Mumbai: ಬಾಲಿವುಡ್ ನಟ ಅಮೀರ್ ಖಾನ್ ದೂರದ ಸಂಬಂಧಿ ಇಮ್ರಾನ್ ಖಾನ್ ಭಾರತ ತೊರೆಯುವಂತೆ ಮುಂಬೈ ಪೋಲೀಸರು ನೋಟೀಸ್ ನೀಡಿದ್ದಾರೆ.
ಇಮ್ರಾನ್ ಖಾನ್ ಅಮೆರಿಕದ ಪೌರತ್ವ ಹೊಂದಿದ್ದು, ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಪತ್ನಿ ಮತ್ತು ಸಹೋದರಿಯ ಜತೆ ಭಾಗವಹಿಸಿದ್ದರು. ಬೇರೆ ದೇಶದ ಪೌರತ್ವವಿರುವವರು, ಭಾರತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲವೆಂದು ನಿಯಮವಿರುವ ಕಾರಣಕ್ಕೆ, ಇಮ್ರಾನ್ ಖಾನ್ಗೆ ಇದೇ ತಿಂಗಳ 28ರಲ್ಲಿ ಭಾರತ ಬಿಟ್ಟು ಹೋಗುವಂತೆ ಆದೇಶಿಸಲಾಗಿದೆ.
ಇಮ್ರಾನ್ ನಡೆ ಪ್ರಶ್ನಿಸಿ, ಪ್ರತಿಭಟನೆಯಲ್ಲಿ ವಿದೇಶಿ ಪ್ರಜೆಗಳು ಭಾಗವಹಿಸಬಹುದೇ ಎಂದು ಪ್ರಶ್ನಿಸಿದ್ದ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ, ಇಮ್ರಾನ್ ಖಾನ್ ಅವರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ತೀವ್ರವಾಗಿ ಒತ್ತಾಯಿಸಿದ್ದರು. ಇಮ್ರಾನ್ ಈ ಹಿಂದೆ ತಾನು ಶೀಘ್ರದಲ್ಲೇ ಭಾರತದ ಪೌರತ್ವ ಪಡೆಯುವುದಾಗಿ ಹೇಳಿದ್ದರೂ, ಆ ಬಳಿಕ ಪೌರತ್ವ ಪಡೆದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ವರದಿಯಾಗಿದೆ.




