Health Tips: ಹಾಲು ಮತ್ತು ತುಪ್ಪ ಸೇರಿಸಿ ಸೇವಿಸಿದರೆ ಆಗುವ ಆರೋಗ್ಯ ಲಾಭಗಳೇನು..? ಇಲ್ಲಿದೆ ನೋಡಿ ಮಾಹಿತಿ

Health Tips: ಹಾಲು ಮತ್ತು ತುಪ್ಪ ಎರಡರಲ್ಲೂ ಕೂಡ ಕ್ಯಾಲ್ಶಿಯಂ ಅಂಶ ಭರಪೂರವಾಗಿರುತ್ತದೆ. ಇವೆರಡನ್ನೂ ಸೇರಿಸಿ ಸೇವಿಸಿದರೆ, ನಮ್ಮ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಹಾಗಾದ್ರೆ ಇವೆರಡನ್ನು ಯಾವಾಗ ಮತ್ತು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.

ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ನಿಮಗೆ ಬರೀ ತುಪ್ಪ ಹಾಲು ಸೇವಿಸಲು ಇಷ್ಟವಿಲ್ಲ ಎಂದಲ್ಲಿ, ನೀವು ಕುದಿಯುವ ಹಾಲಿಗೆ ಸ್ವಲ್ಪ ಅರಿಶಿನ, ಶುಂಟಿ, ಜೀರಿಗೆ, ಚಕ್ಕೆ, ಲವಂಗ, ಕಾಳುಮೆಣಸು, ಏಲಕ್ಕಿ, ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಗ್ಯಾಸ್ ಆಫ್ ಮಾಡಿ, ಇದನ್ನು ಸೋಸಿ, ಇದಕ್ಕೆ ತುಪ್ಪ ಹಾಕಿ ಸೇವಿಸಿ. ಇದನ್ನು ಗೋಲ್ಡನ್ ಮಿಲ್ಕ್ ಎನ್ನುತ್ತಾರೆ. ಏಕೆಂದರೆ ಇದು ಆರೋಗ್ಯಕ್ಕೆ ಚಿನ್ನದಂಥ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಲವರಿಗೆ ಪದೇ ಪದೇ ಸುಸ್ತಾಗುತ್ತದೆ. ಜ್ವರ, ನೆಗಡಿ, ಕೆಮ್ಮು ಇರುತ್ತದೆ. ಏನೇ ಮದ್ದು ಪಡೆದರೂ ವಾಸಿಯಾಗುವುದಿಲ್ಲ. ಅಂಥವರು ಪ್ರತಿದಿನ ಈ ಹಾಲು ಮಾಡಿ ಕುಡಿಯಬೇಕು.

ನಿದ್ರಾಹೀನತೆ ಸಮಸ್ಯೆ ಇದ್ದಲ್ಲಿ ಅದು ಕೂಡ ನಿವಾರಣೆಯಾಗುತ್ತದೆ. ಪ್ರತಿದಿನ ರಾತ್ರಿ ಬೇಗ ನಿದ್ರೆ ಬರುವುದಿಲ್ಲ. ಪದೇ ಪದೇ ಎಚ್ಚರಾಗುತ್ತದೆ ಎಂದಾದಲ್ಲಿ, ನೀವು ಈ ಹಾಲನ್ನು ಸೇವಿಸಿ ಮಲಗಿ. ಇದು ಎಷ್ಟು ಗಾಢವಾದ ನಿದ್ರೆ ನೀಡುತ್ತದೆ ಎಂದರೆ, ಹಾಲು ಸೇವಿಸಿದ ತಕ್ಷಣವೇ ನಿದ್ರೆ ಬರಲು ಶುರುವಾಗುತ್ತದೆ.

ನಿಮ್ಮ ದೇಹದಲ್ಲಿ ಹೆಚ್ಚು ಶಕ್ತಿ ವೃದ್ಧಿಯಾಗುತ್ತದೆ. ಹಾಲು ಮತ್ತು ತುಪ್ಪದಲ್ಲಿ ಕ್ಯಾಲ್ಶಿಯಂ ಅಂಶ ಇರುವ ಕಾರಣ, ಈ ಹಾಲಿನ ಸೇವನೆಯಿಂದ ನೀವು ಶಕ್ತಿಶಾಲಿಯಾಗುತ್ತೀರಿ. ಹಾಗಾಗಿಯೇ ಗರ್ಭಿಣಿಯರಿಗೆ ರಾತ್ರಿ ಮಲಗುವ ವೇಳೆ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿಯಲು ನೀಡುತ್ತಾರೆ.

ನಿಮ್ಮ ಮೂಳೆಗಳು, ಹಲ್ಲು ಬಲವಾಗುತ್ತದೆ. ಹಾಲು ಮತ್ತು ತುಪ್ಪದಲ್ಲಿ ಕ್ಯಾಲ್ಶಿಯಂ ಅಂಶ ಇರುವ ಕಾರಣಕ್ಕೆ ಇವೆರಡರ ಸೇವನೆಯಿಂದ ನಮ್ಮ ಮೂಳೆ ಮತ್ತು ಹಲ್ಲು ಬಲವಾಗುತ್ತದೆ.

ನಿಮ್ಮ ಸೌಂದರ್ಯ ಹೆಚ್ಚುತ್ತದೆ. ಗೋಲ್ಡನ್ ಮಿಲ್ಕ್ ಸೇವನೆಯಿಂದ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.

ಈ ಎಲ್ಲ ಲಾಭವಾಗಬೇಕಂದರೆ ನಿಮ್ಮ ಜೀರ್ಣಕ್ರಿಯೆ ಸರಿಯಾಗಿರಬೇಕು. ಆ ಜೀರ್ಣಕ್ರಿಯೆ ಸಮಸ್ಯೆ ಕೂಡ ಈ ಹಾಲಿನ ಸೇವನೆಯಿಂದಲೇ ಸರಿಯಾಗುತ್ತದೆ. ಬಿಸಿ ಹಾಲಿಗೆ ಅರಿಶಿನ, ಮಸಾಲೆ ಪದಾರ್ಥ, ತುಪ್ಪ ಸೇರಿಸಿದ ಕಾರಣ ಇವೆಲ್ಲವೂ ತಿಂದ ಆಹಾರವನ್ನು ಚೆನ್ನಾಗಿ ಪಚನ ಮಾಡುತ್ತದೆ. ಇದರಿಂದ ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಚೆನ್ನಾಗಿರುತ್ತದೆ.

About The Author