ಬಲಶಾಲಿ ಭೀಮ ಬಕ ರಾಕ್ಷಸನನ್ನು ಕೊಂದಿದ್ದು ಹೇಗೆ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು, ಹಿಡಿಂಬನನ್ನು ವಧಿಸಿ, ಹಿಡಿಂಬೆಯ ಜೊತೆ ವಿಹರಿಸಿ, ಘಟೋತ್ಕಜನ ಜನ್ಮದ ನಂತರ ಪಾಂಡವರು ಬ್ರಾಹ್ಮಣರ ವೇಷ ಧರಿಸಿ, ಬ್ರಾಹ್ಮಣನೋರ್ವನ ಕುಟೀರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬ್ರಾಹ್ಮಣ ಮತ್ತು ಆತನ ಪತ್ನಿ ಮಕ್ಕಳು ಜೋರಾಗಿ ಅಳುತ್ತಿದ್ದರು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಅವರ ಅಳುವಿಗೆ ಕಾರಣವೇನು ಎಂದು ಕೇಳಿದಾಗ, ಈ ಊರಿನಲ್ಲಿ ಬಕನೆಂಬ ಅಸುರನಿದ್ದಾನೆ. ಅವನಿಗೆ ಪ್ರತಿದಿನ ಒಂದು ಬಂಡಿ ಅನ್ನ, ಸಾರು, ಎರಡು ಕೋಣ ಮತ್ತು ಓರ್ವ ಮನುಷ್ಯ ಆಹಾರವಾಗಿ ಬೇಕು. ಹಾಗಾಗಿ ನಾನು ಪ್ರಾಣತ್ಯಾಗ ಮಾಡಲು ಬಯಸಿದೆ. ಆದರೆ ನನ್ನ ಪತ್ನಿ ತಾನು ಬಕನ ಬಳಿ ಹೋಗುತ್ತೇನೆಂದು ಹೇಳುತ್ತಿದ್ದಾಳೆ. ಮಕ್ಕಳು ತಾವು ಹೋಗುತ್ತೇನೆಂದು ಹೇಳುತ್ತಿದ್ದಾರೆ. ಹಾಗಾಗಿ ನಮಗೇನು ಮಾಡಬೇಕೆಂದು ತೋಚುತ್ತಿಲ್ಲವೆಂದು ಹೇಳುತ್ತಾರೆ.

ಆಗ ಕುಂತಿ ತನ್ನ ಮಗನನ್ನು ಅಲ್ಲಿ ಕಳುಹಿಸುತ್ತೇನೆ ನೀವೇನು ಚಿಂತೆ ಮಾಡಬೇಡಿ. ನನ್ನ ಮಗನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆತ ಬಕಾಸುರನನ್ನು ಕೊಂದೇ ಬರುತ್ತಾನೆಂದು ಹೇಳುತ್ತಾಳೆ. ಇದಕ್ಕೆ ಕೊಂಚ ಸಮಾಧಾನಪಟ್ಟ ಬ್ರಾಹ್ಮಣ, ಕುಂತಿಯ ಮಗನಿಗೆ ಹರಸಿ ಕಳುಹಿಸುತ್ತಾನೆ.

ಅನ್ನದ ಬಂಡಿ, ಸಾರು, ಕೋಣವನ್ನು ತೆಗೆದುಕೊಂಡು ಭೀಮ ಬಕ ರಾಕ್ಷಸನ ಬಳಿ ಹೋಗುತ್ತಾನೆ. ಬಕನ ಎದುರಿಗೆ ಬಂಡಿಯಲ್ಲಿದ್ದ ಅನ್ನ ಸಾರನ್ನ ತಿನ್ನುತ್ತಾನೆ. ಇದನ್ನು ಕಂಡು ಕೋಪಗೊಂಡ ಬಕ ಭೀಮನ ಬಳಿ ಬಂದಾಗ, ಭೀಮ ಬಕನ ಜೊತೆ ಬಡಿದಾಡಿ ಬಕನ ಸಂಹಾರ ಮಾಡಿಬಿಡುತ್ತಾನೆ. ಬಕಾಸುರನ ಸಾವಿನಿಂದ ಇಡೀ ಗ್ರಾಮ ಸಂತಸಗೊಳ್ಳುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author