Hubli News: ಬರ ಪೀಡಿತ ರೈತರಿಗೆ ಮೂಲಭೂತ ಸೌಕರ್ಯ ಸಿಗದೇ ಇರುವ ಕಾರಣ ರೈತರಿಂದ ಪ್ರತಿಭಟನೆ

Hubli News: ಬರ ಪೀಡಿತ ರೈತರಿಗೆ ಮೂಲಭೂತ ಸೌಕರ್ಯ ಸಿಗದೇ ಇರುವ ಕಾರಣ ರೈತರು ಪ್ರತಿಭಟನೆ ನಡೆಸಿದ್ದಾರೆ. ಉಚ್ಛ ಗ್ರಾಮದಲ್ಲಿ ರಸ್ತೆ ರೋಕೋ ಮುಖಾಂತರ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರು ಸಿಗ್ತಾ ಇಲ್ಲಾ , ರೈತರಿಗೆ ಜಮೀನಿನಲ್ಲಿ ಸೂಕ್ತ ವಾದ ಕರೆಂಟ್ ನೀಡ್ತಾ ಇಲ್ಲಾ, ಬೀದಿ ದೀಪಗಳಿಲ್ಲ, ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡ್ತಾ ಇಲ್ಲಾ ಎಂದು ಜನರು ಆಕ್ರೋಶ ಗೊಂಡು ಪ್ರತಿಭಟನೆ ಮಾಡಿದರು

ಈ ಪ್ರತಿಭಟನೆ ಯಲ್ಲಿ ರೈತ ಸಂಘದ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮದ ಮುಖಂಡರಾದ, ಚಂದ್ರಪ್ಪ ಬಿರಾದಾರ್, ಭೀಮ್ ಪಾಟೀಲ್, ಸೋಮಣ್ಣ ಸಜ್ಜನ್, ಅರ್ಜುನ್ ಕಾಳೆ, ರಾಜಪ್ಪಾ ಬಾದಲಗಾವೆ, ದಿಲೀಪ್ ಧರ್ಮಣ್ಣ, ಮತ್ತಿತರರು ಭಾಗಿ ಯಾಗಿದ್ದರು

About The Author