- Advertisement -
ಮಂಡ್ಯ: ಸದಾ ಸಾಮಾಜಿಕ ಕಳಕಳಿ ಮೆರೆಯೋ ಒಂದಿಲ್ಲೊಂದು ಕೆಲಸ ಮಾಡ್ತಾ ಅಭಿಮಾನಿಗಳ ಮನಗೆದ್ದಿರೋ ದರ್ಶನ್ ಇದೀಗ ಮತ್ತೆ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯಹಸ್ತ ಚಾಚೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚುನಾವಣೆ ವೇಳೆ ಸುಮಲತಾ ನಾಮಿನೇಷನ್ ಮಾಡುತ್ತಿದ್ದಾಗ ಪ್ರಚಾರಕ್ಕೆ ಬಂದು ವಾಪಸ್ಸಾಗುವಾಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತಮ್ಮ ಅಭಿಮಾನಿಗೆ ದಚ್ಚು ನೆರವಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಪ್ರಚಾರಕ್ಕೆ ಬಂದು ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡು ಆಸ್ಪತ್ರೆ ಸೇರಿರುವ ಕಿರಣ್ ಗೆ ದರ್ಶನ್ 1 ಲಕ್ಷ ರೂಪಾಯಿ ನೀಡಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದ ಬಡ ಕುಟಂಬಕ್ಕೆ ಡಿ ಬಾಸ್ ಆರ್ಥಿಕ ಸಹಾಯ ಮಾಡಿರೋದು ದಚ್ಚು ಅಭಿಮಾನಿಗಳಲ್ಲಿ ಇನ್ನಷ್ಟು ಸಂತಸ ತಂದಿದೆ.
- Advertisement -