆ ಬೀಜಗಳನ್ನು ನೋಡಿರ್ತೀರಿ. ಆದರೆ ಹಲವರು ಇದನ್ನು ಖರೀದಿ ಮಾಡುವ ಗೋಜಿಗೆ ಹೋಗೋದೇ ಇಲ್ಲ. ಅದನ್ನೆಲ್ಲ ಹೇಗೆ ತಿನ್ನೋದು ಅಂತಾ ತಿಳಿದಿಲ್ಲ ಅಂತಾ ಹೇಳಿ ಸುಮ್ಮನಾಗುತ್ತೀರಿ. ಆದರೆ ತಾವರೆ ಬೀಜವನ್ನು ಸೇವಿಸಿದರೆ, ಹಲವಾರು ಆರೋಗ್ಯ ಲಾಭಗಳಿದೆ. ಆ ಬಗ್ಗೆ ಇಂದು ತಿಳಿಯೋಣ ಬನ್ನಿ.
ತಾವರೆ ಬೀಜವನ್ನು ಮಖಾನಾ ಎಂದು ಕರೆಯುತ್ತಾರೆ. ಮಖಾನಾ ಸಾಫ್ಟ್ ಆಗಿಯೋ, ಗಟ್ಟಿಯಾಗಿಯೋ, ಅಥವಾ ಕ್ರಿಸ್ಪಿಯಾಗಿಯೋ ಇರೋದಿಲ್ಲ. ಇದು ಚರ್ಮುರಿ ಗಾಳಿಗೆ ಇಟ್ಟಾಗ ಹೇಗೆ ಮೆತ್ತಗಾಗುತ್ತದೆಯೋ ಅದೇ ರೀತಿ ಇರುತ್ತದೆ. ಆದರೆ ನೀವು ಇದನ್ನು ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಹುರಿದರೆ, ಸಖತ್ ಕ್ರಿಸ್ಪಿಯಾಗುತ್ತದೆ.
ಹಾಗಾಗಿ ಇದನ್ನು ಎಣ್ಣೆಯಲ್ಲಿ ಹುರಿದು, ಸಲಾಡ್, ಸ್ನಾಕ್ಸ್ ಮಾಡುತ್ತಾರೆ. ತುಪ್ಪದಲ್ಲಿ ಹುರಿದು, ಲಡ್ಡು, ಖೀರು, ಪಾಯಸ ಮಾಡುತ್ತಾರೆ. ನೀವು ಮಖಾನಾವನ್ನು ತುಪ್ಪದಲ್ಲಿ ಹುರಿದು, ಪುಡಿ ಮಾಡಿ, ಇದರ ಜತೆಗೆ ಹುರಿದ ಡ್ರೈಫ್ರೂಟ್ಸ್, ಬೆಲ್ಲ ಹಾಕಿ ಲಡ್ಡು ತಯಾರಿಸಿ, ಪ್ರತಿದಿನ 1 ಲಡ್ಡು ತಿಂದರೂ ಸಾಕು. ನಿಮ್ಮ ಮೂಳೆ ಬಲವಾಗುತ್ತದೆ. ಹಾಗಾಗಿಯೇ ಮಕ್ಕಳಿಗೆ ಮಖಾನಾ ಲಡ್ಡು ನೀಡುವುದು ಉತ್ತಮ.
ನಿಮ್ಮ ಮಗು ನಿಶ್ಶಕ್ತಿಯಿಂದ ಬಳಲುತ್ತಿದೆ. ಮೂಳೆಗಳಲ್ಲಿ ಬಲವಿಲ್ಲ. ಸ್ಪೋರ್ಟ್ಸ್ ಸೇರಿ ಬೇರೆ ಬೇರೆ ಆ್ಯಕ್ಟಿವಿಟಿಯಲ್ಲಿ ಭಾಗವಹಿಸಲು ಉದಾಸೀನವಾಗುತ್ತದೆ ಅಂತಾದಲ್ಲಿ ನೀವು ಪ್ರತಿದಿನ 1 ತಾವರೆ ಬೀಜದ ಲಾಡು ನೀಡಿದ್ರೆ, ಉತ್ತಮ ಫಲಿತಾಂಶ ನೀಡಬಹುದು.
ಏಕೆಂದರೆ ಮಖಾನಾದಲ್ಲಿ ಕ್ಯಾಲ್ಶಿಯಂ, ಪ್ರೋಟೀನ್ ಸೇರಿ ಹಲವು ಪೋಷಕಾಂಶಗಳು ಇರುತ್ತದೆ. ಅಲ್ಲದೇ ಇದರ ಜತೆಗೆ ನೀವು ತುಪ್ಪ, ಬೆಲ್ಲ, ಡ್ರೈಫ್ರೂಟ್ಸ್ ಸೇರಿಸಿದರೆ, ಪೋಷಕಾಂಶ ಹೆಚ್ಚಾಗುತ್ತದೆ. ಆದರೆ ಮಖಾನಾ ಸೇವಿಸಿದ್ದಲ್ಲಿ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ ಬಳಿಕ ಸೇವಿಸುವುದು ಉತ್ತಮ.




