ಮೈತ್ರಿ ಸರ್ಕಾರ ಉರುಳಿಸೋದಕ್ಕೆ ಬಿಜೆಪಿ ಮೆಗಾ ಸ್ಕೆಚ್ ಹಾಕಿದೆ. ಈಗಾಗಲೇ ಆಪರೇಷನ್ ಕಮಲಕ್ಕೆ ದೆಹಲಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಆಪರೇಷನ್ ಕಮಲಕ್ಕೆ ಡೇಟ್ ಫಿಕ್ಸ್ ಆಗಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಲಹೆ ನೀಡಿದ್ದು, ಸದ್ಯ ಸುಮ್ಮನಿರಿ ದೋಸ್ತಿ ಸರ್ಕಾರ ತಾನಾಗಿಯೇ ಪತನವಾಗುತ್ತೆ, ಒಂದು ವೇಳೆ ಮೈತ್ರಿ ಸರ್ಕಾರ ಪತನವಾಗದಿದ್ದಲ್ಲಿ ಒಂದು ತಿಂಗಳ ಬಳಿಕ ಆಟ ಶುರು ಮಾಡಿ ಸರ್ಕಾರ ಬೀಳಿಸಿ, ನಂತರ ನಮ್ಮ ಆದೇಶ ಪಾಲಿಸಿ ಅಂತ ಸೂಚನೆ ನೀಡಿದೆ.
ಇನ್ನೂ ಬಿಜೆಪಿ ಗೇಮ್ ಪ್ಲಾನ್ ಏನು ಅಂತ ವಿವರಿಸೋದಾದ್ರೆ, ಸರ್ಕಾರವನ್ನ ಬೀಳಿಸಲು ಕನಿಷ್ಠ 11 ಶಾಸಕರು ರಾಜೀನಾಮೆ ಕೊಡಲೇಬೇಕು. ಆಗ 224 ಸದಸ್ಯ ಬಲದ ವಿಧಾನಸಭೆ, 213 ಸಂಖ್ಯಾಬಲಕ್ಕೆ ಕುಸಿಯುತ್ತದೆ. ಆಗ ಸರ್ಕಾರದ ಅಸ್ಥಿತ್ವಕ್ಕೆ ಕನಿಷ್ಠ 107 ಸ್ಥಾನ ಅಗತ್ಯವಾಗುತ್ತೆ. ಸದ್ಯ ಬಿಜೆಪಿ ಬಲ 105, ಇಬ್ಬರು ಪಕ್ಷೇತರರು ಸೇರಿದರೆ 107ಕ್ಕೆ ಏರಿಕೆಯಾಗಿ, ಮೈತ್ರಿ ಸರ್ಕಾರದಲ್ಲಿ 1 ಸೀಟಿನ ಕೊರತೆ ಎದುರಾಗುತ್ತೆ.
ಒಂದು ವೇಳೆ ಈ ಪ್ಲ್ಯಾನ್ ಅಂದುಕೊಂಡಂತೆ ಆದರೆ ಸುಲಭವಾಗಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ. ಹೀಗಾಗಿ ಮತ್ತೆ ಗೆಲ್ಲುವ ತಾಕತ್ತು ಇರೋ ಶಾಸಕರನ್ನ ಮಾತ್ರ ಆರಿಸಿ ರಾಜೀನಾಮೆ ಕೊಡಿಸುವ ಪ್ಲಾನ್ ನಲ್ಲಿ ಬಿಜೆಪಿ ಇದೆ. ಇದೇ ಗೇಮ್ ಪ್ಲ್ಯಾನ್ ಮಾಡಿಕೊಂಡು ಗೆಲ್ಲುವ ಕುದುರೆಗಳನ್ನ ಆಯ್ಕೆ ಮಾಡುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಜೂನ್ ಮೊದಲ ವಾರದಿಂದ ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ ಶುರುವಾಗುತ್ತದೆ ಎಂದು ಹೇಳಲಾಗುತ್ತಿದ್ದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸಂಭವಿಸುತ್ತಾ ಅಂತ ಕಾದು ನೋಡಬೇಕಾಗಿದೆ.
ಮೋದಿ ಸಂಪುಟದಲ್ಲಿ ಯಾರ್ ಯಾರಿಗೆ ಜಾಗ…? ಈ ವಿಡಿಯೋ ತಪ್ಪದೇ ನೋಡಿ.