Saturday, October 5, 2024

Latest Posts

ಮೈತ್ರಿ ಮುರಿಯೋ ಮಾತನಾಡಿದ್ರಾ ದೇವೇಗೌಡರು?- ಸಿದ್ದು ವಿರುದ್ಧ ಯಾಕೆ ದೂರು…!?

- Advertisement -

ಬೆಂಗಳೂರು: ದೋಸ್ತಿ ಸರಕಾರದ ಆಂತರಿಕ ತಿಕ್ಕಾಟದಿಂದ ಬೇಸರಗೊಂಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪರಿಸ್ಥಿತಿ ನಿಯಂತ್ರಿಸಲು ಗಂಭೀರ ಕ್ರಮ ಕೈಗೊಳ್ಳದಿದ್ದರೆ,  ಜೆಡಿಎಸ್‌ ತನ್ನ ದಾರಿ ನೋಡಿಕೊಳ್ತೀವಿ ಅಂತ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಿವಿ ಹಿಂಡಿದ್ದಾರೆ. ಮೈತ್ರಿ ಸರಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗೋ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲಾಗಿರುವುದಾಗಿ ರಾಹುಲ್ ಗಾಂಧಿ ಬಳಿ ದೇವೇಗೌಡರು ಅಸಹನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ಸೋಮವಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್‌ ಅವರನ್ನು ದೇವೇಗೌಡರು ದಿಲ್ಲಿಯಲ್ಲಿ ಭೇಟಿಯಾಗಿದ್ರು. ರಾಜ್ಯ ರಾಜಕೀಯ ವಿದ್ಯಮಾನ, ಚುನಾವಣೆಯಲ್ಲಿ ಸೋಲು, ಸಂಪುಟ ವಿಸ್ತರಣೆ, ಪುನಾರಚನೆ  ಕುರಿತಾಗಿ ಉಭಯ ನಾಯಕರು ಸಮಾಲೋಚಿಸಿದ್ರು. ಇನ್ನು ಸಂಪುಟ ವಿಸ್ತರಣೆಗೆ ಉಂಟಾಗಿರೋ ಬಿಕ್ಕಟ್ಟಿಗೆ ಕಾರಣವೇನು ಅನ್ನೋ ಬಗ್ಗೆ ದೇವೇಗೌಡರು ರಾಹಲ್ ಗಾಂಧಿಗೆ ಮನನ ಮಾಡಿಕೊಟ್ಟಿದ್ದಾರೆ.

ಇನ್ನು ಪಕ್ಷೇತರರಿಗೆ ಸಚಿವ ಸ್ಥಾನ ಕಲ್ಪಿಸೋದಕ್ಕಾಗಿ ಶುಕ್ರವಾರ ಸಂಪುಟ ವಿಸ್ತರಣೆ ನಡೆಯಲಿದ್ದು, ಜೆಡಿಎಸ್ ಗೆ ಮತ್ತೊಂದು ಸ್ಥಾನ ನೀಡೋದಕ್ಕೆ ಲೆಕ್ಕಾಚಾರ ಭರ್ಜರಿಯಾಗಿ ನಡೀತಿದೆ. ಈ ಮಧ್ಯೆಯೇ ರಾಹುಲ್ ಗಾಂಧಿ ಭೇಟಿಯಾಗಿರುವ ದೇವೇಗೌಡರು ಸಮ್ಮಿಶ್ರ ಸರಕಾರ ಕುರಿತಾಗಿ ಅತೃಪ್ತಿ ತೋಡಿಕೊಂಡಿರೋದು ತೀವ್ರ ಕುತೂಹಲ ಕೆರಳಿಸಿದೆ. ದೇವೇಗೌಡರ ಈ ನಡೆ ಸಂಪುಟ ವಿಸ್ತರಣೆಗೆ ಅಡ್ಡಗಾಲಾಗುತ್ತಾ ಅನ್ನೋ ಸಂಶಯ ಮೂಡಿಸಿದೆ. ಇನ್ನು ತಮ್ಮ ಜೊತೆಯೇ ಇದ್ದು ಮೈತ್ರಿಗೆ ಸಂಚಕಾರ ತಂದೊಡ್ಡುತ್ತಿರೋ ಹಿತ ಶತ್ತುಗಳ ಕಾಟ ತಪ್ಪಿಸಿಕೊಳ್ಳೋದು ದೇವೇಗೌಡರ ಮೊದಲ ಆದ್ಯತೆಯಾಗಿದೆ.

ಮೈತ್ರಿ ಸರ್ಕಾರದಲ್ಲಿ ಯಾರ್ ಯಾರಿಗೆ ಸಿಗುತ್ತೆ ಮಂತ್ರಿ ಸ್ಥಾನ???ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=Yh3aNgduDKI
- Advertisement -

Latest Posts

Don't Miss