ಶ್ರೀರಾಮನಿಗೆ ಪ್ರಿಯವಾದ ಹಣ್ಣಿದು: ಈ ಹಣ್ಣು ಭಾರತಕ್ಕೆ ಬಂದಿದ್ದು ಹನುಮನಿಂದ..

ಈ ಭೂಮಿಯ ಮೇಲೆ ಹಲವಾರು ಥರದ ಹಣ್ಣುಗಳನ್ನ ಬೆಳೆದರೂ ಕೂಡ, ಎಲ್ಲರ ಫೇವರಿಟ್ ಹಣ್ಣು ಅಂದ್ರೆ ಮಾವಿನ ಹಣ್ಣು. ಬೇಸಿಗಾಗಿ ಕಾದು ಕುಳಿತು, ಸಿಹಿ ಸಿಹಿಯಾದ ಮಾವನ್ನು ಸವಿಯುವುದೇ ಒಂದು ಮಜಾ. ಹಣ್ಣುಗಳ ರಾಜನೆನ್ನಿಸಿಕೊಂಡಿರುವ ಮಾವಿನ ಹಣ್ಣು ರಾಮ- ಹನುಮನಿಗೆ ಬಲು ಪ್ರಿಯವಾಗಿದೆ. ಈ ಹಣ್ಣನ್ನ ಭಾರತಕ್ಕೆ ತಂದಿದ್ದು ಹನುಮ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರಾವಣ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಕರೆದೊಯ್ದು, ಆಕೆಯನ್ನು ಅಶೋಕ ವನದಲ್ಲಿಟ್ಟಿರುತ್ತಾನೆ. ಆಗ ಹನುಮ ಸೀತೆದೇವಿಯನ್ನು ಹುಡುಕುತ್ತ, ಅಶೋಕ ವನಕ್ಕೆ ಬಂದು ತಲುಪುತ್ತಾನೆ. ಈ ವೇಳೆ ಆತನಿಗೆ ಹೊಟ್ಟೆ ಹಸಿವಾಗಿರುತ್ತದೆ. ಸೀತೆಯ ಅನುಮತಿ ಪಡೆದು ವನದಲ್ಲಿರುವ ಹಣ್ಣುಹಂಪಲನ್ನು ಸೇವಿಸುತ್ತಾನೆ. ವಿವಿಧ ರೀತಿಯ ಹಣ್ಣುಗಳಲ್ಲಿ ಹನುಮನಿಗೆ ಮಾವಿನ ಹಣ್ಣು ತುಂಬಾ ಇಷ್ಟವಾಗುತ್ತದೆ. ತಾನು ಕೆಲ ಮಾವಿನ ಹಣ್ಣನ್ನು ತಿಂದು ತನ್ನ ಒಡೆಯ ಶ್ರೀರಾಮನಿಗೂ ಒಂದಿಷ್ಟು ಮಾವಿನ ಹಣ್ಣು ಮತ್ತು, ಸೀತೆ ಕೊಟ್ಟ ಉಂಗುರವನ್ನು ತೆಗೆದುಕೊಂಡು ಹೋಗುತ್ತಾನೆ.

ಸೀತೆಯ ಚಿಂತೆಯಲ್ಲಿದ್ದ ರಾಮ ಲಕ್ಷ್ಮಣರ ಬಳಿ ಬಂದ ಹನುಮ ಸೀತಾದೇವಿ ಸೌಖ್ಯವಾಗಿದ್ದಾರೆ. ಅವರನ್ನು ಅಶೋಕ ವನದಲ್ಲಿರಿಸಲಾಗಿದೆ. ಅವರು ನಿಮಗಾಗಿ ಉಂಗುರವನ್ನು ನೀಡಿದ್ದಾರೆಂದು ಹೇಳಿ, ರಾಮನಿಗೆ ಉಂಗುರವನ್ನು ನೀಡುತ್ತಾನೆ. ಮತ್ತು ತಾನು ತಂದ ಮಾವಿನ ಹಣ್ಣಿನ ಗುಣಗಾನ ಮಾಡಿ, ರಾಮ ಲಕ್ಷ್ಮಣರಿಗೆ ಆ ಹಣ್ಣನ್ನು ನೀಡುತ್ತಾನೆ. ಮಾವು ತಿಂದ ರಾಮ ಲಕ್ಷ್ಮಣರು ಸಂತೃಪ್ತರಾಗಿ, ಅಲ್ಲೇ ಪಕ್ಕದ ಕಾಡಿದನಲ್ಲಿ ಅದರ ಬೀಜ ಬಿಸಾಡುತ್ತಾರೆ. ಅದೇ ಮರವಾಗಿ ಬೆಳೆದು ಎಲ್ಲೆಡೆ ಹರಡುತ್ತದೆ. ಹೀಗೆ ಮಾವಿನ ಹಣ್ಣಿನ ಸ್ವಾದ ಇಡೀ ಭಾರತಕ್ಕೇ ತಿಳಿಯುತ್ತದೆ.

ಮಾವಿನ ಹಣ್ಣು ತಿಂದು ಶ್ರೀರಾಮ ಬೀಜ ಬಿಸಾಡಿದ್ದಕ್ಕೆ ಅದು ಮರವಾಗಿ ಬೆಳೆಯಿತೆಂಬ ಕಾರಣಕ್ಕೆ, ಮಾವನ್ನು ಶ್ರೀರಾಮನ ಪ್ರಸಾದವೆಂದು ಕರಿಯುತ್ತಾರೆ. ಇಷ್ಟೇ ಅಲ್ಲದೇ, ಮಾವಿನ ಮರದಲ್ಲಿ ಹನುಮ ವಾಸವಿರುವನೆಂದು ನಂಬಿಕೆ ಇದ್ದು, ಯಾರ ಮನೆಯಲ್ಲಿ ಮಾವಿನ ಮರವಿರುತ್ತದೆಯೋ, ಅಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಇರುವುದಿಲ್ಲವೆಂಬ ನಂಬಿಕೆ ಇದೆ. ಆದ್ದರಿಂದಲೇ ಹಬ್ಬ ಹರಿದಿನಗಳಲ್ಲಿ ತೋರಣ ಕಟ್ಟಲು ಮಾವಿನ ಎಲೆಯನ್ನೇ ಬಳಸಲಾಗುತ್ತದೆ.

ಇನ್ನು ರಾಮ- ಹನುಮರ ಪೂಜೆ ಮಾಡುವಾಗ ಮಾವಿನ ಹಣ್ಣನ್ನು ಪ್ರಸಾದವಾಗಿ ಇಟ್ಟರೆ ಉತ್ತಮ ಎನ್ನಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author