Beauty Tips: ಕಲ್ಲಂಗಡಿ ಹಣ್ಣು ತಿನ್ನಲು ಎಷ್ಟು ರುಚಿಯೋ, ಆರೋಗ್ಯಕ್ಕೂ ಅಷ್ಟೇ ಉತ್ತಮ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಉತ್ತಮವಾಗುತ್ತದೆ. ಚರ್ಮ ಮತ್ತು ಕೂದಲು ಕೂಡ ಆರೋಗ್ಯವಾಗಿರುತ್ತದೆ. ಕಲ್ಲಂಗಡಿ ತಿಂದ ಬಳಿಕ ಅದರ ಸಿಪ್ಪೆಯಿಂದಲೂ ಹಲವು ಆರೋಗ್ಯಕರ ಲಾಭವಿದೆ. ಮುಖಡ ಕಾಂತಿ ಹೆಚ್ಚಿಸಲು ನಾವು ಕಲ್ಲಂಗಡಿ ಸಿಪ್ಪೆ ಬಳಸಬಹುದು.
ಕಲ್ಲಂಗಡಿ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯ ಭಾಗವನ್ನು ಕ್ಲೀನ್ ಮಾಡಿ ಪೇಸ್ಟ್ ತಯಾರಿಸಿ, ಬಳಿಕ ಅದಕ್ಕೆ ಹಸುವಿನ ಫ್ರೆಶ್ ಹಸಿ ಹಾಲನ್ನು ಸೇರಿಸಿ, ಫೇಸ್ ಪ್ಯಾಕ್ ಹಾಕಬೇಕು. ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ. ಈ ಕಾಂಬಿನೇಷನ್ನಿಂದ ಮುಖ ಕ್ಲೀನ್ ಆಗುತ್ತದೆ. ಸ್ಕಿನ್ ಮೇಲಿದ್ದ ಧೂಳನ್ನು ಚೆನ್ನಾಗಿ ಮಸಾಜ್ ಮಾಡಿ ಕ್ಲೀನ್ ಮಾಡಬಹುದು. ಇದರಿಂದ ನಿಮ್ಮ ಫೇಸ್ ಕೂಡ ಸುಂಂದರವಾಗುತ್ತದೆ.
ಇನ್ನು ಕಲ್ಲಂಗಡಿ ಪೇಸ್ಟ್ ಮತ್ತು ಕಡಲೆ ಹುಡಿಯನ್ನು ಸೇರಿಸಿ, ಫೇಸ್ಪ್ಯಾಕ್ ಹಾಕಬಹುದು. ಇದರಿಂದಲೂ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಕಡಲೆ ಹುಡಿಯಿಂದ ಮುಖದ ಸಾಫ್ಟ್ನೆಸ್ ಹೆಚ್ಚಾಗುತ್ತದೆ. ಕಲ್ಲಗಂಡಿ ಸಿಪ್ಪೆಯಿಂದ ಮುಖ ಫ್ರೆಶ್ ಆಗಿರುತ್ತದೆ.
ಕಲ್ಲಂಗಡಿ ಸಿಪ್ಪೆಗೆ ರೋಸ್ ವಾಟರ್ ಮತ್ತು ಆ್ಯಲೋವೆರಾ ಹಾಕಿ ಮಿಕ್ಸ್ ಮಾಡಿಯೂ ಫೇಸ್ಪ್ಯಾಕ್ಹಾಕಬಹುದು. ಇದರಿಂದ ನಿಮ್ಮ ಚರ್ಮ ಆರೋಗ್ಯಕರವಾಗಿ, ಸುಂದರವಾಗಿರುತ್ತದೆ.




